ಹಿಂದೂಗಳ ಹಬ್ಬ ನಿಷೇಧಿಸಿದಾಗ ಅಭಿವ್ಯಕ್ತಿ ಸ್ವಾತಂತ್ರ್ಯ ಮರೆತ ಮಮತಾ ಪದ್ಮಾವತಿ ಚಿತ್ರಕ್ಕೆ ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಛೇ!
ತನ್ನ ಮಾನಪಮಾನವನ್ನೇ ಅರಿಯದ ಮಮತಾ ಬ್ಯಾನರ್ಜಿ ಈಗ ಪದ್ಮಾವತಿ ಚಿತ್ರ ಪ್ರದರ್ಶಿಸಲು ಸನ್ನದಳಾಗಿದ್ದಾರೆ.
ಪದ್ಮಾವತಿ ವಿವಾದ ಪೂರ್ವ ನಿರ್ಧರಿತ ಸಂಚು. ಒಂದು ರಾಜಕೀಯ ಪಕ್ಷ ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಇದನ್ನು ನಾವು ಖಂಡಿಸಬೇಕು. ಚಿತ್ರರಂಗದ ಎಲ್ಲರೂ ಇದರ ವಿರುದ್ಧ ಹೋರಾಡಬೇಕು.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಟ್ವೀಟ್ ನವೆಂಬರ್ 19)
ಹೀಗೆ ಒಬ್ಬ ಮಹಾನ್ ಮಹಿಳೆ, ತನ್ನ ವಂಶದ, ಮಾನ ಮರ್ಯಾದೆ ಮತ್ತು ಘನತೆಯನ್ನು ಎತ್ತಿಹಿಡಿದಿದ್ದ ಮಹಾರಾಣಿ ಪದ್ಮಾವತಿಯ ಇತಿಹಾಸವನ್ನೇ ಬದಲಿಸಿದ ಚಿತ್ರಕ್ಕೆ ಮಮತಾ ಬ್ಯಾನರ್ಜಿ ತೋಳೆರಿಸಿ, ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸದಾ ಹಿಂದೂಗಳ ಮಾರಣ ಹೋಮ ನಡೆಯುತ್ತಿದ್ದರೂ, ನವರಂದ್ರಗಳನ್ನು ಮುಚ್ಚಿಕೊಂಡು ಕೊಳಕ ವಲಸಿಗರನ್ನು ಬೆಂಬಲಿಸುವ ಮಮತಾ ಈಗ ದೇಶದ ಮಹಾನ ರಾಣಿಯೊಬ್ಬಳ ಇತಿಹಾಸವನ್ನೇ ತಿರುಚಿದ್ದ ಚಿತ್ರ ಪ್ರದರ್ಶಿಸಲು ಸಿದ್ಧಳಾಗಿರುವುದು ಬೌದ್ಧಿಕ ದಾರಿದ್ರ್ಯ, ಹೀನ ಮತ್ತು ತುಷ್ಟೀಕರಣ ರಾಜಕೀಯದ ಮತ್ತೊಂದು ಮುಖ ಅಷ್ಟೇ.
ಕೋಟ್ಯಂತರ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಮಾದರಿಯಾದ ಪದ್ಮಾವತಿಯನ್ನೆ ಅಪಮಾನ ಮಾಡಿದ್ದ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ಬೊಬ್ಬೆ ಹಾಕುತ್ತಿದ್ದಾರೆ ಬ್ಯಾನರ್ಜಿ. ಆದರೆ ಅದೇ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮಾರಣ ಹೋಮ ನಿರಂತರವಾಗಿ ನಡೆಯುತ್ತಿದೆ, ಹಿಂದೂ ಹಬ್ಬಗಳ ಆಚರಣೆಗೆ ಸರ್ಕಾರವೇ ನಿಷೇಧ ಹೇರುತ್ತದೆ. ಹಿಂದೂಗಳಿಗೆ ಅವರ ಹಬ್ಬ ಆಚರಣೆಯ ಸ್ವಾತಂತ್ರ್ಯವನ್ನೇ ಕಸಿದುಕೊಂಡ ಮಮತಾ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ನೈತಿಕತೆ ಹೊಂದಿದ್ದಾರೆಯೇ.
