ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜಾಗತಿಕವಾಗಿ ಭಾರತದ ಸ್ಥಾನಮಾನ ಬದಲಾಗಿದ್ದಾದರೂ ಹೇಗೆ?
ದೇಶದಲ್ಲಿ ಚುನಾವಣೆ ಬಂದ ಬಳಿಕ ಹಾಗೂ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿನ ಒಂದೇ ಕೆಲಸ ಎಂದರೆ, ಅದು ನರೇಂದ್ರ ಮೋದಿ ಅವರನ್ನು ವಿನಾಕಾರಣ ತೆಗಳುವುದು. ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಮೋದಿ ಅವರನ್ನು ತೆಗಳಿದರೂ, ಟೀಕೆ, ಅವಮಾನ ಮಾಡಿದರೂ, ಪ್ರಧಾನಿಯವರ ಘನತೆ, ಕೀತಿ, ಜನರ ಬೆಂಬಲ, ಪ್ರಭಾವ ಮಾತ್ರ ದುಪ್ಪಟ್ಟಾಗುತ್ತಲೇ ಇದೆ. ಅದಕ್ಕೆ ಕಳೆದ ಮೂರು ವರ್ಷಗಳಲ್ಲಿ ಅಂತಾರಾಷ್ಟ್ರೀಯವಾಗಿ ಭಾರತಕ್ಕೆ ಸಿಕ್ಕ ಮನ್ನಣೆಯೇ ಸಾಕ್ಷಿಯಾಗಿದೆ. ಈ ಮೂರೂವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಮನ್ನಣೆಗಳಾವವು ಎಂಬುದರ ಪಟ್ಟಿ ಇಲ್ಲಿದೆ.
ಉದ್ಯಮ ಕೈಗೊಳ್ಳುವುದು ಸರಾಗ
ವಿಶ್ವಬ್ಯಾಂಕೇ ನೀಡುವ ಯಾವುದೇ ದೇಶದಲ್ಲಿ ಉದ್ಯಮ ಆರಂಭಿಸುವಲ್ಲಿ ಇರುವ ಸರಳ ನಿಯಮಗಳ ಪೈಕಿ ಭಾರತ 32ನೇ ಸ್ಥಾನಕ್ಕೇರಿದೆ. ಎಂದರೆ ಪ್ರಸ್ತುತ ಭಾರತದ ಸ್ಥಾನ 132ರಿಂದ 100ಕ್ಕೆ ಏರಿದೆ. ಒಂದೇ ವರ್ಷದಲ್ಲಿ ಜಗತ್ತಿನ ಯಾವ ರಾಷ್ಟ್ರವೂ ಇಷ್ಟು ಅಂಕ ಏರಿಲ್ಲ. ಮೋದಿ ಸರ್ಕಾರ ಮಾತ್ರ ಇದನ್ನು ಸಾಧಿಸಿದ್ದು.
ಸ್ಪರ್ಧೆಯಲ್ಲೂ ಭಾರತ ಮುಂದು
ವರ್ಲ್ಡ್ ಎಕನಾಮಿಕ್ ಫೋರಂ ಸಂಸ್ಥೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಕ್ಕದಲ್ಲಿ ಭಾರತ ಕಳೆದ ಎರಡು ವರ್ಷಗಳಲ್ಲಿ 32 ಸ್ಥಾನ ಮೇಲಕ್ಕೇರಿದೆ. ಇದು ಯಾವುದೇ ರಾಷ್ಟ್ರ ಗಳಿಸಬಹುದಾದ ಉತ್ತಮ ಶ್ರೇಯಾಂಕವಾಗಿದೆ.
ನಾವೀನ್ಯದ ಚಿಂತನೆಯಲ್ಲಿ ಪ್ರಾಬಲ್ಯ
ಅಮೆರಿಕದ ವಿಪೋ ಸಂಸ್ಥೆ ನೀಡುವ ಗ್ಲೋಬಲ್ ಇನೋವೇಶನ್ ಸೂಚ್ಯಂಕದಲ್ಲಿ ಭಾರತ ಪ್ರಸಕ್ತ ಸಾಲಿನಲ್ಲಿ 21 ಅಂಕ ಮೇಲೇರಿದೆ. ದೇಶದಲ್ಲಿ ಜನರ ನವ ಚಿಂತನೆ, ಸರ್ಕಾರದ ಹೊಸ ಹೊಸ ಐಡಿಯಾ, ಯೋಜನೆಗಳು ಈ ಸೂಚ್ಯಂಕದಲ್ಲಿ ಏರಿಕೆ ಕಾಣಲು ಸಾಧ್ಯವಾಗಿದೆ.
ಸಾಗಣೆ ಪ್ರಮಾಣದಲ್ಲೂ ಎತ್ತಿದ ಕೈ
ವಿಶ್ವ ಬ್ಯಾಂಕ್ 2016ರಲ್ಲಿ ಜಾಗತಿಕವಾಗಿ ಸಾಗಣೆ ಪ್ರಮಾಣದ ಸೂಚ್ಯಂಕ ಪಟ್ಟಿ ಬಿಡುಗಡೆಗೊಳಿಸಿದ್ದು, ಭಾರತ 19 ಸ್ಥಾನ ಮೇಲೇರಿ ಪ್ರಸ್ತುತ 35ನೇ ಸ್ಥಾನ ಪಡೆದಿದೆ. ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಯಲ್ಲಿದ್ದರೂ, ವಹಿವಾಟಿನ ದೃಷ್ಟಿಯಿಂದ ಭಾರತ ಸರಕು ಸಾಗಣೆ ಮಾಡುತ್ತಿರುವುದು ಏರಿಕೆಗೆ ಕಾರಣ ಎನ್ನಲಾಗಿದೆ.
ವಿದೇಶಿ ಬಂಡವಾಳ, ಅದೂ ಹೇರಳ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಬರೀ ವಿದೇಶ ಸುತ್ತುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ. ಆದರೆ ಮೋದಿ ವಿದೇಶ ಸುತ್ತಿ ಬರೀ ಗೈಯಲ್ಲಿ ಬಂದಿಲ್ಲ. 2016-17ನೇ ಸಾಲಿನಲ್ಲಿ ಭಾರತದಲ್ಲಿ ಹೂಡಿಕೆಯಾಗುವ ಪ್ರಮಾಣ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶೇ.67ರಷ್ಟು ಜಾಸ್ತಿಯಾಗಿದೆ.
ನಂಬಿಕಸ್ಥ ಸರ್ಕಾರ
ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಇತ್ತೀಚೆಗೆ ನೀಡಿರುವ ವರದಿ ಪ್ರಕಾರ ಭಾರತ ಸರ್ಕಾರ ವಿಶ್ವದ ಮೂರನೇ ವಿಶ್ವಾಸಾರ್ಹ ಸರ್ಕಾರ ಎಂದು ತಿಳಿಸಿದೆ. ಶೇ.73ರಷ್ಟು ಭಾರತೀಯರು ಮೋದಿ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರಂತೆ.
ಒಟ್ಟಿನಲ್ಲಿ ಈ ಎಲ್ಲ ಅಂಕಿ-ಅಂಶಗಳನ್ನು ನೋಡುವುದಾದರೆ, ಕೇಂದ್ರ ಸರ್ಕಾರದ ಹಗರಣ ರಹಿತ, ಅಭಿವೃದ್ಧಿ ಕೇಂದ್ರಿತ ಆಡಳಿತ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ದಿಟ್ಟ ನಿರ್ಧಾರಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ.
Leave A Reply