ಅಮರನಾಥಕ್ಕೆ ತೆರಳಿ ಹರ ಹರ ಮಹಾದೇವ ಎನ್ನುವೆ, ತಾಕತ್ತಿದ್ದರೆ ತಡೆಯಿರಿ ಎಂದಿದ್ದು ಯಾರು ಗೊತ್ತಾ?
ದೆಹಲಿ: ಅಮರನಾಥ ದೇವಾಲಯಕ್ಕೆ ತೆರಳುವ ಗುಹಾ ಮಾರ್ಗದಲ್ಲಿ ದೇವರ ನಾಮ ಪಠಿಸುವ ಹಾಗಿಲ್ಲ, ಮೊಬೈಲ್ ಒಯ್ಯುವ ಹಾಗಿಲ್ಲ, ಅದು “ಶಾಂತ ವಲಯ (ಸೈಲೆನ್ಸ್ ಜೋನ್)” ಎಂದು ಘೋಷಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.
ಅದರಲ್ಲೂ ಈ ಆದೇಶವನ್ನು ಬಿಜೆಪಿ ಖಂಡಿಸಿದ್ದು, “ನಾನು ಅಮರನಾಥ ಯಾತ್ರೆ ಕೈಗೊಳ್ಳುತ್ತೇನೆ. ಭಂ ಭಂ ಬೋಲೇ, ಹರ ಹರ ಮಹಾದೇವ ಮಂತ್ರ ಪಠಿಸುತ್ತೇನೆ. ತಾಕತ್ತಿದ್ದವರು ತಡೆಯಲಿ ನೋಡೋಣ” ಎಂದು ಬಿಜೆಪಿ ಮುಖಂಡ ತಜಿಂದರ್ ಬಗ್ಗಾ ಸವಾಲು ಹಾಕಿದ್ದಾರೆ.
ಅಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶವನ್ನು ವಿಶ್ವ ಹಿಂದೂ ಪರಿಷತ್ ಸಹ ಖಂಡಿಸಿದ್ದು, ಭೂಮಿಯ ಮೇಲೆ ಪರಿಸರಕ್ಕೆ ಆಗುವ ಎಲ್ಲ ಹಾನಿಗೆ ಹಿಂದೂಗಳೇ ಕಾರಣರಲ್ಲ” ಎಂದಿದ್ದಾರೆ.
ಅಲ್ಲದೆ ರಾಷ್ಟ್ರೀಯ ನ್ಯಾಯಾಧಿಕರಣದ ಇಂಥ ತುಘ್ಲಕ್ ಫತ್ವಾ ಹಿಂಪಡೆಯುವಂತೆ ಸರ್ಕಾರ ತಿಳಿಸಬೇಕು ಎಂದು ಆದೇಶಿಸಿದ್ದಾರೆ.
ಪ್ರತಿವರ್ಷ ಲಕ್ಷಾಂತರ ಹಿಂದೂಗಳು ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಆದರೆ ಗಂಟೆ ಬಾರಿಸುವುದರಿಂದ, ಮಂತ್ರ ಪಠಿಸುವುದರಿಂದ ಹಿಮ ಕುಸಿಯುತ್ತದೆ ಎಂಬ ಕಾರಣಕ್ಕೆ ನಿಯಮ ರೂಪಿಸಲಾಗಿದೆ ಎಂದು ಹಸಿರು ನ್ಯಾಯಾಧಿಕರಣ ತಿಳಿಸಿದೆ. ಆದರೆ, ಯಾವಾಗಲೂ ಹಿಂದೂಗಳೇ, ಹಿಂದೂಗಳ ಆಚರಣೆಗಳೇ ಟಾರ್ಗೆಟ್ ಆಗುತ್ತಿವೆ ಎಂಬುದು ಕೋಟ್ಯಂತರ ಹಿಂದೂಗಳ ಪ್ರಶ್ನೆಯಾಗಿದೆ.
Leave A Reply