ಕೇರಳವೇ ಸೇಫ್ ಎನಿಸಿದರೆ ಕರ್ನಾಟಕಕ್ಕೆ ಬಂದು ಹೇಗೆ ಸಿನಿಮಾ ಮಾಡಿದಿರಿ ಪ್ರಕಾಶ್ ರೈ?

ನಾಲಿಗೆಗೆ ಒಂದು ಸಲ ನನ್ನ ಮಾತನ್ನು ಕೇಳುತ್ತಾರೆ, ನನ್ನ ಮಾತಿಗೆ ಬೆಲೆ ಬರುತ್ತದೆ ಎಂದು ಗೊತ್ತಾದರೆ, ನನ್ನ ಇಬ್ಬಂದಿತನದ ಮಾತನ್ನೂ ಪರಿಗಣಿಸುತ್ತಾರೆ ಎಂದರೆ, ಎಲುಬಿಲ್ಲದ ಆ ನಾಲಿಗೆ ಅಡ್ಡಾದಿಡ್ಡಿಯಾಗಿ ಹರಿಯುತ್ತದೆ. ವಾಸ್ತವವನನ್ನೂ ಮರೆಸಿ, ಮಿದುಳಿಗೂ, ಮನಸ್ಸಿಗೂ ಇರುವ ನಂಟು ಕಿತ್ತೆಸೆದು ನಾಲಿಗೆ ಮೇಲುಗೈ ಸಾಧಿಸುತ್ತದೆ.
ನಟ ಪ್ರಕಾಶ್ ರಾಜ್ (ರೈ ಎಂಬ ಇನ್ನೊಂದು ಅಡ್ಡ ಹೆಸರಿದೆ) ಅವರ ನಾಲಿಗೆ ಈ ಮೇಲಿನ ಎಲ್ಲ ಹೋಲಿಕೆಗಳನ್ನೂ ಹೋಲುತ್ತದೆ. ಅಷ್ಟರಮಟ್ಟಿಗೆ ಪ್ರಕಾಶ್ ರೈ ತಮ್ಮ ನಾಲಿಗೆಯನ್ನು ಚಿತ್ರ-ವಿಚಿತ್ರವಾಗಿ ಹರಿಬಿಡುತ್ತಿದ್ದಾರೆ.
ಇಂಥ ಪ್ರಕಾಶ್ ರೈ ಈಗ, “ದೇಶದಲ್ಲಿ ಕೇರಳದಲ್ಲಿ ಮಾತ್ರ ನಾನು ನಿರ್ಭಯವಾಗಿ ಓಡಾಡಬಲ್ಲೆ” ಎಂದು ಹೇಳಿಕೆ ನೀಡಿದ್ದಾರೆ.
ಅಲ್ರೀ ಪ್ರಕಾಶ್ ರೈ ನಿಮಗೇನಾದರೂ ಬುದ್ಧಿಭ್ರಮಣೆಯಾಗಿದೆಯೇ? ಹಣದ ಸೊಕ್ಕು ತಲೆಗೆ ಏರಿದೆಯೇ? ಸೆಲೆಬ್ರಿಟಿ ಎಂಬ ಹಮ್ಮು ಕಟ್ಟೆಯೊಡೆದಿದೆಯೇ? ನಿಮ್ಮ ಮಿದುಳಿಗೆ ವಿಚಾರಗಳ ಮೇವು ಬಿಟ್ಟು ಏನನ್ನು ತುಂಬುದಿದ್ದೀರಿ? ನಿಮ್ಮ ಮಾನಸಿಕ ಸ್ಥಿಮಿತಕ್ಕೆ ಏನಾಗಿದೆ? ಯಾವ ಮದ ನಿಮ್ಮನ್ನು ಹೀಗೆ ಮಾತನಾಡಿಸುತ್ತಿದೆ? ಏನಾಗಿದೆ ನಿಮಗೆ? ಬುದ್ಧಿ ನೆಟ್ಟಗಿದೆ ತಾನೆ?
