ಮೋದಿ ಅಣಬೆ ಸೇವಿಸುತ್ತಾರೆ ಎಂಬುದಕ್ಕೆ ಥೈಲ್ಯಾಂಡ್ ಮಹಿಳೆ ಪ್ರತಿಕ್ರಿಯೆ, ಅಲ್ಪೇಶ್ ಗೆ ಮುಖಭಂಗ
Posted On December 14, 2017

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿತ್ಯ ಒಂದು ಕೋಟಿ ರೂಪಾಯಿ ಮೌಲ್ಯದ ಅಣಬೆ ಸೇವಿಸುತ್ತಾರೆ. ಈ ಅಣಬೆ ಥೈಲ್ಯಾಂಡಿನಿಂದ ಆಮದು ಮಾಡಿಕೊಳ್ಳುತ್ತಾರೆ. ಇದನ್ನು ಸೇವಿಸುವುದರಿಂದಲೇ ಮೋದಿ ಅಷ್ಟೊಂದು ಬೆಳ್ಳಗೆ ಇದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಅವರಿಗೆ ಮುಖಭಂಗವಾಗಿದೆ.
ಥೈಲ್ಯಾಂಡ್ ನ ಮೆಸ್ಸಿ ಜೋ ಎಂಬ ಮಹಿಳೆ ಈ ಕುರಿತು ವೀಡಿಯೋ ಒಂದು ಅಪ್ ಲೋಡ್ ಮಾಡಿದ್ದು, ಥೈಲ್ಯಾಂಡಿನಲ್ಲಿ ಇಂಥ ವಿಶೇಷ ಹಾಗೂ ದುಬಾರಿ ವೆಚ್ಚದ ಅಣಬೆ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ ಭಾರತದ ರಾಜಕಾರಣಿಗಳು ಚುನಾವಣೆ ವೇಳೆ ನನ್ನ ದೇಶದ ಹೆಸರು ಎಳೆದು ತರಬಾರದು ಎಂದು ಸಹ ಮನವಿ ಮಾಡಿದ್ದಾಳೆ.
ನಮ್ಮ ದೇಶದಲ್ಲಿ 1200 ಡಾಲರ್ ಮೌಲ್ಯದ ಮಶ್ರೂಮ್ ಸಿಗುತ್ತದೆ, ಅದನ್ನು ಸೇವಿಸಿದರೆ ಬೆಳ್ಳಗಾಗುತ್ತಾರೆ ಎಂಬ ವೀಡಿಯೋ ನೋಡಿದೆ. ಆದರೆ ಅಣಬೆ ತಿಂದರೆ ಬೆಳ್ಳಗಾಗುತ್ತಾರೆ ಎಂಬುದು ಶುದ್ಧ ಸುಳ್ಳು ಹಾಗೂ ಅಂಥಾ ಅಣಬೆಯನ್ನು ನಮ್ಮ ದೇಶದಲ್ಲಿ ನೋಡಿಲ್ಲ ಎಂದಿದ್ದಾರೆ.
- Advertisement -
Trending Now
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
September 22, 2023
ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
September 15, 2023
Leave A Reply