ಹಾದಿಯಾ ಆಯ್ಕೆಯೇ ಸರಿಯಿರಲಿಲ್ಲ ಎಂಬುದಕ್ಕೆ ಇಲ್ಲಿದೆ ಮತ್ತೊಂದು ಸಾಕ್ಷಿ! ಜಹಾನ್ ಗಿತ್ತಾ ಉಗ್ರರ ನಂಟು?
ಕೇರಳದ ಹಿಂದೂ ಯುವತಿ ಅಖಿಲಾ ಅಶೋಕನ್, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ, ಶಫಿನ್ ಜಹಾನ್ ನನ್ನು ಮದುವೆಯಾಗುತ್ತಲೇ ಲವ್ ಜಿಹಾದ್, ಮತಾಂತರ, ಕೋರ್ಟು, ತಂದೆ-ತಾಯಿಗೆ ನೋವು… ಹೀಗೆ ಹಲವು ದುಃಖದ ಸಂಗತಿ ನಡೆದವು. ಕೊನೆಗೆ ಸುಪ್ರೀಂ ಕೋರ್ಟ್ ಹಾದಿಯಾ (ಅಖಿಲಾ ಅಶೋಕನ್) ಹೇಳಿಕೆ ಪಡೆದು ಮಾನ್ಯತೆ ನೀಡಿದರೂ, ಹಾದಿಯಾಗೆ ಗಂಡನನ್ನು ಭೇಟಿಯಾಗಲು ಕಷ್ಟವಾಯಿತು. ಇದೆಲ್ಲ ಮುಗಿಯುತ್ತಲೇ ಈಗ ಮತ್ತೊಂದು ಪ್ರಕರಣ ಸುದ್ದಿಯಾಗಿದ್ದು, ಅಖಿಲಾ ಅಶೋಕನ್ ಆಯ್ಕೆಯೇ ಸರಿಯಿರಲಿಲ್ಲವಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಹೌದು, ಹಾದಿಯಾ ಗಂಡ ಶಫಿನ್ ಜಹಾನ್ ಮದುವೆಗೂ ಮೊದಲು ಐಸಿಸ್ ಉಗ್ರ ಸಂಘಟನೆಯ ಇಬ್ಬರ ಜತೆ ಸಂಪರ್ಕ ಇಟ್ಟುಕೊಂಡಿದ್ದ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಹಿರಂಗಗೊಳಿಸಿದೆ.
ಐಸಿಸ್ ನಿಂದ ಪ್ರೇರೇಪಣೆಗೊಂಡಿರುವ ಉಮರ್ ಅಲ್ ಹಿಂದಿ ಎಂಬ ಉಗ್ರ ಸಂಘಟನೆಯಾಗಿದ್ದು, ಇದು ದೇಶದ ಗಣ್ಯರ ಮೇಲೆ ದಾಳಿ ನಡೆಸುವ ಸಂಚು ಹೊತ್ತಿದೆ. ಇದರ ಕಾರ್ಯಕರ್ತರಾದ ಪಿ.ಶಫ್ವಾನ್ ಹಾಗೂ ಮನ್ಸೀದ್ ಎಂಬುವವರ ಜತೆ ಜಹಾನ್ ಸಂಪರ್ಕ ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ. ಶಫ್ವಾನ್ ಹಾಗೂ ಮನ್ಸೀದ್ ಅವರನ್ನು ಕಳೆದ ಅಕ್ಟೋಬರ್ ನಲ್ಲಿ ಬಂಧಿಸಲಾಗಿತ್ತು.
ಅಲ್ಲದೆ ಹಾದಿಯಾ ಹಾಗೂ ಶಫಿನ್ ಅವರ ಮದುವೆಯನ್ನು ಇವರೇ ಮಾಡಿಸಿರಬಹುದು ಎಂದು ಸಹ ಎನ್ಐಎ ಅನುಮಾನ ವ್ಯಕ್ತಪಡಿಸಿದೆ. ಹಾದಿಯಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ, ಮತಾಂತರವಾಗಿದ್ದು ಅವರ ತಂದೆ ಅಶೋಕನ್ ಗೆ ಇಷ್ಟವಿರಲಿಲ್ಲ ಹಾಗೂ ನನ್ನ ಮನೆಯಲ್ಲಿ ಭಯೋತ್ಪಾದಕಿಯೊಬ್ಬಳು ಇರುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
Leave A Reply