ಇದೇ ಪ್ರಕಾಶ್ ರೈ ಅವರ ಇತ್ತೀಚೆಗೆ ಕನ್ನಡದಲ್ಲಿ “ಗೌಡ್ರ ಹೋಟೆಲ್” ಎಂಬ ಚಿತ್ರ ಬಿಡುಗಡೆಯಾಯಿತು. ಹಿಟ್ ಬಿಡಿ, ತಕ್ಕಮಟ್ಟಿಗೆ ಹೆಸರು ಮಾಡದಿದ್ದರೂ ಸ್ವಲ್ಪ ಜನ ಟಾಕೀಸಿಗೆ ಸಿನಿಮಾ ನೋಡಿದರು. ಈಗ ಆ ಸ್ವಲ್ಪ ಜನರ ಸ್ವಾಭಿಮಾನವನ್ನೂ ಪ್ರಕಾಶ್ ರೈ ಕೀಳುಮಟ್ಟದಿಂದ ಕೂಡಿದ್ದು, ಕೇರಳದಲ್ಲಿ ಮಾತ್ರ ಭಯವಿಲ್ಲದೆ ಓಡಾಡುವೆ ಎನ್ನುವ ಮೂಲಕ ಕರ್ನಾಟಕದಲ್ಲಿ ಭಯದ ವಾತಾವರಣವಿದೆ ಎಂದು ತಿಳಿಸಿದ್ದಾರೆ.
ಹಲೋ ಮಿಸ್ಟರ್ ಪ್ರಕಾಶ್ ರೈ? ಸಾರಿ ರಾಜ್, ಕೇರಳದಲ್ಲಿ ಮಾತ್ರ ನಿರ್ಭಯತೆ ಇದೆ ಎಂದಿದ್ದೀರಲ್ಲ, ಕರ್ನಾಟಕದಲ್ಲಿ ನಿಮಗೆ ಯಾರು ಅನ್ಯಾಯ ಮಾಡಿದ್ದಾರೆ? ಬೇರೆ ರಾಜ್ಯಗಳಲ್ಲಿ ನಿಮ್ಮನ್ಯಾರು ತಡೆದು ಹೊಡೆದಿದ್ದಾರೆ ಅಥವಾ ಬೆದರಿಕೆ ಹಾಕಿದ್ದಾರೆ? ನಿಮಗಾವ ಜೀವ ಬೆದರಿಕೆ ಇದೆ? ಅಂಥ ಅಪರಾಧ ಪ್ರಜ್ಞೆಯೇಕೆ ನಿಮಗೆ ಕಾಡುತ್ತಿದೆ? ಅಷ್ಟಕ್ಕೂ, ತೆಲುಗು, ತಮಿಳು, ಕನ್ನಡ ಎಂದು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದ ಜನರ ಹಣ ತಿಂದು ಬದುಕುವ ನಿಮಗೆ, ಈ ರಾಜ್ಯಗಳ ಜನ ಏನು ಬೆದರಿಕೆಯೊಡ್ಡಿದ್ದಾರೆ ನಿಮಗೆ? ಕೇರಳ ಮಾತ್ರ ಸೇಫ್ ಎನ್ನುವ ನೀವು ಕರ್ನಾಟಕಕ್ಕೇಕೆ ಬಂದು ಸಿನಿಮಾ ಮಾಡುತ್ತೀರಿ ಸ್ವಾಮಿ? ಅಷ್ಟೊಂದು ಭಯವಿದ್ದರೆ ಕರ್ನಾಟಕಕ್ಕೇಕೆ ಬಂದು, ಏನ್ ನಡೀತಿದೆರೀ ಕರ್ನಾಟಕದಲ್ಲಿ ಎಂದು ಪ್ರಶ್ನಿಸುತ್ತೀರಿ? ನಾಚಿಕೆ ಎಂಬ ಪದದ ಅರ್ಥ ಗೊತ್ತಿದೆಯಾ ನಿಮಗೆ?
