ಬ್ರಹ್ಮಪುತ್ರ ನದಿ ನೀರು ಹರಿಯುವುದನ್ನು ತಡೆದ ಚೀನಾ ಕುತಂತ್ರ ಬಯಲು!
ದೆಹಲಿ: ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಸಿಯಾಂಗ್ ನದಿ ಹೊಲಸಾಗಲು ಚೀನಾ ಕಾರಣ ಎಂಬ ಆರೋಪ ಕೇಳಿಬಂದಿದ್ದ ಬೆನ್ನಲ್ಲೇ ಚೀನಾದ ಮತ್ತೊಂದು ಕರಾಳ ಮುಖ ಬಯಲಾಗಿದೆ.
ಇತ್ತೀಚಿನ ಸ್ಯಾಟಲೈಟ್ ಚಿತ್ರಗಳ ಪ್ರಕಾರ ಚೀನಾದಿಂದ ಭಾರತಕ್ಕೆ ಬರುವ ಬ್ರಹ್ಮಪುತ್ರ ನದಿಯ ನೀರನ್ನು ಚೀನಾ ತಡೆದಿದೆ ಹಾಗೂ ಕೆಲವು ಭಾಗದಲ್ಲಿ ನೀರು ಬೇರೆಡೆ ಹರಿಸುತ್ತಿದೆ ಎಂದು ತಿಳಿದುಬಂದಿದೆ.
ಸ್ಯಾಟಲೈಟ್ ಚಿತ್ರಗಳ ಸಮೂಹ ತಜ್ಞ (ನಿವೃತ್ತ) ಕರ್ನಲ್ ವಿನಾಯಕ್ ಭಟ್ ಈ ಕುರಿತು ಮಾಹಿತಿ ನೀಡಿದ್ದು, ಚೀನಾ ಬ್ರಹ್ಮಪುತ್ರ ನದಿಯ ನೀರನ್ನು ಸಂಪೂರ್ಣವಾಗಿ ತಡೆದಿದೆ. ಭಾರತದ ಪ್ರದೇಶ ತಲುಪುವ 60 ಕಿ.ಮೀ. ಮೊದಲೇ ಚೀನಾ ಡ್ಯಾಂ ಒಂದನ್ನು ಕಟ್ಟಿ ನೀರು ತಡೆದಿದೆ. ಅಲ್ಲದೆ, ಕೆಲವಡೆ ಭಾರತಕ್ಕೆ ಹರಿಯುವ ನೀರನ್ನು ಗುಡ್ಡಗಾಡು ಪ್ರದೇಶಕ್ಕೆ ಹರಿಬಿಡುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದರಿಂದ ಭಾರತಕ್ಕೆ ಹರಿದು ಬರುವ ಭಾರಿ ಪ್ರಮಾಣದ ನೀರಿಗೆ ಕುತ್ತು ಬಿದ್ದಿದೆ. ಇದು ಹೀಗೆಯೇ ಮುಂದುವರಿದರೆ ದೇಶದ ಇಡೀ ಕೃಷಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಗಡಿಭಾಗದಲ್ಲಂತೂ ಜನ ನೀರು ಕುಡಿಯಲು ಸಹ ಪರದಾಡಬೇಕಾಗುತ್ತದೆ. ಪ್ರಾಣಿ, ಪಕ್ಷಿಗಳಿಗೂ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ, ಒಂದು ಪ್ರದೇಶ, ಒಂದು ರಸ್ತೆ ಯೋಜನೆಗೆ ಭಾರತದ ವಿರೋಧ ಸೇರಿ ಹಲವು ಕಾರಣಗಳಿಂದ ನಮ್ಮ ವಿರುದ್ಧ ಹೋರಾಡಲು ತಾಕತ್ತಿಲ್ಲದ ಚೀನಾ ಹೀಗೆ ಹಿಂಬಾಗಿಲಿನಿಂದ ಕುತಂತ್ರ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿದೆ.
ವರದಿ, ಚಿತ್ರಕೃಪೆ- ಇಂಡಿಯಾ ಟುಡೇ
Leave A Reply