ತಪ್ಪು ತಪ್ಪಾಗಿ ಟ್ವೀಟ್ ಮಾಡಿ ಬೆಪ್ಪಾದ ರಾಹುಲ್ ಗಾಂಧಿ…
ದೆಹಲಿ: ಕಾಂಗ್ರೆಸ್ ನಿರ್ಧರಿತ ಅಧ್ಯಕ್ಷ ರಾಹುಲ್ ಗಾಂಧಿ ಎಡವಟ್ಟುಗಳ ಮೂಲಕವೇ ಹೆಸರುವಾಸಿ ಮತ್ತು ಭಾರತ ಕೋಟ್ಯಂತರ ಜನರಿಗೆ ಅಪಹಾಸ್ಯದ ವಸ್ತುವಾಗಿಬಿಟ್ಟಿದ್ದಾರೆ. ಅದು ಅವರಿಗೆ ಪದೇ ಪದೆ ಘಟಿಸುತ್ತಿದೆ. ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ನಿಂಧಿಸುವ ಭರದಲ್ಲಿ ದಿನಸಿ ವಸ್ತುಗಳ ಬಗ್ಗೆ ಪ್ರಕಟಿಸಿದ್ದ ಟ್ವೀಟ್ ನಲ್ಲಿ ಬೇಕಾಬಿಟ್ಟಿಯಾಗಿ ದರಗಳನ್ನು ಲಿಸ್ಟ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮೇಲೋಂದು ಆಕ್ರೋಶದ ನುಡಿ ಬರೆದಿದ್ದಾರೆ. ತಪ್ಪನ್ನು ಗುರುತಿಸಿ ಹಾಸ್ಯ, ಅಪಹಾಸ್ಯಗಳು ಬರುತ್ತಲೇ ಆಫಿಸ್ ಆಫ್ ಆರ್ ಜಿ ಮೂಲ ಟ್ವೀಟ್ ಅಳಿಸಿ, ಮತ್ತೊಂದು ಟ್ವೀಟ್ ಪ್ರಕಟಿಸಿದ್ದಾರೆ.
ಟ್ವಿಟರ್ ನಲ್ಲಿ ತಾವು ಪ್ರಕಟಿಸಿದ್ದ ದಿನಸಿ ವಸ್ತುಗಳ ದರ ವಾಸ್ತವಕ್ಕೆ ಬಹುದೂರ ಎಂಬುದನ್ನು ಟ್ವಿಟ್ಟಿಗರು ಹಾಸ್ಯ ಮಾಡಿದ್ದರು. ರಾಹುಲ್ ನಿಮಗೆ ವಾಸ್ತವದ ಅರಿವಿಲ್ಲ. ಅದ್ಯಾಕೆ ಸುಮ್ಮನೆ ಟ್ವೀಟ್ ಮಾಡುತ್ತೀರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೇ, ಕೆಲವರು ಪಾಪ ಅವರಿಗೇನು ಗೊತ್ತು ರಸ್ತೆ ಬದಿಯಲ್ಲಿ ಮಾರಾಟವಾಗುವ ದಿನಸಿ ವಸ್ತುಗಳ ಬೆಲೆ. ಸುಮ್ಮನೇ ಕಾಟಾಚಾರಕ್ಕೆ ವಿರೋಧಕ್ಕಾಗಿ ಟ್ವೀಟ್ ಮಾಡುತ್ತಾರೆ. ಪಾಪಚ್ಚಿ ಎಂದು ಕಾಲೆಳೆದಿದ್ದಾರೆ.
ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿಗೆ ಈ ಟ್ವೀಟ್ ಭಾರಿ ಇರಿಸು ಮುರಿಸು ಉಂಟು ಮಾಡಿತ್ತು. ರಾಹುಲ್ ಟ್ವೀಟ್ ಗೆ ‘ರಾಹುಲ್ ಗಾಂಧಿ ದಾಖಲೆಗಳಿಲ್ಲದ, ವಾಸ್ತವಕ್ಕೆ ದೂರವಾದ ಅಂಕಿಅಂಶಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ನೀಡುವಂತಿಲ್ಲ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿ ಮಾಡಿದ ಚಿತ್ರವನ್ನು ಟ್ವೀಟ್ ಮಾಡಿ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಎಂದು ಅಡಿ ಬರಹ ಬರೆದಿದ್ದರು. ಅದೂ ತೀವ್ರ ಹಾಸ್ಯಕ್ಕಿಡಾಗಿ ಹಲೋ ರಾಹುಲ್ ಅವರು ಮಾಜಿ ಅಧ್ಯಕ್ಷರು, ಅಧ್ಯಕ್ಷರಲ್ಲ ಎಂದು ಟ್ವಿಟ್ಟಿಗರು ಕಾಲೆಳೆದ್ದರು.
Leave A Reply