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ “ಏನ್ ನಡೀತಿದೆರೀ ಕರ್ನಾಟಕದಲ್ಲಿ” ಎಂದು ಭಾರಿ ಪ್ರಚಾರ ಪಡೆದಿರಲ್ಲ, ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಎಂಬ ಹಿಂದೂ ಯುವಕನ ಹತ್ಯೆಯಾಗಿ, ಸುತ್ತಲಿನ ಮೂರ್ನಾಲ್ಕು ತಾಲೂಕುಗಳು ಹೊತ್ತಿ ಉರಿಯುತ್ತಿವೆ. ಆದರೂ ನೀವ್ಯಾಕ್ರೀ, ಇನ್ನೂ ರಾಜ್ಯಕ್ಕೆ ಬಂದಿಲ್ಲ? ಏನ್ ನಡೀತಿದೆ ಎಂದು ಕೇಳಿಲ್ಲ? ಈ ಪ್ರಕರಣದಲ್ಲಿ ಮೋದಿ ಅವರನ್ನು ಪರೋಕ್ಷವಾಗಿ ಟೀಕೆ ಮಾಡಲು ಆಗುವುದಿಲ್ಲ ಎಂಬ ಮುಜುಗರವೇ? ನಟ ಅಂತೀರಿ, ಇಂಥ ಇಬ್ಬಂದಿತನವೇಕೆ ನಿಮಗೆ?
ಇನ್ನು ಕೇರಳ ಭಾರೀ ಸೇಫ್ ಅಂತೀರಲ್ಲ, 2016ರಲ್ಲೇ ರಾಜಕೀಯ ಪ್ರೇರಿತವಾಗಿ ಸುಮಾರು 2000 ಜನರ ಹತ್ಯೆಯಾಗಿದೆ. ಅವರಲ್ಲಿ ಬಹುತೇಕರು ಹಿಂದೂ, ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರೇ ಇದ್ದಾರೆ. ಈ ವರ್ಷವೂ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಹಿಂದೂಗಳು ಜೀವ ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀವೇನೋ ಕಾರಿನಲ್ಲಿ ಬಾಡಿ ಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಸುತ್ತೀರಿ, ಆದರೆ ಸಾಮಾನ್ಯರು? ಕೇರಳದಲ್ಲಿ ಸಿಪಿಎಂ ಗೂಂಡಾಗಿರಿ ತಾರಕಕ್ಕೇರಿದೆ. ಹೀಗಿರುವಾಗ ಕೇರಳ ಹೇಗೆ ಸೇಫ್ ಎಂದು ಬಿಡಿಸಿ ಹೇಳುವಿರಾ? ಓಹ್ ಅವರೆಲ್ಲರೂ ಹಿಂದೂಗಳು, ಆರೆಸ್ಸೆಸ್ ನವರು ಎಂಬ ಉಡಾಫೆಯಾ? ನಿಮ್ಮ ಇಂಥಾದ್ದೇ ಇಬ್ಬಂದಿತನಕ್ಕೇ ಅಲ್ಲವೇ, ಬಿಗ್ ಬಾಸ್ ವಿನ್ನರ್ ಪ್ರಥಮ್ ಸರಿಯಾಗಿ ಟಾಂಗ್ ನೀಡಿದ್ದು. ನೀವು ಅಂಥಾದಕ್ಕೆಲ್ಲ ಉತ್ತರ ನೀಡಲ್ಲ ಬಿಡಿ. ತಾಕತ್ತಿದ್ದಾಗ ಉತ್ತರದ ಪ್ರಶ್ನೆ ಬಿಡಿ. ರೀ ಪ್ರಕಾಶ್ ರೈ ಏನಾಗಿದೆ ರೀ ನಿಮಗೆ? ಅಂತ ನಿಮ್ಮ ಸ್ಟೈಲಲ್ಲೇ ಕೇಳಬೇಕೆನಿಸಿತು. ಕೇರಳವೇ ಸೇಫ್ ಎನಿಸಿದರೆ ಅಲ್ಲೇ ಇದ್ದು ಬಿಡಿಪಾ! ದಯಮಾಡಿ ಕರ್ನಾಟಕದತ್ತ ಸುಳಿಯಬೇಡಿ!
Leave A Reply