ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದ ಕಾಂಗ್ರೆಸ್ ನಾಯಕನ ಮನದಾಳ ಹೈಕಮಾಂಡ್ ಕೇಳುವುದೇ?
ಮುಂಬೈ: ‘ಮುಂದೆ ನಡೆಯಲಿರವ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಅದು ಚುನಾವಣೆಯೇ ಅಲ್ಲ, ಅದೊಂದು ನಾಚಿಕೆಗೇಡಿನ ಚುನಾವಣೆ ಪ್ರಕ್ರಿಯೆ. ಅಲ್ಲಿ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ. ಅವರೇ ವಿಜಯಿಯಾಗುತ್ತಾರೆ ಎಂಬ ಪ್ರಕ್ರಿಯೇ ಹೀನವಾದದ್ದು’
ಹೀಗೆ ಕಾಂಗ್ರೆಸ್ ಕುಟುಂಬ ಪ್ರಾಬಲ್ಯಕ್ಕೆ ಸಿಡಿದೆದ್ದವರು ಪ್ರತಿಪಕ್ಷದವರಲ್ಲ. ಮಹಾರಾಷ್ಟ್ರದ ಕಾಂಗ್ರೆಸ್ ನ ಹಿರಿಯ ನಾಯಕ ಶಾಹಾಜಾದ್ ಪೂನಾವಾಲಾ. ನಾನು ಹೇಳುವುದರಲ್ಲಿ ಸ್ಪಷ್ಟತೆ ಇದೆ. ನನ್ನ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಹೈಕಮಾಂಡ್ ವಿರುದ್ಧವೇ ಶಾಹಾಜಾದ್ ಗುಡುಗಿದ್ದಾರೆ.
ಕೆಲವು ಮುಖಂಡರು ಸುಮ್ಮನೇ ಹೋಗಿ ವೋಟ್ ಹಾಕಿ ಬರುತ್ತಾರೆ. ಅವರೆಲ್ಲರೂ ಇವರಿಗೆ ವೋಟ್ ಹಾಕಬೇಕು ಎಂದು ನಿರ್ಧಾರವಾಗಿರುತ್ತದೆ. ಅವರು ತಮ್ಮ ನಿಷ್ಠೆಯನ್ನು ಮಿತಿಮೀರಿ ತೋರಿಸುತ್ತಾರೆ. ನಾನು ಧೈರ್ಯದಿಂದ ಮಾತನಾಡಿದರೆ. ನನ್ನ ವಿರುದ್ಧವೇ ಎಲ್ಲ ನಾಯಕರು ಮುಗಿ ಬೀಳುತ್ತಾರೆ. ಆದರೆ ನಾನು ವಾಸ್ತವವನ್ನು ಮಾತನಾಡುತ್ತಾನೆ. ಇಡಿ ಪ್ರಕ್ರಿಯೇ ಬಗ್ಗೆ ದಾಖಲೆ ಹೊಂದಿದ್ದೇನೆ ಎಂದು ಹೈಕಮಾಂಡ್ ಸಂಸ್ಕೃತಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಮೊದಲು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಅಡ್ಡ ಮಾರ್ಗ ಬಿಟ್ಟು ನೇರವಾಗಿ ಚುನಾವಣೆ ಎದುರಿಸಲಿ. ಮತ್ತೊಬ್ಬರಿಗೂ ಅವಕಾಶ ನೀಡಲಿ. ಆಗ ನಾನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಪೂನಾವಾಲ್ ‘ನಾನು ಪೂರ್ವಾಗ್ರಹ ಪೀಡಿತ, ಕಾಟಾಚಾರದ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ನೇರವಾಗಿ, ನ್ಯಾಯಯುತವಾಗಿ ಚುನಾವಣೆ ನಡೆಸಿದರೆ, ನಾನು ಸ್ಪರ್ಧಿಸುತ್ತೇನೆ. ಮತದಾನ ಮಾಡಲು ಬರುವ ನಾಯಕರು ಮತ್ತೊಬ್ಬರ ಕೈಗೊಂಬೆಯಾಗಿದ್ದರೆ, ಚುನಾವಣೆ ನಡೆಸುವುದೇ ವ್ಯರ್ಥ ಎಂದು ಹೇಳಿದ್ದಾರೆ.
ಅಲ್ಲದೇ ತಳಮಟ್ಟದಿಂದ ಪಕ್ಷ ಸಂಘಟಿಸಿ, ಪಕ್ಷಕ್ಕಾಗಿ ಶ್ರಮಿಸುತ್ತಿರುವ ಕಾರ್ಯಕರ್ತರಿಗೆ ಸೂಕ್ತ ಸ್ಥಾನ, ಮಾನ ದೊರೆಯುತ್ತಿಲ್ಲ. ಪಕ್ಷದಲ್ಲಿ ಕೆಲವೇ ಕುಟುಂಬಗಳು ಅಧಿಕಾರ ಅನುಭವಿಸುತ್ತೀವೆ. ರಾಹುಲ್ ಗಾಂಧಿ ಅವರೇ ನೀವು ಒಂದೇ ಒಂದು ಸ್ಥಾನವನ್ನು ಚುನಾವಣೆ ಮೂಲಕ ಪಡೆದಿಲ್ಲ. ಬರೀ ನಿಮ್ಮ ಕುಟುಂಬದ ಹೆಸರಿನಿಂದಲೇ ಸ್ಥಾನ ಪಡೆದಿದ್ದೀರಿ. ಅಲ್ಲದೇ ಇತರ ನಾಯಕರಂತೆ ಆಕರ್ಷಕ ಮಾತುಗಾರಿಕೆಯೂ ಇಲ್ಲ. ಉಪಾಧ್ಯಕ್ಷನಾಗಿ, ಕುಟುಂಬದ ಕುಡಿಯಾಗಿ ಸ್ಪರ್ಧಿಸದೇ ಸಾಮಾನ್ಯ ಕಾರ್ಯಕರ್ತನಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂದು ರಾಹುಲ್ ಗಾಂಧಿಗೆ ಬುದ್ಧಿವಾದ ಹೇಳಿದ್ದಾರೆ.
Leave A Reply