ಮುಸ್ಲಿಮರ ಬ್ಯಾನರ್ ಮುಟ್ಟುವವರು ಇನ್ನೂ ಹುಟ್ಟಿಲ್ಲ- ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ
ಮೊನ್ನೆ ಮಂಗಳೂರಿನ ಮಸೀದಿಯೊಂದರ ರಸ್ತೆಯಲ್ಲಿ ಉದ್ದಕ್ಕೂ ರಾಜಕೀಯ ನಾಯಕರು ಈದ್ ಮಿಲಾದ್ ಹಬ್ಬಕ್ಕೆ ಶುಭ ಕೋರುವ ಫೆಕ್ಸ್ ಗಳು ರಾರಾಜಾಜಿಸುತ್ತಿದ್ದವು. ಕಾಂಗ್ರೆಸ್ ನಾಯಕರು ಶುಭ ಕೋರುವ ಬ್ಯಾನರ್, ಫ್ಲೆಕ್ಸ್ ನಡುವೆ ಒಂದು ಫ್ಲೆಕ್ಸ್ ವಿಭಿನ್ನವಾಗಿ ತೋರುತ್ತಿತ್ತು. ಅದರಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಫೋಟೋ ಹಾಕಿ ಸ್ಥಳೀಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕತ್ಥರೊಬ್ಬರು ಈದ್ ಮಿಲಾದ್ ಗೆ ಶುಭ ಕೋರುವ ಫ್ಲೆಕ್ಸ್ ಹಾಕಿದ್ದರು. ವಿಷಯ ಸಿಂಪಲ್. ಆದರೆ ಫ್ಲೆಕ್ಸ್ ಹಾಕಿದ ಮರುಕ್ಷಣದಿಂದ ಆ ಕಾರ್ಯಕತ್ಥನ ಮೊಬೈಲ್ ಗೆ ಒಂದೇ ಸಮನೆ ಬೆದರಿಕೆಯ ಕರೆ. ಆದರೆ ಆತ ಅದ್ಯಾವುದನ್ನು ಕ್ಯಾರ್ ಮಾಡಲಿಲ್ಲ. ಮಧ್ಯಾಹ್ನ ಆಗುತ್ತಿದ್ದ ಹಾಗೆ ಪೊಲೀಸ್ ಠಾಣೆಯಿಂದ ಕರೆಗಳು ಶುರು. ಆ ಫ್ಲೆಕ್ಸ್ ತೆಗೆಯಿರಿ ಎಂದು ಅತ್ತಲಿಂದ ಧ್ವನಿ.
ಇಡೀ ರಸ್ತೆಯಲ್ಲಿ ಯಾರ್ಯಾರೋ ಹಾಕಿದ ಫ್ಲೆಕ್ಸ್ ಗಳು ಹಾಗೆ ರಾರಾಜಿಸುತ್ತಿದ್ದರೆ ಅದರ ನಡುವೆ ಇರುವ ಒಂದು ಫ್ಲೆಕ್ಸ್ ನಿಂದ ಅದ್ಯಾವ ತೊಂದರೆ ಯಾರಿಗೆ ಆಗುತ್ತದೆಯೋ ದೇವರಿಗೆ ಗೊತ್ತು. ಒಂದು ವೇಳೆ ಫ್ಲೆಕ್ಸ್ ಗಳಿಂದ ಮಂಗಳೂರಿನ ಸೌಂದರ್ಯಕ್ಕೆ ದಕ್ಕೆ ಆಗುತ್ತಿದ್ದರೆ ಕಾಂಗ್ರೆಸ್ಸಿನ ಜನಪ್ರತಿನಿಧಿಗಳು, ಪದಾಧಿಕಾರಿಗಳು ಹಾಕಿದ ಫ್ಲೆಕ್ಸ್ ನಿಂದ ಸೌಂದರ್ಯ ವೃದ್ಧಿಯಾಗುತ್ತದೆಯಾ? ಕೇವಲ ಪ್ರಧಾನಮಂತ್ರಿ ಮತ್ತು ಸಂಸದರ ಫೋಟೋ ಇದ್ದ ಮಾತ್ರಕ್ಕೆ ಸ್ಥಳೀಯ ಪೊಲೀಸ್ ಠಾಣೆಯ ಮೇಲೆ ಒತ್ತಡ ಹಾಕಿ ಫ್ಲೆಕ್ಸ್ ತೆಗೆಸುವಷ್ಟು ಧಾಷ್ಟ್ಯತನ ತೋರಿಸಿದರೆ ಇನ್ನು ಕೋಮು ಸೌಹಾರ್ಧತೆ ಹೆಚ್ಚಿಸಬೇಕು ಎಂದು ಮಸೀದಿಯ ಧರ್ಮಗುರುಗಳು ವೇದಿಕೆಯ ಮೇಲೆ ಭಾಷಣ ಮಾಡುವುದು ಯಾರಿಗಾಗಿ.
