ಆರ್ ಎಸ್ ಎಸ್ ನಲ್ಲಿ ಮಹಿಳೆಯರು ಚಡ್ಡಿ ಹಾಕಿದ್ದನ್ನು ರಾಹುಲ್ ನೋಡಿಲ್ಲ!
Posted On October 10, 2017
ಭಾರತದ ಚಿರಯುವಕ ರಾಹುಲ್ ಬಾಬಾ ಅಮೇರಿಕಾ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮುಗಿಸಿ ಭಾರತಕ್ಕೆ ಬಂದ ನಂತರ ಹೊಸತೊಂದು ಸಂಶೋಧನೆ ಮಾಡಿದ್ದಾರೆ. ಅದೇನೆಂದರೆ ಬಿಜೆಪಿಯ ಹಿಂದಿರುವ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಮಹಿಳೆಯರೇ ಇಲ್ಲ. ಇದ್ದಿದ್ರೆ ಆರ್ ಎಸ್ ಎಸ್ ಶಾಖೆಗಳಲ್ಲಿ ಮಹಿಳೆಯರು ಚಡ್ಡಿ ಹಾಕಿ ಭಾಗವಹಿಸಿರುವುದನ್ನು ನೋಡಿದ್ದೀರಾ? ನಾನಂತೂ ನೋಡಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಮಾತಿನ ಬಾಣವನ್ನು ಎಸೆದಿದ್ದಾರೆ. ಈ ಮೂಲಕ ಭಾರತೀಯ ಸಂಸ್ಕೃತಿ ತನ್ನದಲ್ಲ, ತನ್ನದೇನಿದ್ದರೂ ಇಟಲಿಯ ರಕ್ತ ಎಂದು ಮತ್ತೆ ಸಾಬೀತು ಪಡಿಸಿದ್ದಾರೆ.
ಇನ್ನೊಮ್ಮೆ ಸೋನಿಯಾ ತನ್ನ ಮಗನನ್ನು ಅಮೇರಿಕಾ, ಚೀನಾಕ್ಕೆ ಕಳುಹಿಸುವ ಮೊದಲು ಯೋಚಿಸುವುದು ಒಳ್ಳೆಯದು. ಇಲ್ಲದಿದ್ದರೆ ಇವತ್ತು ಮಹಿಳೆಯರನ್ನು ಚಡ್ಡಿಯಲ್ಲಿ ನೋಡಿಲ್ಲ ಎಂದಿರುವವನು ನಾಳೆ ಕರ್ನಾಟಕದಲ್ಲಿರುವ ಗೋಮಟೇಶ್ವರ ಸ್ವಾಮಿಯೇ ಭಾರತೀಯ ಅಲ್ಲ. ಆತ ಎನ್ ಆರ್ ಐ. ಒಂದು ವೇಳೆ ಭಾರತೀಯ ಆಗಿದ್ದರೆ ಯಾವುದೇ ಭಾರತೀಯ ಮಹಿಳೆ ಯಾಕೆ ಹಾಗೆ ವಿವಸ್ತ್ರಳಾಗಿ ನಿಂತಿಲ್ಲ ಎಂದು ಕೇಳಬಹುದು. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದರೆ ದಯವಿಟ್ಟು ಅವರನ್ನು ಕಾಂಗ್ರೆಸ್ಸಿಗರು ಯಾವುದೇ ಜೈನ ಮುನಿಗಳ ಹತ್ತಿರ ಕಳುಹಿಸಬೇಡಿ. ಇಲ್ಲದಿದ್ದರೆ ಅಲ್ಲಿ ಕೂಡ ಏನೇನೂ ಹೇಳಬಹುದು.
