ರಾಮಚಂದ್ರ ಗುಹಾನೆಂಬ ಇತಿಹಾಸಕಾರ ಹೇಳುವುದೊಂದು ತಿನ್ನುವುದೊಂದು..
ಇತಿಹಾಸಕಾರ ಧಾರ್ಮಿಕ, ರಾಜಕೀಯ ಒಲವು ಹೊಂದಿರಬಾರದು. ಕೆಲವು ಮಾರ್ಕ್ಸ್ ವಾದಿ ಇತಿಹಾಸಕಾರರು ರಚಿಸಿದ ಇತಿಹಾಸ ಸರಿಯಿರಲಿಲ್ಲ. ಅವರು ವಾಸ್ತವವನ್ನು ಬಿಂಬಿಸುವ ಇತಿಹಾಸಕಾರರಲ್ಲ. ಇತಿಹಾಸವೊಂದು ಸಾಮಾಜಿಕ ವಿಜ್ಞಾನ ಮತ್ತು ಸಾಹಿತ್ಯ ಮತ್ತು ಅದಕ್ಕೆ ಹಲವು ಆಯಾಮಗಳಿವೆ. ಇತಿಹಾಸಕಾರರು ಸರ್ಕಾರದ ದಾಖಲೆಗಳನ್ನೇ ಪಡೆದು ಇತಿಹಾಸ ಬರೆಯಬಾರದು.
ಇವು ಗೋವಾದ ಪಣಜಿಯಲ್ಲಿ ನಡೆದ ಗೋವಾ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ ಮಾತುಗಳು.
ಆದರೆ ಈ ಗುಹಾನೆಂಬ ಇತಿಹಾಸಕಾರ ಮಾಡಿದ ಮಸಲತ್ತುಗಳು, ಇತಿಹಾಸದ ಸಂಶೋಧನೆಗಳು, ಪ್ರಸ್ತುತ ಬರೆಯುವ ಪ್ರತಿ ಲೇಖನಗಳು ರಾಜಕೀಯ, ಧಾರ್ಮಿಕ ದುರುದ್ದೇಶ ಹೊಂದಿರುವವು ಎನ್ನುವುದರಲ್ಲಿ ಎರಡು ಮಾತಿಲ್ಲ. ಇತನ ಪ್ರತಿ ಮಾತುಗಳು, ಪ್ರತಿ ಲೇಖನ ಭಾರಿ ದುರುದ್ದೇಶ ಮತ್ತು ಧಾರ್ಮಿಕ, ರಾಜಕೀಯ ಹಿನ್ನೆಲೆ ಹೊಂದಿರುವಂತಹದ್ದೇ ಆಗಿರುತ್ತವೆ. ಗುಹಾ ಮಾಡಿರುವ ಪೂರ್ವಾಗ್ರಹ ಪೀಡಿತನಾಗಿ ಮಾತನಾಡಿರುವ, ಬರೆದಿರುವ ಲೇಖನಗಳು ಒಂದೇ ಎರಡೇ.. ಇತನ ಮಾತಿಗೂ ಕೃತಿಗೂ ಸಾಮ್ಯತೆಯಿಲ್ಲ. ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ ಎಂಬುದಕ್ಕೆ ಇಲ್ಲಿವೆ ನೋಡಿ ಕೆಲ ಉದಾಹರಣೆಗಳು.
- ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಬಗ್ಗೆ ತಿರುಚಿ ತಿರುಚಿ ಬರೆದು ಆಡಳಿತದಲ್ಲಿದ್ದ ಪಕ್ಷದ ಬಕೆಟ್ ಹಿಡಿದಿರುವುದು ಮರೆತೇ ಹೋಗಿದೆ ಗುಹಾರವರಿಗೆ.
