ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪಿತವಿನಂ ಪುತ್ರನುಮ್ ಚಿತ್ರದ ವಿಷಯದಲ್ಲಿ ನಿಮ್ಮ ಅಂತರಾತ್ಮ ಏನು ಹೇಳುತ್ತದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ
ನಟ ಪ್ರಕಾಶ್ ರಾಜ್
ತಮಿಳು ನಟ ಕಮಲ್ ಹಾಸನ್
ಇಂಧನ ಸಚಿವ ಡಿ.ಕೆ.ಶಿವಕುಮಾರ್…
ಇವರೆಲ್ಲ ಸೇರಿ ಹಲವು ಮುಖಂಡರು, ನಟರು, ಎಡಬಿಡಂಗಿಗಳು, ಬುದ್ಧಿಜೀವಿಗಳು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆ?
ದೇಶದಲ್ಲಿ ನಾಲ್ಕೂವರೆ ಕೋಟಿ ರಜಪೂತರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂಬ ಆರೋಪದಲ್ಲಿ ಪದ್ಮಾವತಿ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ. ರಜಪೂತರು ರಾಣಿ ಪದ್ಮಾವತಿ ಇತಿಹಾಸ ತಿರುಚಲಾಗಿದೆ ಎಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಚಿತ್ರ ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಆದರೆ ಈ ಮೇಲಿನ ಮಹೋದಯರಿಗೆ ಮಾತ್ರ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬಿಂಬಿಸಲಾಗುತ್ತಿದೆ.
ಆದರೆ ಇವರೆಲ್ಲರೂ ಎಂದಾದರೂ ಪಿತವಿನಂ ಪುತ್ರನುಮ್ ಚಿತ್ರದ ಬಗ್ಗೆ ಮಾತನಾಡಿದ್ದನ್ನು ಕೇಳಿದ್ದೀರಿಯೇ? ಆ ಚಿತ್ರ ವಿವಾದವಾದಾಗ ಯಾರಾದರೂ ಮಾತನಾಡಿದ್ದಾರೆಯೇ? ಅದನ್ನೇಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಇವರು ಹೇಳುತ್ತಿಲ್ಲ?
ಹೌದು, ಪಿತವಿನಂ ಪುತ್ರನುಮ್ ಎಂಬ ಮಲೆಯಾಳಂ ಚಿತ್ರ 2012ರಲ್ಲಿ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿತ್ತು. ಸಿದ್ಧಾರ್ಥ್ ನಾಯರ್ ಎಂಬ ಕ್ರಿಯಾಶೀಲ ನಿರ್ದೇಶಕ ಚಿತ್ರ ನಿರ್ದೇಶಿಸಿದ್ದರು.
ಆದರೆ…
ಇದೇ ಪ್ರಗತಿಪರರು, ಬುದ್ಧಿಜೀವಿಗಳೆಲ್ಲರೂ ಚಿತ್ರವನ್ನು ವಿರೋಧಿಸಿದರು. ಬಿಡುಗಡೆ ಮಾಡಬಾರದು, ಚಿತ್ರದಿಂದ ಕ್ರಿಶ್ಚಿಯನ್ನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಬೊಬ್ಬೆ ಹಾಕಿದರು. ಕ್ರೈಸ್ತ ಪಾದ್ರಿಗಳು ಚಿತ್ರದ ವಿರುದ್ಧ ಗೊತ್ತುವಳಿ ಹೊರಡಿಸಿದರು. ಕೊನೆಗೆ ಎಲ್ಲರ ಒತ್ತಡಕ್ಕೆ ಮಣಿದ ಸೆನ್ಸಾರ್ ಮಂಡಳಿ ಬರೋಬ್ಬರಿ ಎರಡು ವರ್ಷ ಚಿತ್ರ ನಿಷೇಧಿಸಿ ಆದೇಶಿಸಿದರು.
ಅದಕ್ಕೆ ಇವರೆಲ್ಲ ನೀಡಿದ ಕಾರಣ, ಚಿತ್ರದಿಂದ ಕ್ರಿಶ್ಚಿಯನ್ನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು. ಅಷ್ಟಕ್ಕೂ ಆರೋಪವೇನು ಗೊತ್ತಾ?
ಚಿತ್ರದಲ್ಲಿ ಇಬ್ಬರು ಕ್ರೈಸ್ತ ನನ್ ಗಳು ಚರ್ಚಿನ ನಿಬಂಧನೆಗಳಿಗೆ ತಿಲಾಂಜಲಿ ಇಟ್ಟು ಸಾಮಾನ್ಯ ಮಹಿಳೆಯರಂತೆ ಜೀವನ ಸಾಗಿಸಬೇಕು ಎಂಬ ಕನಸು ಹೊತ್ತ ಕುರಿತ ಚಿತ್ರವದು. ಆದರೆ ಅದೇ ಚಿತ್ರಕ್ಕೆ ಮುಳುವಾಯಿತು. ಮಹಿಳೆಯರಿಬ್ಬರು ಸಾಮಾನ್ಯರಂತೆ ಬುದುಕುವ ಕುರಿತು ಬಯಕೆ ವ್ಯಕ್ತಪಡಿಸುವ ಕಲ್ಪನಾತೀತ ಕತೆಯನ್ನೇ ಕೊಂದು ಚಿತ್ರ ನಿಷೇಧಿಸಲಾಯಿತು. ಹಾಗಂತ ವಿರೋಧಿಸುವವರು ಯಾರೂ ಚಿತ್ರ ನೋಡಿರಲಿಲ್ಲ ಎಂಬುದೇ ಸೋಜಿಗ!
ಆದರೆ ಈಗ, ಮುಸ್ಲಿಂ ದೊರೆ ಅಲ್ಲಾವುದ್ದೀನ್ ಖಿಲ್ಜಿ ಹಾಗೂ ರಜಪೂತರ ರಾಣಿ ನಡುವೆ ಆತ್ಮೀಯ ದೃಶ್ಯಗಳು ಪದ್ಮಾವತಿ ಚಿತ್ರದಲ್ಲಿ ಚಿತ್ರಿಸಲಾಗಿದೆ ಎಂದು ರಜಪೂತರು ಆರೋಪಿಸಿದ್ದಾರೆ. ಇತಿಹಾಸ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಚಿತ್ರ ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಬರೋಬ್ಬರಿ ಐದು ರಾಜ್ಯಗಳು ಈ ಚಿತ್ರ ಪ್ರದರ್ಶನ ನಿಷೇಧಿಸಿದ್ದಾರೆ. ಆದರೆ ಇದು ಘನವೆತ್ತ ಸಿದ್ದರಾಮಯ್ಯರಿಗೆ ಮಾತ್ರ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂಬಂತೆ ಮಾತನಾಡುತ್ತಿದ್ದಾರೆ.
ಈಗ ಹೇಳಿ, ಈ ಇಬ್ಬಂದಿತನಕ್ಕೆ ಏನೆನ್ನಬೇಕು?
Leave A Reply