ಹೇಳಿ ಹೇಳಿ ಸಾಕಾದ ನಂತರ ಮುಸ್ಲಿಂ ಯುವಕರು ಈದ್ ದಿನ ಮಾಡಿದ್ದೇನು!
ಬೈಕಂಪಾಡಿ ಕೈಗಾರಿಕಾ ಪ್ರದೇಶದ ಪರಿಸ್ಥಿತಿಯನ್ನು ನೋಡಿದರೆ ಅದು ಸಣ್ಣ ಕೆರೆಯ ಲೆವೆಲ್ಲಿಗೆ ತಿರುಗಿರುವುದು ಸ್ಪಷ್ಟ. ಮೊದಲೇ ಹೊಂಡ ಗುಂಡಿಗಳಿಂದ ಕೂಡಿದ ಪ್ರದೇಶ. ಅಲ್ಲಿ ರಸ್ತೆ ಚೆನ್ನಾಗಿರುವುದೇ ಒಂದು ಪವಾಡ. ಬೇಸಿಗೆಯಲ್ಲಿ ವಾಹನ ಚಾಲಕರು ರಸ್ತೆಯಲ್ಲಿ ಇರುವ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುತ್ತಿದ್ದರೆ ಮಳೆಗಾಲದಲ್ಲಿ ಅದೇ ಗುಂಡಿಗಳಲ್ಲಿ ನೀರು ತುಂಬಿ ಇವರಿಗೆ ಅದು ರಸ್ತೆಯೊ, ಗುಂಡಿಯೊ ಎಂದು ಗೊತ್ತಾಗದ ಪರಿಸ್ಥಿತಿ ನಿಮರ್ಾಣವಾಗಿದೆ.
ಅಲ್ಲಿನ ರಸ್ತೆಗಳು ಈ ಪರಿಸ್ಥಿತಿಗೆ ಬರಲು ಮುಖ್ಯ ಕಾರಣ ಕನರ್ಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ. ಕೈಗಾರಿಕಾ ಪ್ರದೇಶಕ್ಕೆ ಹೋಗುವ ರಸ್ತೆ ಜೋಕಟ್ಟೆಯನ್ನು ತಲುಪುದರೊಳಗೆ ನೀವು ಲೆಕ್ಕವಿಲ್ಲದಷ್ಟು ಗುಂಡಿಗಳನ್ನು ದಾಟಿ ಹೋಗಬೇಕಾಗುತ್ತದೆ. ಅದರೊಂದಿಗೆ ಅಲ್ಲಿ ಚರಂಡಿಗಳು ಸಮರ್ಪಕವಾಗಿ ಇಲ್ಲದಿರುವುದು ಕೂಡ ನೀರು ರಸ್ತೆಯ ಮೇಲೆ ನಿಲ್ಲಲು ಕಾರಣ. ಇನ್ನು ದೀಪಕ್ ಪೆಟ್ರೋಲ್ ಪಂಪ್, ಪೊಲೀಸ್ ಠಾಣೆಗೆ ಸಂಪಕರ್ಿಸುವ ರಸ್ತೆಗಳು ಕೂಡ ಹೊಂಡ ಗುಂಡಿಗಳ ಆವಾಸ ಸ್ಥಾನವಾಗಿರುವುದರಿಂದ ಕೃತಕ ನೆರೆ ಇಲ್ಲಿ ಸವರ್ೇ ಸಾಮಾನ್ಯ.