- ಭಾರತಕ್ಕೆ ಐಸಿಸ್ ಉಗ್ರರಿಗಿಂತ ಹಿಂದೂ ಮೂಲಭೂತವಾದಿಗಳು ಹೆಚ್ಚು ಅಪಾಯಕಾರಿ
- ಗೌರಿ ಲಂಕೇಶ ಹತ್ಯೆ ಬಿಜೆಪಿ ಮತ್ತು ಆರ್ ಎಸ್ ಎಸ್ ನವರೇ ಮಾಡಿಸಿದ್ದಾರೆ
- ಭಾರತದ ಸೈನ್ಯಕ್ಕೆ ಮಹತ್ತರ ಸೇವೆ ನೀಡಿದ ಜನರಲ್ ಕಾರ್ಯಪ್ಪ ಅವರು ಭಾರತ ರತ್ನಕ್ಕೆ ಅರ್ಹರಲ್ಲ ಎನ್ನುತ್ತಲೇ, ಸೈನ್ಯದ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ತನ್ನ ಎಡಬಿಡಂಗಿ ಸಲಹೆಗಳನ್ನು ನೀಡುತ್ತಲೇ ತಮ್ಮ ಲೇಖನವೊಂದರಲ್ಲಿ ಜರಿದಿದ್ದರು.
- ಸ್ವತಃ ಗುಹಾ ಅವರೇ ಮಾರ್ಕ್ಸ್ ವಾದಿ ಸಿದ್ಧಾಂತಗಳನ್ನು ಬೆಂಬಲಿಸುತ್ತಾ, ಹಲವು ಕಾರ್ಯಕ್ರಮಗಳಲ್ಲಿ ಕಮ್ಯುನಿಸ್ಟ್ ಸಿದ್ಧಾಂತಗಳ ಬಗ್ಗೆ ಗಂಟೆಗಟ್ಟಲೇ ಭಾಷಣ ಬೀಗಿದಿದ್ದಾರೆ. ಉದ್ದುದ ಲೇಖನ ಬರೆದಿದ್ದಾರೆ. ಇದೀಗ ಕಮ್ಯುನಿಸ್ಟ್ ಇತಿಹಾಸಕಾರರು ಇತಿಹಾಸಕಾರರೇ ಅಲ್ಲ ಎಂದು ಮಾತು ಬದಲಾಯಿಸಿದ್ದಾರೆ.
- ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗುಹಾ ತಾನು ಕರ್ನಾಟಕದಲ್ಲಿ ಮಾಡಿದ್ದ ಯಾವ ಸಾಧನೆಗೆ ಪ್ರಶಸ್ತಿ ಬಂದಿದೆ ಎಂಬುದರ ಅರಿವಿರಬೇಕಲ್ಲವೇ. ಬಿಟ್ಟಿ ಪ್ರಶಸ್ತಿ ನೀಡಲು ತಾವು ಆಡಳಿತದಲ್ಲಿರುವ ಸರ್ಕಾರದ ಪಕ್ಷದ ಪರ ಒಲವು ಹೊಂದಿರುವುದು ಮಾತ್ರ ಬಹಿರಂಗ ಸತ್ಯ.
ಹೀಗೆ ಸಾಲು ಸಾಲು ಹೇಳಿಕೆ, ಲೇಖನಗಳಲ್ಲಿ ತನ್ನ ವಾಂತಿ, ಭೇದಿಯನ್ನು ಮಾಡಿಕೊಂಡಿರುವ ಗುಹಾ. ಇದೀಗ ಇತಿಹಾಸಕಾರ ರಾಜಕೀಯ, ಧಾರ್ಮಿಕ ಒಲವು ಹೊಂದಿರಬಾರದು ಎನ್ನುತ್ತಾನೆ. ಹಾಗಾದ್ರೆ ಭಾರತದಲ್ಲಿ ಹಿಂದೂ ಮೂಲಭೂತವಾದಿಗಳು ಅಪಾಯಕಾರಿ ಎನ್ನುವಾಗ, ನೆಹರು ಅವರನ್ನು ತಿರುಚಿ ಮುರುಚಿ ಬರೆಯುವಾಗ, ಜನರಲ್ ಕಾರ್ಯಪ್ಪರನ್ನು ಹೀಯಾಳಿಸಿದಾಗ ಈ ಮಾತು ನೆನಪಿಗೆ ಬರಲಿಲ್ಲವೇ. ಸುಮ್ಮನೇ ಬೊಗಳೆ ಬಿಡುವುದಷ್ಟೇ ಅಲ್ಲ ಗುಹಾ ಅದನ್ನು ಪಾಲಿಸುವುದು ಅಗತ್ಯ.
Leave A Reply