ಶ್ರೀರಾಮ ಎನ್ನುವುದು ಸತ್ಯ, ದ್ವಾರಕನಾಥ್ ತಂದೆ ಯಾರು ಎನ್ನುವುದು ಕೇವಲ ನಂಬಿಕೆ!
ನಮ್ಮ ದೇಶದಲ್ಲಿ ಏನಾಗಿದೆ ಎಂದರೆ ಯಾರು ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೋ ಅವರು ಚಿಂತಕ, ಬುದ್ಧಿಜೀವಿ ಎಂದು ಕರೆಯಲ್ಪಡುತ್ತಾರೆ. ಯಾರು ಹಿಂದೂ ಧರ್ಮದ ಪರವಾಗಿ ಮಾತನಾಡುತ್ತಾರೋ ಅವರು ಕೋಮುವಾದಿ ಎನಿಸಿಬಿಡುತ್ತಾರೆ. ಯಾವ ವ್ಯಕ್ತಿ ಹಿಂದೂ ದೇವರ ಬಗ್ಗೆ ಕೆಟ್ಟದಾಗಿ ಹೇಳಿದ ಕೂಡಲೇ ಅವನಿಗೆ ವ್ಯಾಪಕ ಪ್ರಚಾರ ಸಿಕ್ಕಿ ಅಂತವನು ರಾತ್ರಿ ಬೆಳಗಾಗುವುದರ ಒಳಗೆ ಫೇಮಸ್ ಆಗುತ್ತಾನೆ. ಅದೇ ಹಿಂದೂ ದೇವರ ಪರವಾಗಿ ಮಾತನಾಡುವವರನ್ನು ಕೆಲವು ಮಾಧ್ಯಮಗಳು, ಸಾಮಾಜಿಕ ತಾಣಗಳು ಸೇರಿ ವಿಲನ್ ಮಾಡುತ್ತವೆ.
ಮೊನ್ನೆ ಕೂಡ ಹಾಗೆ ಆಯಿತು. ಸಿಎಸ್ ದ್ವಾರಕಾನಾಥ್ ಎನ್ನುವವರು ಶ್ರೀರಾಮ ಹುಟ್ಟಿದ್ದಕ್ಕೆ ಆಧಾರಗಳಿಲ್ಲ. ಅದೇ ಪೈಗಂಬರ್, ಏಸು, ಬುದ್ಧ ಹುಟ್ಟಿದ್ದಕ್ಕೆ ದಾಖಲೆಗಳಿವೆ ಎಂದಿದ್ದಾರೆ. ಅವರ ಹೇಳಿಕೆಯನ್ನು ತೆಗೆದುಕೊಂಡು ಕೆಲವು ಮಾಧ್ಯಮಗಳು ಮೃಷ್ಟಾನ್ನ ಭೋಜನ ಸಿಕ್ಕಿತು ಎನ್ನುವಂತೆ ಸುದ್ದಿ ಮಾಡಿ ಖುಷಿ ಪಟ್ಟಿವೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ನಮ್ಮ ದೇಶ ಮಾತ್ರವಲ್ಲ ಪ್ರಪಂಚದಲ್ಲೆಡೆ ಇರುವ ಆಸ್ತಿಕ ಬಾಂಧವರು ನಂಬುತ್ತಾರೆ. ರಾಮಾಯಣ ನಡೆದಿದೆ ಎನ್ನುವುದಕ್ಕೆ ಕುರುಹಾಗಿ ಭಾರತ ಮಾತ್ರವಲ್ಲ ಶ್ರೀಲಂಕಾ, ಕಾಂಬೋಡಿಯಾ, ಇಂಡೋನೇಶಿಯಾದಲ್ಲಿಯೂ ದಾಖಲೆಗಳು ಸಿಗುತ್ತವೆ. ಭಗವಂತ ಶ್ರೀರಾಮನ ಭವ್ಯ ದೇವಸ್ಥಾನ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇದೆ. ಅಷ್ಟೇ ಏಕೆ, ನೀವು ಶ್ರೀಲಂಕಾಕ್ಕೆ ಪ್ರವಾಸಕ್ಕೆಂದು ಹೋದರೆ ಶ್ರೀರಾಮನಿಗೆ ಸಂಬಂಧಪಟ್ಟ ಅಥವಾ ರಾಮಾಯಣದಲ್ಲಿ ಉಲ್ಲೇಖವಾಗಿರುವ ಘಟನೆಗಳು ನಡೆದಿರುವ ಪ್ರದೇಶಗಳ ವೀಕ್ಷಣೆ ಮಾಡಿಸುವ ಅಲ್ಲಿನ ಸ್ಥಳೀಯ ಟೂರಿಸ್ಟ್ ಪ್ಯಾಕೇಜುಗಳಿವೆ. ಹನುಮಂತ ದೇವರು ಲಂಕಾದಹನ ಮಾಡಿದ ಜಾಗದಲ್ಲಿ ಇವತ್ತಿಗೂ ಒಂದು ಗರಿಕೆ ಹುಲ್ಲು ಕೂಡ ಬೆಳೆಯುವುದಿಲ್ಲ ಎನ್ನುವುದನ್ನು ಅಲ್ಲಿನ ಜನ ಹೇಳುತ್ತಾರೆ. ನಮ್ಮ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಹುಟ್ಟಿದ್ದಕ್ಕೆ ಕುರುಹುಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇಷ್ಟಾದರೂ ದ್ವಾರಕನಾಥ್ ಅಂತವರು ಹೀಗೆ ಮಾತನಾಡುತ್ತಾರೆ ಎಂದರೆ ಅವರಿಗೆ ಪ್ರಚಾರದ ಗೀಳು ಹುಟ್ಟಿಕೊಂಡಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಅವರು ಮಂಗಳೂರಿನ ಪುರಭವನದಲ್ಲಿ ಕೇವಲ ಭಾಷಣ ಮಾಡಿ ಹೋಗಿದ್ದರೆ ಅದು ಸುದ್ದಿಯಾಗುವುದಿಲ್ಲ ಎಂದು ಅವರಿಗೂ ಗೊತ್ತಿದೆ. ಅದಕ್ಕೆ ವಿವಾದಾತ್ಮಕವಾಗಿ ಮಾತನಾಡಿ ಹಿಂದೆ ಭಗವಾನ್ ಎನ್ನುವ ವ್ಯಕ್ತಿ ಪಡೆಯುತ್ತಿದ್ದ ಪಬ್ಲಿಸಿಟಿಯನ್ನು ಪಡೆಯೋಣ ಎಂದು ಹೊರಟಂತೆ ಕಾಣುತ್ತದೆ. ಈಗಂತೂ ಭಗವಾನ್ ಮಾಡುವುದು ಬಿಟ್ಟಿ ಪ್ರಚಾರಕ್ಕೆ ಎಂದು ಮಾಧ್ಯಮಗಳಿಗೆ ಗೊತ್ತಾಗಿರುವ ಕಾರಣ ಯಾರೂ ಕೂಡ ಅವರ ಮಾತಿಗೆ ಬೆಲೆ ಕೊಡಲು ಹೋಗುವುದಿಲ್ಲ. ಆದ್ದರಿಂದ ಭಗವಾನ್ ಜಾಗಕ್ಕೆ ಯಾರನ್ನಾದರೂ ಬೇರೆಯವರನ್ನು ಕೂರಿಸಿ ಯುವಜನರ, ಆಸ್ತಿಕರ ಮನಸ್ಸಿನಲ್ಲಿ ಹುಳಿ ಹಿಂಡಲು ಏನಾದರೂ ಮಾಡಬೇಕಲ್ಲ ಎನ್ನುವ ಕಾರಣಕ್ಕೆ ಬುದ್ಧಿ(ಕಮ್ಮಿ)ಜೀವಿಗಳು ದ್ವಾರಕನಾಥ್ ಗೆ ಮುಂಡಾಸು ಕಟ್ಟಲು ಹೊರಟಿದ್ದಾರೆ.
ಇದರೊಂದಿಗೆ ಇನ್ನೊಂದು ವಿಷಯ ಏನೆಂದರೆ ಶ್ರೀರಾಮ ಹುಟ್ಟಿದ್ದಕ್ಕೆ ಕುರುಹು ಅಥವಾ ದಾಖಲೆ ಇಲ್ಲ ಎನ್ನುವ ಇವರು ಪೈಗಂಬರ್, ಏಸು, ಬುದ್ಧ ಹುಟ್ಟಿದ್ದಕ್ಕೆ ದಾಖಲೆ ಇದೆ ಎನ್ನುತ್ತಾರೆ. ಆ ಕಾಲಘಟ್ಟದ ಬಗ್ಗೆ ಉಲ್ಲೇಖಗಳಿವೆ ಎಂದಿದ್ದಾರೆ. ಕೆಲವು ಮನುಷ್ಯರು ತಮ್ಮ ಲಾಭಕ್ಕೆ ಯಾವ ಲೆವೆಲ್ಲಿಗೆ ಬೇಕಾದರೂ ಹೋಗುತ್ತಾರೆ ಎನ್ನುವುದಕ್ಕೆ ಸಿಎಸ್ ದ್ವಾರಕನಾಥ್ ಹೊಸ ಸಾಕ್ಷಿ. ಒಂದು ವೇಳೆ ದ್ವಾರಕನಾಥ್ ಅವರಿಗೆ ಹಿಂದೂ ಧರ್ಮ, ದೇವರ ಬಗ್ಗೆ ನಂಬಿಕೆ, ಭಕ್ತಿ ಇಲ್ಲದಿದ್ದರೆ, ತಮಗೆ ಏಸು, ಪೈಗಂಬರ್, ಬುದ್ಧ ಇವರೇ ದೇವರುಗಳು ಎಂದು ಅಂದುಕೊಂಡಿದ್ದರೆ ಅವರ ಫೋಟೋಗಳನ್ನೇ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡಲಿ ಅಥವಾ ನಮಾಜ್ ಮಾಡಲಿ ಅಥವಾ ಏನು ಬೇಕಾದರೆ ಮಾಡಲಿ. ಅದು ಅವರಿಗೆ ಬಿಟ್ಟ ವಿಷಯ. ಆದರೆ ನೂರು ಕೋಟಿ ಭಾರತೀಯರು ನಂಬುವ, ಭಾರತದ ಹೊರಗೆ ಕೂಡ ಇರುವ ಹಿಂದೂಗಳು ಮನೆಯಲ್ಲಿ ಇಟ್ಟು ಪೂಜಿಸುವ ಶ್ರೀರಾಮನ ಹುಟ್ಟಿನ ಬಗ್ಗೆ ದಾಖಲೆ ಇಲ್ಲ ಎಂದು ಹೇಳುವ ಮೂಲಕ ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು.
ಈಗ ನನ್ನ ಸಿಂಪಲ್ ಪ್ರಶ್ನೆ ಎಂದರೆ ದ್ವಾರಕನಾಥ್ ಯಾರು ತನ್ನ ತಂದೆ ಎಂದು ಅಂದುಕೊಂಡಿದ್ದಾರೋ ಅವರು ಗ್ಯಾರಂಟಿಯಾಗಿ ಅವರ ತಂದೆ ಎನ್ನುವುದಕ್ಕೆ ದ್ವಾರಕನಾಥ್ ಬಳಿ ಏನಾದರೂ ದಾಖಲೆ ಇದೆಯಾ ಅಥವಾ ತನ್ನ ತಾಯಿ ಇವರೇ ನಿನ್ನ ತಂದೆ ಎಂದು ಹೇಳಿದ್ದಕ್ಕೆ ದ್ವಾರಕನಾಥ್ ಇಲ್ಲಿಯ ತನಕ ಒಪ್ಪಿಕೊಂಡು ಬಂದಿದ್ದಾರಾ? ತಾಯಿ ಎನ್ನುವುದು ಸತ್ಯ, ತಂದೆ ಎನ್ನುವುದು ನಂಬಿಕೆ ಎನ್ನುವ ಮಾತಿದೆ. ಆದರೆ ಶ್ರೀರಾಮಚಂದ್ರ ಸತ್ಯ ಮತ್ತು ನಂಬಿಕೆ ಎರಡೂ ಕೂಡ. ಶ್ರೀರಾಮ ಅಯೋಧ್ಯೆಯಲ್ಲಿ ಹುಟ್ಟಿ ನಮ್ಮನ್ನು ಹರಸಿದ್ದು ಸತ್ಯ ಮತ್ತು ನಮ್ಮನ್ನು ಯಾವಾಗಲೂ ಪೊರೆಯುತ್ತಾನೆ ಎನ್ನುವುದು ಸತ್ಯ ಹಾಗೂ ನಂಬಿಕೆ.
ನಿಜ ಹೇಳಬೇಕೆಂದರೆ ದ್ವಾರಕನಾಥನಂತವರಿಂದ ಹೀಗೆ ಹೇಳಿಕೆ ಕೊಡಿಸಿ ಅದು ವಿವಾದಕ್ಕೆ ತಿರುಗಿದಾಗ ಹಿಂದೆ ಕುಳಿತು ವಿಕೃತ ಆನಂದ ಪಡೆಯುವ ಗುಂಪೇ ಇದೆ. ಅದು ಪದ್ಮಾವತಿಯ ಸಿನೆಮಾದಲ್ಲಿಯೂ ಕೈ ಆಡಿಸುತ್ತದೆ. ಇವರಂತವರ ಬಾಯಿಂದ ಕೂಡ ಅಪ್ರಬುದ್ಧವನ್ನು ಹೇಳಿಸುತ್ತದೆ. ಇಂತವರು ಪುರಭವನದ ವೇದಿಕೆ ಮೇಲೆ ಅಲ್ಲ, ಕಸದ ಬುಟ್ಟಿ ಇಡುವ ಜಾಗದಲ್ಲಿ ಕೂಡ ನಿಲ್ಲಲು ಯೋಗ್ಯತೆ ಇಲ್ಲದವರು!
Leave A Reply