ರಾಹುಲ್ ಗಾಂಧಿ ಯಾರೋ ಗೊತ್ತಿಲ್ಲ, ಚುನಾವಣೆ ವೇಳೆ ಮಾತ್ರ ಕಾಣಿಸಿಕೊಳ್ಳುತ್ತಾರೆ: ಹೀಗೆ ಹೇಳಿದ್ದು ಯಾರು ಗೊತ್ತಾ?
ರಾಹುಲ್ ಗಾಂಧಿ…
ಹೀಗೆ ಹೇಳುತ್ತಲೇ ಕಾಂಗ್ರೆಸ್ಸಿಗರು ಎಚ್ಚೆತ್ತುಕೊಳ್ಳುತ್ತಾರೆ. ಅವರು ರಾಷ್ಟ್ರೀಯ ನಾಯಕ ಎನ್ನುತ್ತಾರೆ. ಯುವಜನತೆಯ ಮುಕುಟಮಣಿ ಎನ್ನುತ್ತಾರೆ. ರಾಹುಲ್ ಗಾಂಧಿಯೂ ಎಲ್ಲಿಯೇ ಜನ ಸೇರಲಿ, ಮೈಕ್ ಸಿಗಲಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಾರೆ ಹಾಗೂ ನಗೆಪಾಟಲಿಗೀಡಾಗುತ್ತಾರೆ.
ಇಂಥ ರಾಹುಲ್ ಗಾಂಧಿ ಅವರನ್ನೇ ಯಾರೋ ಗೊತ್ತಿಲ್ಲ ಎಂದಿದ್ದಾರೆ ಗುಜರಾತ್ ವಿದ್ಯಾರ್ಥಿಗಳು…
ಹೌದು, ದಿ ಪ್ರಿಂಟ್ ವೆಬ್ ಪೋರ್ಟಲ್ ಕಾಲೇಜು ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಗಳ, ಅದರಲ್ಲೂ ಮೊದಲ ಬಾರಿಗೆ ವೋಟ್ ಮಾಡಲಿರುವ ವಿದ್ಯಾರ್ಥಿಗಳ ಸಂದರ್ಶನ ಮಾಡಿದೆ. ಅದರಲ್ಲಿ ವಿದ್ಯಾರ್ಥಿಗಳು ರಾಹುಲ್ ಗಾಂಧಿ ಯಾರು ಅಂತ ಗೊತ್ತಿಲ್ಲ ಎಂದಿದ್ದಾರೆ.
ರಾಜ್ ಕೋಟ್ ನ ಆತ್ಮೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ಲಾಲಜಿ ಆ್ಯಂಡ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಗುಜರಾತಿನಲ್ಲಿ ಬಿಜೆಪಿ ಅಭಿವೃದ್ಧಿ ಮಾಡಿದ ವಿಷಯದ ಕುರಿತು ಮಾತನಾಡಿದರೆ, ಪಿ.ಡಿ.ಮಾಳವೀಯ ಕಾಲೇಜು ವಿದ್ಯಾರ್ಥಿಗಳಂತೂ ರಾಹುಲ್ ಯಾರು ಅಂತಲೇ ಗೊತ್ತಿಲ್ಲ ಎಂದಿದ್ದಾರೆ.
ಪಿ.ಡಿ.ಮಾಳವೀಯ ಕಾಲೇಜಿನ ಕಾಮರ್ಸ್ ವಿದ್ಯಾರ್ಥಿಗಳಾದ ಹಾರ್ದಿಲ್ ಸೋಲಂಕಿ ಹಾಗೂ ವೀರೇಂದ್ರ ಮೋರಿ ಎಂಬ ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ಬಗ್ಗೆ ವೆಬ್ ಪೋರ್ಟಲ್ ಪ್ರಶ್ನೆ ಕೇಳಿದ್ದಕ್ಕೆ, “ರಾಹುಲ್ ಗಾಂಧಿ ಯಾರೋ ಗೊತ್ತಿಲ್ಲ, ಅವರು ಚುನಾವಣೆ ವೇಳೆ ಮಾತ್ರ ಕಾಣಿಸಿಕೊಳ್ಳುತ್ತಾರೆ” ಎಂದಿದ್ದಾರೆ.
ಮುಂದಿನ ತಿಂಗಳಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಹುಲ್ ಗಾಂಧಿಯವರು ಕಾಂಗ್ರೆಸ್ ಗೆಲ್ಲಿಸುವ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಾಧಿಸುವ ತಂತ್ರ ರೂಪಿಸಿದ್ದಾರೆ. ಆದರೆ ಗುಜರಾತಿನಲ್ಲಿ ಮತ ಹಾಕುವ ವಿದ್ಯಾರ್ಥಿಗಳೇ ರಾಹುಲ್ ಯಾರು ಎಂದು ಕೇಳಿರುವುದು ರಾಹುಲ್ ಗಾಂಧಿ ಪ್ರಭಾವ, ನಾಯಕತ್ವವನ್ನೇ ಪ್ರಶ್ನಿಸುವಂತಿದೆ.
Leave A Reply