ಇಲ್ಲಿ ವಿಷಯ ಏನೆಂದರೆ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿ ಸಾಕಷ್ಟು ಸಮಯ ಕಳೆದಿದೆ. ಆದರೆ ಇಲ್ಲಿಯ ತನಕ ಯಾವುದೇ ಅಭಿವೃದ್ಧಿ ಆಗದೇ ಇರಲು ಜನಪ್ರತಿನಿಧಿಗಳ ಇಚ್ಚಾಶಕ್ತಿಯೇ ಕಾರಣ. ಇಲ್ಲಿ ಕೆಳಮುಖ ರಸ್ತೆಗಳೇ ಜಾಸ್ತಿ ಇರುವುದರಿಂದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಬೇಕಾಗುತ್ತದೆ, ಅದರ ಕೊರತೆ ಕೂಡ ಕಾಣುತ್ತದೆ ಎಂದು ಸ್ಥಳೀಯ ವರ್ತಕರು ಹೇಳುತ್ತಾರೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯರಸ್ತೆಯ ಕಥೆ ವ್ಯಥೆ ಇವತ್ತು ನಿನ್ನೆಯದ್ದಲ್ಲ. ಅತ್ಯಂತ ಹೆಚ್ಚು ಆದಾಯ ತರುವ ಕೈಗಾರಿಕಾ ಪ್ರದೇಶದ ರಸ್ತೆಗಳು ಯಾವತ್ತಿಗೂ ಹೆಚ್ಚು ಚೆನ್ನಾಗಿರಬೇಕಿತ್ತು. ಆದರೆ ವಿಷಯ ಎಂದರೆ ಈ ರಸ್ತೆಯಷ್ಟು ನಿರ್ಲಕ್ಷ್ಯಕ್ಕೆ ಒಳಗಾದ ರಸ್ತೆ ಇಡೀ ಮಂಗಳೂರು ತಾಲೂಕಿನಲ್ಲಿ ಬೇರೆ ಇರಲಿಕ್ಕಿಲ್ಲ. ಹಾಗಂತ ಈ ರಸ್ತೆಯ ಕಥೆ ಯಾರಿಗೂ ಗೊತ್ತಿಲ್ಲ ಎಂದಲ್ಲ. ಆದರೆ ಇಲ್ಲಿಯ ತನಕ ಯಾವುದೇ ಜನಪ್ರತಿನಿಧಿಯಾಗಲಿ, ಶಾಸಕರಾಗಲಿ, ಸಚಿವರಾಗಲಿ, ಸಂಸದರಾಗಲಿ ಈ ರಸ್ತೆಯಲ್ಲಿ ಯಾವತ್ತಿಗೂ ಶಾಶ್ವತವಾಗಿರುವ ಗುಂಡಿ, ಹೊಂಡಗಳಿಗೆ ಶಾಶ್ವತ ಪರಿಹಾರ ಹುಡುಕುವ ಕೆಲಸ ಮಾಡಿಲ್ಲ. ಒಂದು ವೇಳೆ ಮಾಡಿದರೂ ಅದು ಜಾರಿಗೆ ಬಂದಿಲ್ಲ. ಆದ್ದರಿಂದ ಇನ್ನು ಕಾಯುವುದು ಬೇಡಾ ಎಂದುಕೊಂಡ ಅಲ್ಲಿನ ಸ್ಥಳೀಯ ಯುವಕರು ಯೋಜನೆ ಹಮ್ಮಿಕೊಂಡರು.
ಮುಸ್ಲಿಮರ ಪವಿತ್ರ ದಿನ ಮುಸಲ್ಮಾನ ಬಾಂಧವ ಯುವಕರು ಶ್ರಮದಾನದ ಮೂಲಕ ಅದಕ್ಕೆ ಪರಿಹಾರ ಕಂಡುಕೊಂಡರು. ಈದ್ ದಿನ ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕೆನ್ನುವ ಅವರ ಉದ್ದೇಶ ಈ ಮೂಲಕ ಈಡೇರಿದೆ. ಇಲ್ಲಿನ ಕೈಗಾರಿಕೋದ್ಯಮಿಗಳು, ರಿಕ್ಷಾ ಸಂಘಟನೆಗಳು, ಸ್ಥಳೀಯ ನಾಗರಿಕ ಸಮಿತಿಗಳ ಪ್ರಮುಖರು ಕನರ್ಾಟಕ ಕೈಗಾರಿಕಾ ಅಭಿವೃದ್ಧಿ ಬೋಡರ್್ಗೆ ದಶಕದಿಂದ ಮಾಡಿಕೊಂಡು ಬಂದಿರುವ ಮನವಿಗೆ ಪರಿಹಾರ ಸಿಗದೇ ಇದ್ದ ಕಾರಣ ಅನಿವಾರ್ಯವಾಗಿ ನಾವೆ ಈ ಕೆಲಸಕ್ಕೆ ಮುಂದಾಗಬೇಕಾಯಿತು ಎನ್ನುವುದು ಈ ಯುವಕರ ಮಾತು. ಹಲವು ಮನವಿ, ಪ್ರತಿಭಟನೆ, ಮುತ್ತಿಗೆಗಳಿಂದ ಆಗದ ಕೆಲಸ ಗಾಂಧಿಗಿರಿಯೊಂದಿಗೆ ಸಮಾಪನಗೊಂಡಿದೆ. ಹಾಗೆಂದು ಎಲ್ಲಾ ಸಮಸ್ಯೆ ಪರಿಹಾರವಾಗಿದೆ ಎಂದಲ್ಲ. ಅಂಗರಗುಂಡಿ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ನಿಂತಿದ್ದ ಕೆಸರು, ಮಣ್ಣು ತೆಗೆದು ಸುಗಮ ಸಂಚಾರಕ್ಕೆ ಅನುಮ ಮಾಡಿಕೊಡುವ ಮೂಲಕ ಯುವಕರು ಉದಾತ್ತ ಮೇಲ್ಪಂಕ್ತಿಯನ್ನು ಹಾಕಿಕೊಟ್ಟರು.
Leave A Reply