ಪಾಕ್ ಸೈನ್ಯ ಸದಾ ಉಗ್ರರನ್ನು ಬೆಂಬಲಿಸುತ್ತದೆ ಅದರಲ್ಲಿ ಹೊಸತೇನಿಲ್ಲ: ಸುಬ್ರಮಣಿಯನ್ ಸ್ವಾಮಿ
ದೆಹಲಿ: ಪಾಕಿಸ್ತಾನ ಸೈನ್ಯ ಸದಾ ಭಯೋತ್ಪಾದಕರನ್ನು ಬೆಂಬಲಿಸುತ್ತದೆ. ಅದರಲ್ಲಿ ಹೊಸತೇನು ಇಲ್ಲ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಮುಖ್ಯಸ್ಥ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಗೃಹ ಬಂಧನ ಕುರಿತು ಮಾತನಾಡಿ, ಆತನಿಗೆ ಬೆಂಬಲ ವ್ಯಕ್ತಪಡಿಸಿದ್ದ. ‘ನಾನು ಜಮಾತ್ ಉದ್ ದಾವಾ ಸಂಘಟನೆಯ ಬಹುದೊಡ್ಡ ಅಭಿಮಾನಿ ಮತ್ತು ಬೆಂಬಲಿಗ. ನಾನು ಅದರ ಕಾರ್ಯಚಟುವಟಿಕೆಗಳನ್ನು ಮೆಚ್ಚುತ್ತೇನೆ ಮತ್ತು ಅವರು ನನ್ನನ್ನು ಮೆಚ್ಚುತ್ತಾರೆ ಎಂದು ಹೇಳಿದ್ದ.
ಮುಷರಫ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ ‘ಪಾಕಿಸ್ತಾನ ಸೈನ್ಯ ಯಾವಾಗಲು ಉಗ್ರರನ್ನು ಬೆಂಬಲಿಸುತ್ತಿದೆ. ಅವರ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಮುಷರಫ್ ಹೇಳಿದರಲ್ಲಿ ಯಾವುದೇ ಹೊಸತನವಿಲ್ಲ ಎಂದು ಹೇಳಿದ್ದರು.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನಕ್ಕೆ ಒಳಪಡಿಸಬೇಕು ಎಂದು ವಿಶ್ವಸಮುದಾಯ ಆಗ್ರಹಿಸಿದಕ್ಕೆ ಮುಷರಫ್ ಸಯೀದ್ ನನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ. ಮುಷರಫ್ ಹೇಳಿಕೆಗೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಅಲ್ಲದೇ ಪಾಕಿಸ್ತಾನದ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿದ್ದಾನೆ ಎಂಬುದು ಪಾಕಿಸ್ತಾನ ನಿಜ ಬಣ್ಣ ಬಯಲು ಮಾಡಿದಂತಾಗಿದೆ.
Leave A Reply