ಜಿಪಿಎಲ್ ಕ್ರಿಕೆಟ್ ಉತ್ಸವ-2018

ಬಹುನಿರೀಕ್ಷಿತ ದ್ವೀತಿಯ ವರ್ಷದ ಜಿಪಿಎಲ್ ಕ್ರಿಕೆಟ್ ಉತ್ಸವ-2018 ಫೆಬ್ರವರಿ 3 ಮತ್ತು 4 ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಹುಲ್ಲುಹಾಸಿನ ಮೈದಾನದಲ್ಲಿ ನಡೆಯಲಿದೆ. ಅದಕ್ಕೆ ಪೂರ್ವಬಾವಿಯಾಗಿ ತಂಡಗಳ ಮಾಲೀಕರಿಂದ ಆಟಗಾರರ ಏಲಂ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು
.
ಖಾಸಗಿ ಹೋಟೇಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈ ತಂಡದ ಮಾಲೀಕರು ಸೇರಿದಂತೆ ಒಟ್ಟು ಎಂಟು ತಂಡಗಳ ಮಾಲೀಕರು, ಸಹಮಾಲೀಕರು, ಪ್ರತಿ ತಂಡದ ಸ್ಟಾರ್ ಆಟಗಾರರು ಭಾಗವಹಿಸಿದ್ದರು. ಒಟ್ಟು 128 ಆಟಗಾರರ ಏಲಂ ನಡೆಯಿತು.
ಈ ಬಾರಿ ಫೈನಲ್ ಗೆದ್ದ ತಂಡಕ್ಕೆ 2,22,222 ರೂಪಾಯಿ ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ 1,77,777 ರೂಪಾಯಿ ಮತ್ತು ಟ್ರೋಫಿ, ದ್ವೀತಿಯ ರನ್ನರ್ ಅಪ್ ತಂಡಕ್ಕೆ 1,11,111 ರೂಪಾಯಿ ಮತ್ತು ಟ್ರೋಫಿ ಮತ್ತು ಸರಣಿ ಶ್ರೇಷ್ಟ ಆಕರ್ಶಕ ಬಹುಮಾನ ಸಿಗಲಿದೆ. ಹೈದ್ರಾಬಾದ್ ಮೂಲದ ಫುಜ್ಲಾನಾ ಕಂಪೆನಿ ಟ್ರೂನ್ ಮೆಂಟ್ ನ ಪ್ರಾಯೋಜಕತ್ವ ವಹಿಸಿದ್ದು, ಎರಡು ದಿನ ಕೂಡ ಆಟ ವೀಕ್ಷಿಸಲು ಆಗಮಿಸುವ ಕ್ರೀಡಾಸಕ್ತರಿಗೆ ಜಿಎಸ್ ಬಿ ಸಮುದಾಯದ ಆಕರ್ಶಕ ತಿಂಡಿ ತಿನಿಸುಗಳನ್ನು ಉಣಬಡಿಸಲಾಗುವುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave A Reply