ಸಿದ್ದರಾಮಯ್ಯ ತಮ್ಮ ಜಿಲ್ಲೆಯಲ್ಲಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿ ಹನುಮ ಜಯಂತಿ ತಡೆದರಾ?
ಇಂತಹದ್ದೊಂದು ಸಣ್ಣ ಅನುಮಾನ ಮೈಸೂರಿನ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಸದಾ ಕಾಡುತ್ತಿದೆ. ಜಿಲ್ಲೆಯಲ್ಲಿ ಏಕೆ ಪದೆ ಪದೆ ನಿಷೇದಾಜ್ಞೆ ಹೇರಲಾಗುತ್ತಿದೆ. ಕೋಮು ಗಲಭೆ ನೆಪದಲ್ಲಿ, ಹೋರಾಟಗಳನ್ನು ನೆಪವಾಗಿಟ್ಟುಕೊಂಡು ನಿರಂತರವಾಗಿ ಬಂದ್, ನಿಷೇದಾಜ್ಞೆ ಹೇರುವ ಪ್ರಕ್ರಿಯೆ ನಡೆಯುತ್ತಿದೆ. ಶಾಂತಿ, ಪ್ರೀತಿ, ಪ್ರೇಮ ಮತ್ತು ಸಾಹಿತ್ಯದಿಂದ ಸಮೃದ್ಧವಾದ ಜಿಲ್ಲೆಯಲ್ಲಿ ಇದೆಂಥಾ ದಿನಗಳು ಬಂದವು ಎಂಬ ಸಣ್ಣ ಪ್ರಶ್ನೆ ಮೂಡದೆ ಇರದು.
ಮೈಸೂರು ಜೆಡಿಎಸ್ ಮತ್ತು ಕಾಂಗ್ರೆಸ್ ಬಲಿಷ್ಠವಾಗಿರುವ ಜಿಲ್ಲೆ. ಅಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ನೆಲೆಯೇನು ಇರಲಿಲ್ಲ. ತೀರಾ ಇತ್ತೀಚೆಗೆ ಅಂದ್ರೆ 2014 ಲೋಕಸಭೆ ಚುನಾವಣೆಯಲ್ಲಿ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಸಂಸದರಾಗಿ ಆಯ್ಕೆಯಾದರು. ನಂತರ ಶುರುವಾಯಿತು ನೋಡಿ ಮೈಸೂರಿನ ಕಾಂಗ್ರೆಸ್ಸಿಗರಲ್ಲಿ ಹೊಸ ಭೀತಿ.
ಪ್ರಬಲ ರಾಷ್ಟ್ರವಾದಿ, ಹಿಂದುತ್ವದ ಪ್ರತಿಪಾದಕ ಪ್ರತಾಪ್ ಸಿಂಹ ಕಾಂಗ್ರೆಸ್ ಅಧಿಕಾರದಲ್ಲೇ ಇರುವ ರಾಜ್ಯದಲ್ಲಿ, ಅದೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜಿಲ್ಲೆಯಲ್ಲೇ ಗೆದ್ದಿರುವುದು ಸಹಿಸಿಕೊಳ್ಳಲು ಆಗಲೇ ಇಲ್ಲ. ಆಗಿನಿಂದಲೂ ಪ್ರತಾಪ್ ಸಿಂಹ ಸೇರಿ ಬಿಜೆಪಿಯನ್ನು ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ಮತ್ತು ಅವರ ಕೃಪಾಪೋಷಿತ ಆಡಳಿತ ವರ್ಗ ಪ್ರಯತ್ನಿಸುತ್ತಲೇ ಬಂತು. ಹುಣಸೂರಿನ ಹನುಮ ಜಯಂತಿ ತಡೆಹಿಡಿಯಲು ಕೋಮುಗಲಭೆಗೆ ಸೃಷ್ಟಿ ಎಂದು ಷರಾ ಬರೆದಿರುವುದು ಕೇವಲ ನೆಪ ಮಾತ್ರ. ಅದರ ಹಿಂದೆ ಕಾಂಗ್ರೆಸ್ಸಿಗೆ ದೊಡ್ಡ ಹೊಡೆತ ಬೀಳುವ ಎಲ್ಲ ಭೀತಿಗಳು ಇದ್ದವು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಮೈಸೂರು ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭೆ ಕ್ಷೇತ್ರಗಳಿವೆ ಅದರಲ್ಲಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಒಬ್ಬನೇ ಒಬ್ಬ ಬಿಜೆಪಿ ಶಾಸಕನಿಲ್ಲದಿದ್ದರೂ ಸಂಸದನಾಗಿ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಮೇಲೆ ಸಿದ್ದರಾಮಯ್ಯ ಅವರ ಒಂದು ಕಣ್ಣು ಸದಾ ಇದ್ದೇ ಇದೆ. ಅದು ಪದೇ ಪದೆ ಸಾಬೀತಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರಕ್ಕೆ ಸಿಎಂ ಅವರ ಜಿಲ್ಲೆಯಲ್ಲಿ ನೆಲೆ ಉಳಿಸಿಕೊಳ್ಳಬೇಕು ಎಂಬ ಶತಪತ ಪ್ರಯತ್ನ ನಡೆಸುತ್ತಿದೆ. ಅದಕ್ಕೊಂದಿಷ್ಟು ಉದಾಹರಣೆ ಮತ್ತು ಕಾರಣಗಳು ಇರಬೇಕಲ್ಲವೇ?
- ಹುಣಸೂರಿನಲ್ಲಿ ಹನುಮ ಜಯಂತಿ ತಡೆಯದಿದ್ದರೇ ಎಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು ಬಿಜೆಪಿಯತ್ತ ವಾಲುತ್ತಾರೋ ಎಂಬ ಭೀತಿ
- ಪ್ರತಾಪ್ ಸಿಂಹ ಹೀಗೆ ಒಂದಿಲ್ಲೊಂದು ಯಾತ್ರೆ, ಸಮಾವೇಶಗಳ ಮೂಲಕ ಹೆಸರು ಮಾಡಿಕೊಂಡರೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ಎರವಾಗುತ್ತಾರೆ ಎಂಬ ಆತಂಕ.
- ಅಹಿಂದ ನಾಯಕ, ಸಿದ್ದರಾಮಯ್ಯರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬಂದಿದ್ದ ಎಚ್. ಆರ್. ವಿಶ್ವನಾಥ್ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಅವರು ಕುರುಬ ಸಮುದಾಯದ ಮುಖಂಡ. ವಿಶ್ವನಾಥ್ ಎಲ್ಲಿಯೇ ಹೋದರು ಸಿದ್ದರಾಮಯ್ಯ ಮಾಡಿರುವ ವಿಶ್ವಾಸ ದ್ರೋಹದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಅಲ್ಲಿಗೆ ಸಿಎಂ ಸಿದ್ದರಾಮಯ್ಯಗೆ ಮೈಸೂರು ಭಾಗದಲ್ಲಿ ದೊಡ್ಡ ಹೊಡೆತ ಬಿದ್ದಿತು.
- ಸಿದ್ದರಾಮಯ್ಯ ಬಲಗೈ ಬಂಟನಂತಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ರನ್ನು ಯಶಸ್ವಿಯಾಗಿ ಹೊರಗೆ ಹಾಕಿದರು ಸಿದ್ದರಾಮಯ್ಯ. ಶ್ರೀನಿವಾಸ್ ಪ್ರಸಾದ್ ಗೆ ಅನ್ಯಾಯ ಮಾಡಿದ್ದರಿಂದ ಸಹಜವಾಗಿ ದಲಿತ ಸಮುದಾಯ ಸಿಎಂ ವಿರುದ್ಧ ಮುನಿಸಿಕೊಂಡಿದೆ.