ತನ್ನ ಸಮಾಜದ ಸಂಸ್ಕೃತಿಯ ರಾಯಭಾರಿಯಾಗಿರುವ, ಮಾನಪಮಾನಗಳಿಗಾಗಿ, ರಾಜ್ಯದ ಉಳಿವಿಗಾಗಿ ಜೀವನ ನೀಡಿದ ಪದ್ಮಾವತಿಯನ್ನು ಕೆಟ್ಟದಾಗಿ ಬಿಂಬಿಸಿದರೇ ಯಾರು ಸುಮ್ಮನಿದ್ದಾರು ಹೇಳಿ. ಯಾರ ಮನೆಯ ಹೆಣ್ಣುಮಗಳ ಗೌರವಕ್ಕೆ ತುಸು ಧಕ್ಕೆ ಬಂದರೂ ತಲೆಗಳೇ ಉರುಳುತ್ತವೆ. ಹೆಣ್ಣನ್ನು ತಾಯಿ ಸ್ಥಾನದಲ್ಲಿಟ್ಟು ಪೂಜಿಸುವ ಸಮಾಜ ನಮ್ಮದು. ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ರಣರಂಗದಲ್ಲಿ ಜೀವ ಬಿಡುತ್ತೇನೆ ಹೊರತು ಮಾನ ಬಿಡೆನು ಎಂದು ಜೀವ ನೀಡಿದ ಪದ್ಮಾವತಿಯ ಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಲಾದೀತೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನಮ್ಮ ಸಂವೇದನೆಗಳನ್ನು ಬಲಿ ನೀಡಿ ಬದುಕು ನಡೆಸುವುದು ಎಷ್ಟರ ಮಟ್ಟಿಗೆ ಸಾಧು ಎಂಬುದನ್ನು ಮಮತಾ ಹೇಳಲೇ ಬೇಕು.
ಮಮತಾ ತನ್ನ ಮಾನವನ್ನೇ ಹರಾಜಿಗಿಟ್ಟರೇ ಸುಮ್ಮನಿರುವರೇ… ಈಗ ಪದ್ಮಾವತಿ ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲಿ ಎಲ್ಲ ವ್ಯವಸ್ಥೆ ಮಾಡುತ್ತೇನೆ ಎಂದು ಘೋಷಿಸಿರುವ ಮಮತಾ ತನ್ನ ಮನೆಯ ಹೆಣ್ಣುಮಗಳ ಮಾನವನ್ನು ಹರಾಜಿಗಿಟ್ಟು ಚಿತ್ರ ತೆಗೆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನಡು ರಸ್ತೆಯಲ್ಲಿ ಪ್ರದರ್ಶನ ಏರ್ಪಡಿಸುತ್ತಾರೆಯೇ?.. ಮೊದಲು ಪಶ್ಚಿಮಬಂಗಾಳದಲ್ಲಿ ಹಿಂದೂಗಳಿಂದ ಕಸಿದುಕೊಂಡಿರುವ ಸ್ವಾತಂತ್ರ್ಯ ನೀಡಿ, ಅವರಿಗೆ ಸೂಕ್ತ ರಕ್ಷಣೆ ನೀಡಿ ಆಮೇಲೆ ತುಷ್ಠೀಕರಣ ರಾಜಕಾರಣವನ್ನು ಮುಂದುವರಿಸಿ. ಅದನ್ನೆಲ್ಲ ಬಿಟ್ಟು ವಿನಾಕಾರಣ ನಾಲ್ಕು ವಲಸಿಗರು ವೋಟು ಹಾಕುತ್ತಾರೆ ಎಂದು ತಲೆಕೆಟ್ಟವರಂತೆ ಮಾತನಾಡಬೇಡಿ. ಯಾರ್ಯಾರದ್ದೋ ಮಾನ ತೆಗೆದ ಚಿತ್ರವನ್ನು ಪ್ರದರ್ಶಿಸಲು ಸಿದ್ಧರಾಗುತ್ತಿರಲಿಲ್ಲ.
Leave A Reply