ಪದ್ಮಾವತಿ ಬಿಡುಗಡೆಯಾಗಲು ಬಿಡಲ್ಲ, ಚಿತ್ರ ನಿಷೇಧಿಸಿದ 6ನೇ ಮುಖ್ಯಮಂತ್ರಿ ನಿತೀಶ್ ಕುಮಾರ್!
ಪಟನಾ: ಆರಂಭದಿಂದಲೇ ವಿವಾದವನ್ನೇ ಮೈಮೇಲೆ ಹೊದ್ದುಕೊಂಡು ಬಂದಿರುವ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಬಿಡುಗಡೆಗೆ ಮತ್ತೊಂದು ಕಂಟಕವಾಗಿದ್ದು, ಬಿಹಾರದಲ್ಲಿ ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪದ್ಮಾವತಿ ಚಿತ್ರ ಬಿಡುಗಡೆಗೆ ಹಲವು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ಪ್ರಶ್ನೆ ಕೇಳುತ್ತಿದ್ದಾರೆ. ಹಾಗಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಮ್ಮ ನಿಲುವು ಹಾಗೂ ಚಿತ್ರದ ಕುರಿತು ಸ್ಪಷ್ಟನೆ ನೀಡಬೇಕು. ಅಲ್ಲಿಯವರೆಗೂ ರಾಜ್ಯದಲ್ಲಿ ಚಿತ್ರ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಚಿತ್ರ ಬಿಡುಗಡೆಗೆ ಇದುವರೆಗೂ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಪಂಜಾಬಿನ ಅಮರಿಂದರ್ ಸಿಂಗ್, ರಾಜಸ್ಥಾನದ ವಸುಂಧರಾ ರಾಜೆ, ಗುಜರಾತಿನ ವಸುಂಧರಾ ರಾಜೆ ಚಿತ್ರವನ್ನು ಆಯಾ ರಾಜ್ಯಗಳಲ್ಲಿ ನಿಷೇಧಿಸಿದ್ದರು. ಈಗ ಈ ಪಟ್ಟಿಗೆ ನಿತೀಶ್ ಕುಮಾರ್ ಸಹ ಸೇರಿದ್ದಾರೆ.
ಆದಾಗ್ಯೂ, ಪದ್ಮಾವತಿ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿಷೇಧಿಸಲು ಸಲ್ಲಿಸುವಂತೆ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ್ದು, ಚಿತ್ರದ ಕುರಿತು ಸೆನ್ಸಾರ್ ಮಂಡಳಿಯೇ ನಿರ್ಧಾರ ಕೈಗೊಳ್ಳಲಿ. ಅಲ್ಲಿಯವರೆಗೂ ಯಾರೂ ಈ ವಿಷಯದ ಕುರಿತು ಮಾತನಾಡುವುದು ಬೇಡ ಎಂದಿದೆ.
ರಜಪೂತರ ಭಾವನೆಗಳಿಗೆ ಧಕ್ಕೆ ತರುವ ದೃಶ್ಯಗಳು ಚಿತ್ರದಲ್ಲಿವೆ ಎಂಬ ಕಾರಣಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ.
Leave A Reply