ಉಗ್ರ ಹಫೀಜ್ ಸಯೀದ್ ಬಿಡುಗಡೆಗೆ ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ, ಇಂಥವರಿಗೆ ಏನೆನ್ನಬೇಕು?
ಲಖನೌ: ಭಾರತದಲ್ಲಿ ಪಾಕಿಸ್ತಾನಿ ಪ್ರೇಮಿಗಳಿಗೆ, ದೇಶದ್ರೋಹಿಗಳಿಗೆ ಏನೂ ಬರವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇತ್ತೀಚೆಗೆ ಪಾಕಿಸ್ತಾನ ಗೃಹಬಂಧನದಲ್ಲಿದ್ದ ಜಮಾತ್ ಉದ್ ದವಾ ಉಗ್ರ ಸಂಘಟನೆ ಮುಖ್ಯಸ್ಥ, ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಬಿಡುಗಡೆಗೊಳಿಸಿದ್ದು, ಇದಕ್ಕೆ ಭಾರತದ ಉತ್ತರ ಪ್ರದೇಶದಲ್ಲಿ ಕೆಲವು ಮುಸ್ಲಿಮರು ಸಂತಸ ವ್ಯಕ್ತಪಡಿಸಿದ್ದಾರೆ.
ಲಖಿಂಪುರ ಖೇರಿಯ ಬೇಗಮ್ ಭಾಗ್ ಕಾಲೋನಿಯಲ್ಲಿ ಹಫೀಜ್ ಸಯೀದ್ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕೆಲವು ಮುಸ್ಲಿಮರು ಹೊರಬಂದು ಸಂಭ್ರಮಾಚರಣೆ ಮಾಡಿದ್ದಲ್ಲದೇ, “ಹಫೀಜ್ ಸಯೀದ್ ಜಿಂದಾಬಾದ್”, “ಪಾಕಿಸ್ತಾನ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ.
ಇದನ್ನು ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಲ್ಲದೇ, ಪರಿಸ್ಥಿತಿ ನಿಭಾಯಿಸಿದ್ದಾರೆ. ಸಂಭ್ರಮಾಚರಣೆ ಮಾಡುವವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಸುಮಾರು 20-25 ಮುಸ್ಲಿಂ ಯುವಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.
ಭಾರತದಲ್ಲೇ ಇದ್ದು, ಇಲ್ಲಿಯ ಅನ್ನ ತಿಂದು, ನಮ್ಮ ದೇಶದ ಸರ್ಕಾರದ ಸೌಲಭ್ಯ ಪಡೆದು, ಬೇರೆ ದೇಶವನ್ನು ಬೆಂಬಲಿಸುವ, ಉಗ್ರನ ಬಿಡುಗಡೆಗೆ ಖುಷಿ ಪಡುವ ಇಂಥ ಮನಸ್ಥಿತಿಯವರಿಗೆ ಏನೆನ್ನಬೇಕು?
Leave A Reply