ಯೋಗಿ ಆದಿತ್ಯನಾಥ ಕೋಮುವಾದಿ ಎನ್ನುವವರು ಈ ಸುದ್ದಿ ಓದಿ!
ಲಖನೌ: ಯೋಗಿ ಆದಿತ್ಯನಾಥ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಎನ್ನುತ್ತಲೇ ಕೋಮುವಾದಿಗಳು, ಮುಸ್ಲಿಂ ವಿರೋಧಿಗಳೇ ಎಂದು ಬೊಬ್ಬೆ ಹಾಕುತ್ತಾರೆ ಹಾಗೂ ಹಾಗೆಯೇ ಬಿಂಬಿಸುತ್ತಾರೆ. ಆದರೆ ಮೋದಿ ಹಾಗೂ ಆದಿತ್ಯನಾಥರು ಮುಸ್ಲಿಮರ ಏಳಿಗೆಗೆ ಮಾಡುವ ಕಾರ್ಯಗಳನ್ನು ಮಾತ್ರ ಯಾರೂ ಶ್ಲಾಘಿಸುವುದಿಲ್ಲ, ಮೆಚ್ಚುಗೆಯ ಮಾತನಾಡುವುದಿಲ್ಲ.
ಆದರೂ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದಲ್ಲಿ ಮದರಸಾಗಳನ್ನು ಆಧುನೀಕರಣಗೊಳಿಸಲು ಮುಂದಾಗಿದ್ದು, ಇದರಿಂದ ಲಕ್ಷಾಂತರ ಮುಸ್ಲಿಮರು ಮದರಸಾಗಳಲ್ಲಿ ಗುಣಮಟ್ಟದ ಹಾಗೂ ಆಧುನಿಕ ಶಿಕ್ಷಣ ಪಡೆಯಲಿದ್ದಾರೆ.
ಹೌದು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ರಾಜ್ಯದ 8 ಸಾವಿರಕ್ಕೂ ಅಧಿಕ ಮದರಸಾಗಳನ್ನು ಆಧುನೀಕರಣಗೊಳಿಸಲು ತೀರ್ಮಾನಿಸಿದೆ. ಈ ಕುರಿತು ಉತ್ತರ ಪ್ರದೇಶದ ಮದರಸಾ ಮಂಡಳಿಗೆ ಸೂಚನೆ ನೀಡಲಾಗಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಆನ್ ಲೈನ್ ಪೋರ್ಟಲ್ ನಲ್ಲಿ 16,705 ಮದರಸಾಗಳು ನೋಂದಣಿಯಾಗಿದ್ದು, ಇವುಗಳಲ್ಲಿ 8,184 ಮದರಸಾಗಳ ಆಧುನೀಕರಣಕ್ಕಾಗಿ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಲು ನಿರ್ಧರಿಸಿದೆ.
ಕೇಂದ್ರದ ಅನುದಾನ ಲಭ್ಯವಾದರೆ ಮದರಸಾಗಳಲ್ಲಿ ಆಧುನಿಕ ಶಿಕ್ಷಣ, ತಾಂತ್ರಿಕ ಕೌಶಲ ಸೇರಿ ಹಲವು ಚಟುವಟಿಕೆಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಉತ್ತರಪ್ರದೇಶದಲ್ಲಿ ನೋಂದಣಿಯಾದ 16 ಸಾವಿರ ಮದರಸಾಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಮದರಸಾಗಳ ಆಧುನೀಕರಣದಿಂದ ಮುಸ್ಲಿಂ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲಿದ್ದು, ಮುಸ್ಲಿಮರ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
Leave A Reply