ಹಿಂದೂಗಳ ಮದುವೆಯಾಗಿ ಮತಾಂತರ ಮಾಡುತ್ತಿದ್ದ ಮುಸ್ಲಿಮರಿಗೆ ಸುಪ್ರೀಂ ಕೋರ್ಟ್ ಶಾಕ್!
ದೆಹಲಿ: ಇತ್ತೀಚೆಗೆ ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ, ಹಿಂದೂಗಳನ್ನು ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುತ್ತಿರುವ ಪ್ರಕರಣ ಸುದ್ದಿಯಾಗುತ್ತಿರುವ ಬೆನ್ನಲ್ಲೇ, ಮತಾಂತರಗೊಳಿಸುವವರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ.
ಹೌದು, ಯಾವುದೇ ಒಬ್ಬ ಮಹಿಳೆ ಅಂತರ್ಜಾತಿ ಅಥವಾ ಅಂತರ್ ಧರ್ಮೀಯನೊಂದಿಗೆ ಮದುವೆಯಾದರೆ, ಆ ವ್ಯಕ್ತಿಯ ಧರ್ಮ, ಜಾತಿಗೆ ಮಹಿಳೆ ಸಹ ಮತಾಂತರವಾಗಬೇಕು ಎಂಬ ಯಾವ ನಿಯಮವೂ ಕಾನೂನಿನಲ್ಲಿ ಇಲ್ಲ. ಹಾಗಾಗಿ ಮಹಿಳೆಯರು ಇಚ್ಛಿಸದಿದ್ದರೆ ಪತಿಯ ಜಾತಿ ಅಥವಾ ಧರ್ಮಕ್ಕೆ ಮತಾಂತರವಾಗುವ ಹಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನಾನು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾದರೆ ನನ್ನ ಧರ್ಮವನ್ನು ಕಳೆದುಕೊಳ್ಳಲೇಬೇಕಾ ಎಂದು ಪಾರ್ಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠ, “ಮಹಿಳೆಯೊಬ್ಬರು ಬೇರೆ ಧರ್ಮದವನ ಜತೆ ಮದುವೆಯಾದರೆ, ತನ್ನ ಧರ್ಮ, ಜಾತಿ, ನಂಬಿಕೆ, ಸಂಪ್ರದಾಯ ಕಳೆದುಕೊಳ್ಳಬೇಕು ಎಂಬ ಯಾವ ನಿಯಮವೂ ಕಾನೂನಿನಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದೆ.
ಒಬ್ಬ ಪುರುಷ ಮಹಿಳೆಯನ್ನು ಮದುವೆಯಾದರೆ ತನ್ನ ನಂಬಿಕೆ, ಧರ್ಮ ಉಳಿಸಿಕೊಳ್ಳುತ್ತಾನೆ. ಅದೇ ಮಹಿಳೆ ಬೇರೆಯವನನ್ನು ಮದುವೆಯಾದರೆ ಆತನ ಜಾತಿ, ಧರ್ಮಕ್ಕೆ ಮತಾಂತರವಾಗಬೇಕು ಎಂದರೆ ಹೇಗೆ ಸಾಧ್ಯ? ಎಂದು ಸಹ ಸುಪ್ರೀಂ ಮತಾಂತರಗೊಳಿಸುವವರನ್ನು ಪ್ರಶ್ನಿಸಿದೆ.
ಆದಾಗ್ಯೂ ಹಾದಿಯಾ ಪ್ರಕರಣ ಸೇರಿ ಇತ್ತೀಚೆಗೆ ಹಿಂದೂ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಮತಾಂತರಗೊಳಿಸುವ, ಲವ್ ಜಿಹಾದ್ ಪ್ರಕರಣಗಳು ಹೆಚ್ಚು ಕೇಳಿಬರುತ್ತಿವೆ.
Leave A Reply