ಆರ್ ಎಸ್ ಎಸ್ ನಲ್ಲಿ ಪುರುಷರು ಇದ್ದಂತೆ ಮಹಿಳೆಯರಿಗೋಸ್ಕರವೇ ರಾಷ್ಟ್ರ ಸೇವಿಕಾ ಸಮಿತಿ ಇದೆ ಎನ್ನುವುದನ್ನು ರಾಹುಲ್ ಗೆ ಯಾರಾದರೂ ಹೇಳಬೇಕು. ಸಂಘದಲ್ಲಿ ಇರುವ ಸಮವಸ್ತ್ರದ ಹಿಂದೆ ಇರುವ ಇತಿಹಾಸವನ್ನು ರಾಹುಲ್ ಗೆ ತಿಳಿಸುವ ಅವಶ್ಯಕತೆ ಇದೆ. ಸಂಘ ತನ್ನ ಶಾಖೆಗಳಲ್ಲಿ ಪುರುಷರೇ ಮಾಡುವ ಆಸನಗಳನ್ನು ಕಲಿಸುತ್ತದೆ. ಅಲ್ಲಿ ವ್ಯಾಯಾಮ, ದಂಡ, ಕಬಡ್ಡಿ, ಉಡಾನ್, ಶಾರೀರ, ಯೋಗ ಮುಂತಾದ ಪುರುಷರು ತಮ್ಮ ದೇಹ, ಮನಸ್ಸುಗಳನ್ನು ಸ್ವಚ್ಚ, ದೃಢವನ್ನಾಗಿಸಲು ಅಳವಡಿಸುವ ಕ್ರಿಯೆಗಳಿವೆ. ಹಾಗೇ ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಮಹಿಳೆಯರು ಮಾಡುವಂತಹ ಆಸನಗಳನ್ನು ಅಭ್ಯಸಿಸಲಾಗುತ್ತದೆ. ರಾಹುಲ್ ಗಾಂಧಿ ಹುಟ್ಟುವ ಮೊದಲೇ ಸಂಘದ ಹಿರಿಯರು ಆಗಿನ ವ್ಯವಸ್ಥೆಗೆ ಅನುಗುಣವಾಗಿ ಸಂಘದ ಸಮವಸ್ತ್ರವನ್ನು ತಯಾರು ಮಾಡಿದ್ದರು. ಸಂಘದಲ್ಲಿ ಸಮವಸ್ತ್ರ ಚಡ್ಡಿ ಯಾಕೆ ಎಂದು ಕೇಳುವ ಅಗತ್ಯ ರಾಹುಲ್ ಗೆ ಇಲ್ಲ. ಪ್ಯಾಂಟ್ ಹಾಕಿ ಮಾಡಲು ಕಂಫರ್ಟ್ ಅಲ್ಲದ ಕಾರಣಕ್ಕಾಗಿ ಮತ್ತು ರಾಹುಲ್ ತಂದೆ ರಾಜೀವ್ ಚಡ್ಡಿ ಹಾಕಲು ಕಲಿಯುವ ಮೊದಲೇ ಶಾಖೆಗಳು ಇದ್ದ ಕಾರಣ ಅದನ್ನು ಅರಿಯದೇ ಟೀಕಿಸುವುದು ಬೇಡಾ ಎಂದು ರಾಹುಲ್ ಗೆ ಐಡಿಯಾ ಕೊಟ್ಟವರು ಹೇಳಬೇಕಿತ್ತು.
ಇನ್ನೂ ವಿದೇಶಿ ನೀಲಿ ಚಿತ್ರ ನಟಿ ನಥಾಲಿಯಾ ರಾಮೋಸ್ ಳ ಕಾಸ್ಟ್ಯೂಮ್ ನೋಡಿ ಬಂದ ಮೇಲೆ ರಾಹುಲ್ ಭಾರತೀಯ ಮಹಿಳೆಯರನ್ನು ಚಡ್ಡಿಯಲ್ಲಿ ನೋಡಲು ಬಯಸುವುದು ಎಲ್ಲೋ ಕಾಕತಾಳೀಯ ಅಲ್ಲವೆಂದು ಕಾಣಿಸುತ್ತದೆ.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply