• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಪಳನಿಸ್ವಾಮಿ ಬಣಕ್ಕೆ ಎರಡೆಲೆ ಚಿಹ್ನೆ, ಶಶಿಕಲಾಗೆ ಮತ್ತೊಂದು ಹಿನ್ನಡೆ

TNN Correspondent Posted On November 23, 2017
0


0
Shares
  • Share On Facebook
  • Tweet It

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ಮತ್ತೊಂದು ಹಿನ್ನಡೆಯಾಗಿದ್ದು, ಎಐಎಡಿಎಂಕೆ ಪಳನಿಸ್ವಾಮಿ ಬಣಕ್ಕೆ ಎರಡೆಲೆ ಚಿಹ್ನೆ ಸಿಕ್ಕಿದೆ.

ಪಳನಿ ಸ್ವಾಮಿ ಬಣಕ್ಕೆ ಎರಡೆಲೆ ಚಿಹ್ನೆ ನೀಡಲು ಚುನಾವಣೆ ಆಯೋಗ ತೀರ್ಮಾನಿಸಿದ್ದು, ವಿವಾದಕ್ಕೆ ತೆರೆ ಎಳೆದಿದೆ. ಜಯಲಲಿತಾ ನಿಧರಾದ ಬಳಿಕ ಶಶಿಕಲಾ ಹಾಗೂ ಪಳನಿಸ್ವಾಮಿ ಬಣಗಳು ಎಐಎಡಿಎಂಕೆ ಪಕ್ಷದ ಚಿಹ್ನೆಗಾಗಿ ಕದನ ಶುರುವಿಟ್ಟುಕೊಂಡಿದ್ದವು. ಅಲ್ಲದೆ ವಿವಾದ ಬಗೆಹರಿಸುವಂತೆ ಇದೇ ತಿಂಗಳ ಆರಂಭದಲ್ಲಿ ಚುನಾವಣೆ ಆಯೋಗಕ್ಕೆ ಲಿಖಿತ ಮನವಿ ಮಾಡಿದ್ದವು. ಈ  ಹಿನ್ನೆಲೆಯಲ್ಲಿ ನಿರ್ಧಾರ ಪ್ರಕಟಿಸಿರುವ ಚುನಾವಣೆ ಆಯೋಗ ಎರಡೆಲೆ ಚಿಹ್ನೆಯನ್ನು ಪಳನಿಸ್ವಾಮಿ ಬಣಕ್ಕೆ ನೀಡಲು ನಿರ್ಧಿರಿಸಿದೆ.

ಎರಡೆಲೆ ಚಿಹ್ನೆಯನ್ನು ಶಶಿಕಲಾ ಬಣಕ್ಕೆ ನೀಡಬೇಕು ಎಂದು ಶಶಿಕಲಾ ಸಂಬಂಧಿ ಟಿಟಿವಿ ದಿನಕರನ್ ಚುನಾವಣೆ ಆಯೋಗಕ್ಕೆ ಮನವಿ ಮಾಡಿದ್ದರಾದರೂ ಫಲಿಸಿಲ್ಲ. ಅಲ್ಲದೆ, ಟಿಟಿವಿ ದಿನಕರನ್ ಎರಡೆಲೆ ಚಿಹ್ನೆ ಪಡೆಯಲು ಚುನಾವಣೆ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಜೈಲು ಸಹ ಸೇರಿದ್ದರು. ಆದಾಗ್ಯೂ ಪ್ರಸ್ತುತ ಶಶಿಕಲಾ ನಟರಾಜನ್ ಸಹ ಅಕ್ರಮ ಆಸ್ತಿ ಗಳಿಕೆ ಹಗರಣದಲ್ಲಿ ಜೈಲುಪಾಲಾಗಿದ್ದಾರೆ.

ಇತ್ತೀಚೆಗಷ್ಟೇ ಜಯಲಲಿತಾ ವಾಸಿಸುತ್ತಿದ್ದ ಪೋಯೆಸ್ ಗಾರ್ಡನ್ ನಿವಾಸದ ಮೇಲೆ ಐಟಿ ದಾಳಿ ಮಾಡಿ ಅಪಾರ ಹಣ ವಶಪಡಿಸಿಕೊಂಡಿತ್ತು.

 

 

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search