ಬಿಜೆಪಿ ಪರ ಪ್ರಚಾರ ಮಾಡಲು ಹೊರಟಿದ್ದೇ ಈ ಸನ್ಯಾಸಿಯ ತಪ್ಪಾಯಿತೇ?
Posted On December 9, 2017

ಗಾಂಧಿನಗರ: ಗುಜರಾತಿನ ವಿಸಾವದರ್ ಎಂಬಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಲು ಹೊರಟಿದ್ದ ಸ್ವಾಮಿ ಭಕ್ತಪ್ರಸಾದ್ ಎಂಬುವವರ ಮೇಲೆ ಅಪರಿಚಿತರು ದಾಳಿ ಮಾಡಿ ಹಲ್ಲೆಗೈದಿದ್ದಾರೆ.
ಜುನಾಗಡ್ ಜಿಲ್ಲೆಯ ವಿಸಾವದರ್ ಕ್ಷೇತ್ರದ ಅಭ್ಯರ್ಥಿ ಕಿರಿತ್ ಪಟೇಲ್ ಎಂಬುವವರು ಆಯೋಜಿಸಿದ್ದ ರ್ಯಾಲಿಗೆ ತೆರಳುವಾಗ ಮೊಟಾ ಕೊತ್ಡಾ ಹಾಗೂ ನವಾನಿಯಾ ಹಳ್ಳಿಗಳ ಮಧ್ಯೆ ಕಾರಿನಲ್ಲಿ ತೆರಳುವಾಗ ದಾಳಿ ಮಾಡಿದ್ದು, ಗಾಯಾಳು ಸ್ವಾಮೀಜಿ ಅವರನ್ನು ವಸಾವದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ವಾಮೀಜಿ ಹೊರಟಿದ್ದ ಕಾರನ್ನು ಬಲವಂತವಾಗಿ ನಿಲ್ಲಿಸಿ ಇಬ್ಬರು ದಾಳಿ ಮಾಡಿದ್ದು, ರಾಡಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು,ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
- Advertisement -
Leave A Reply