ಅತ್ತ ಪ್ರಧಾನಿ, ಸಂಸದರು ಶುಭಕೋರಿದ ಫ್ಲೆಕ್ಸ್ ತೆರವು ಮಾಡಲು ಒತ್ತಡ ಹಾಕಿದ ಪೊಲೀಸ್ ಇಲಾಖೆಗೆ ಕಾವೂರು ಬಳಿ ಹಾಕಲಾದ ಈ ಫ್ಲೆಕ್ಸ್ ಕಣ್ಣಿಗೆ ಬೀಳುವುದಿಲ್ಲ ಎಂದರೆ ಆಶ್ವರ್ಯ. ಈ ಫ್ಲೆಕ್ಸ್ ನಿಂದ ಕಾವೂರಿನ ಸೌಂದರ್ಯ ಹೆಚ್ಚುತ್ತಿದೆಯಾ? ಈ ಬಗ್ಗೆ ಇಲಾಖೆ ಕ್ರಮ ತೆಗೆದುಕೊಳ್ಳಲಿ ಎಂದು ಸ್ಥಳೀಯ ಹಿಂದೂ ಜಾಗರಣ ವೇದಿಕೆಯ ಸಂಘಟನಾ ಕಾರ್ಯದಶ್ಸಿ ಚೇತನ್ ಕಾವೂರು ಹೇಳಿದರೆ ಕಾವೂರು ಪ್ರದೇಶದಲ್ಲಿ ಮುಸ್ಲಿಮರ ಬ್ಯಾನರ್ ಮುಟ್ಟುವವರು ಇನ್ನೂ ಹುಟ್ಟಿಲ್ಲ ಎನ್ನುವ ಉತ್ತರ ಕಾವೂರಿನ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗದಿಂದ ಬಂದಿದೆ. ಚೇತನ್ ಕಾವೂರು ಅವರನ್ನು ಬಜರಂಗದಳದ ನಾಯಿ ಎಂದು ಹೀಯಾಳಿಸಿರುವ ಟಿಪ್ಪು ಸುಲ್ತಾನ್ ಅಭಿಮಾನಿಗಳು ಬಹಿರಂಗವಾಗಿ ಜೀವ ಬೆದರಿಕೆ ಹಾಕಿರುವ ಘಟನೆ ಸಾಮಾಜಿಕ ತಾಣಗಳ ಮೂಲಕ ಬೆಳಕಿಗೆ ಬಂದಿದೆ. ನಮ್ಮ ಬ್ಯಾನರ್ ಮುಟ್ಟಿದರೆ ನಿಮ್ಮ ಚಟ್ಟ ಕಟ್ಟಿ ತೋರಿಸುತ್ತೇವೆ ಎಂದು ಎಚ್ಚರಿಕೆಯ ಗಂಟೆಯನ್ನು ಟಿಪ್ಪು ಅಭಿಮಾನಿಗಳು ನೀಡಿದ್ದಾರೆ.
ಹೆಸರೇ ಹೇಳುವಂತೆ ಆ ಫ್ಲೆಕ್ಸ್ ನಲ್ಲಿ ಶುಭ ಕೋರಿದ್ದು ಚೋರ್ ಸಂಘದವರು. ಅದೊಂದು ವಾಟ್ಸಪ್ ಗ್ರೂಪ್ ಆಗಿದ್ದು ಅವರೇ ಈ ಪರಿ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ ಎಂದರೆ ಈ ಕುರಿತು ಕಾವೂರು ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈದ್ ಮಿಲಾದ್ ಕಳೆದು ಐದು ದಿನಗಳಾದರೂ ಫೆಕ್ಸ್ ಅಲ್ಲಿಯೇ ಇದೆ. ಕ್ರಮ ಪ್ರಕಾರ ಅಲ್ಲಿ ಫ್ಲೆಕ್ಸ್ ಅಳವಡಿಸಿದವರೇ ಈದ್ ಮಿಲಾದ್ ಮರುದಿನ ತೆಗೆಯಬೇಕಿತ್ತು. ಆದರೆ ಈಗ ಅದನ್ನು ಮುಟ್ಟುವವರು ಇನ್ನೂ ಹುಟ್ಟಿಲ್ಲ ಎಂದು ಸವಾಲು ಹಾಕುವ ಮೂಲಕ ಪೊಲೀಸ್ ಅಧಿಕಾರಿಗಳನ್ನು ಕೂಡ ಕೆಣಕಿದ್ದಾರೆ. ಪೊಲೀಸರು ಇನ್ನೂ ಕೂಡ ಸುಮ್ಮನಿದ್ದರೆ ಟಿಪ್ಪು ಸುಲ್ತಾನ್ ಅಭಿಮಾನಿ ಬಳಗ ಹೇಳಿದ್ದು ನಿಜ ಎಂದು ಅಂದುಕೊಳ್ಳಬೇಕಾಗುತ್ತದೆ. ಅದರೊಂದಿಗೆ ಹಿಂದೂ ಸಂಘಟನೆಯವರು, ಬಿಜೆಪಿಯವರು ಫ್ಲೆಕ್ಸ್ ಹಾಕಿದರೆ ಅದನ್ನು ತೆಗೆಯಿರಿ ಎಂದು ಒತ್ತಡ ತರುವ ಪೊಲೀಸರು ಇಂತಹ ಕೃತ್ಯಗಳನ್ನು ಹೇಗೆ ಮೌನವಾಗಿ ಸಹಿಸುತ್ತಾರೆ ಎನ್ನುವುದೇ ಪ್ರಶ್ನೆ
Leave A Reply