- ಕುರುಬ ಸಮುದಾಯದ ಎಚ್ ವಿಶ್ವನಾಥ್ ಮತ್ತು ದಲಿತ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ರನ್ನು ಕಳೆದುಕೊಂಡು ಸಿಎಂ ಕಂಗಾಲಾಗಿದ್ದು. ಬಿಜೆಪಿಯ ಹೋರಾಟಗಳನ್ನು ಹತ್ತಿಕ್ಕಿ ಮತ್ತಿಷ್ಟು ಜನರನ್ನು ಕಳೆದುಕೊಳ್ಳದಿರಲು ತನ್ನ ಎಲ್ಲ ಶಕ್ತಿ ಕಾಂಗ್ರೆಸ್ ಬಳಸುತ್ತಿದೆ.
- ಇನ್ನು ಸಾಹಿತಿಕವಾಗಿ ಶ್ರೀಮಂತವಾಗಿರುವ ಮೈಸೂರಿನಲ್ಲಿ ಸಾಹಿತ್ಯ ಸಮ್ಮೇಳನ ಆಯೋಜಿಸಿರುವ ಹಿಂದೆ ಇರುವ ಕಾರಣವೂ ಸ್ಪಷ್ಟ. ಆ ಮೂಲಕ ಜಿಲ್ಲೆಯ ಸಾತ್ವಿಕ ವಲಯವನ್ನು ಸೆಳೆಯುವ ಸಣ್ಣ ಪ್ರಯತ್ನವನ್ನು ಸಿಎಂ ಮಾಡಿದ್ದರು. ಆದ್ರೆ ಸಭಾಧ್ಯಕ್ಷ ಚಂಪಾ ಸಿಎಂ ಲಾಭದ ಯೋಚನೆಗೆ ಮಣ್ಣು ಹಾಕಿದ್ರು.
- ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಯಲ್ಲಿ ಅನುಕಂಪ ಮತ್ತು ಇಡೀ ಆಡಳಿತವನ್ನೇ ಕಾಂಗ್ರೆಸ್ ಪ್ರಚಾರಕ್ಕೆ ಬಳಸಿ, ಶತ ಶತ ಪ್ರಯತ್ನಿಸಿ ಗೆಲವು ಸಾಧಿಸಿದರು. ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಹರಸಾಹಸ ಪಟ್ಟಿತು ಸಿದ್ದರಾಮಯ್ಯ ಅಂಡ ಟೀಮ್. ಈ ಚುನಾವಣೆಯಲ್ಲಿ ಬಿಜೆಪಿ ಸೆಡ್ಡು ಹೊಡೆದ ರೀತಿಯೇ ಕಾಂಗ್ರೆಸ್ ನ ಅಧಃಪತನಕ್ಕೆ ಸಾಕ್ಷಿಯಾಯಿತಲ್ಲವೇ?
ಇಷ್ಟೇಲ್ಲಾ ಆದ ನಂತರವೂ ಸಿದ್ದರಾಮಯ್ಯ ಹೇಗಾದರೂ ಮಾಡಿ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಭೀತಿಯಲ್ಲಿ ವಿಶೇಷವಾಗಿ ಮುಸ್ಲಿಂ ತುಷ್ಟೀಕರಣ ಮಾಡುತ್ತಾ, ಅದಿಷ್ಟಾದರೂ ಮತಗಳು ಕಾಂಗ್ರೆಸ್ ಗೆ ಉಳಿಯಲು ಎಂದು ಪ್ರತಿ ಪಕ್ಷಗಳ ಹೋರಾಟಗಳನ್ನು, ಸಮಾವೇಶಗಳನ್ನು ಹತ್ತಿಕುವುದು, ತಡೆಯುವ ಕಾರ್ಯವನ್ನು ಮಾಡುತ್ತಿರುವುದು ಸರ್ಕಾರವೊಂದರ ವಿಶ್ವಾಸಘಾತುಕತನವಲ್ಲದೇ ಮತ್ತೇನಲ್ಲ.
Leave A Reply