ಮತ ಯಂತ್ರದಲ್ಲಿ ಬ್ಲೂಟೂತ್ ಇದೆ ಎಂದ ಕಾಂಗ್ರೆಸ್ ಗೆ ಸುಪ್ರೀಂ ತಪರಾಕಿ, ಚುನಾವಣೆ ಆಯೋಗಕ್ಕೆ ಮತ್ತಷ್ಟು ಬಲ
ದೆಹಲಿ: ಗುಜರಾತ್ ಚುನಾವಣೆಯ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಸರ್ಕಾರ ಸೋಲನ್ನು ಎದುರಿಸಲು ಹರಸಾಹಸ ಪಡುತ್ತಿದ್ದು, ಇದೀಗ ಕಾಂಗ್ರೆಸ್ ಗೆ ಮತ್ತೊಮ್ಮೆ ಮುಖಭಂಗವಾಗಿದೆ. ಚುನಾವಣೆಯಲ್ಲಿ ಚುನಾವಣೆ ಆಯೋಗ ಬಿಜೆಪಿ ಪರ ಕಾರ್ಯ ನಿರ್ವಹಿಸುತ್ತಿದೆ, ಆದ್ದರಿಂದ ಮತಯಂತ್ರದಲ್ಲಿ ದಾಖಲಾದ ಮತಗಳಲ್ಲಿ ಶೇ.20 ರಷ್ಟನ್ನು ವಿವಿಪ್ಯಾಟ್ ಗಳ ಮೂಲಕ ಪರಿಶೀಲಿಸಬೇಕು ಎಂದು ಸುಪ್ರೀಂಗೆ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಕಾಂಗ್ರೆಸ್ ಗೆ ಭಾರಿ ಮುಖಭಂಗವಾಗಿದೆ.
ಚುನಾವಣೆ ಆಯೋಗದ ವಿವೇಚನಾಧಿಕಾರದಲ್ಲಿ ಸುಪ್ರೀ ಕೋರ್ಟ್ ಮೂಗು ತೂರಿಸಲು ಆಗಲ್ಲ. ಬೇಕಿದ್ದರೇ ಚುನಾವಣೆ ಪ್ರಕ್ರಿಯೇಗಳ ಬಗ್ಗೆ ಅಸಮಾಧಾನವಿದ್ದರೇ ಅದರ ಸುಧಾರಣೆ ಬಗ್ಗೆ ಚುನಾವಣೆ ನಂತರ ಅರ್ಜಿ ಸಲ್ಲಿಸಿದರೇ ಪರಿಶೀಲಿಸಬಹುದು ಎಂದು ಹೇಳಿದೆ. ಇನ್ನು ಚುನಾವಣೆ ಆಯೋಗ ತಾರತಮ್ಯ ಮಾಡುತ್ತಿದೆ ಎಂದು ನೀವು ಮಾಡುತ್ತಿರುವ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳೇನಾದರೂ ಇವೆಯೇ ಎಂದು ಕಾಂಗ್ರೆಸ್ ವಕೀಲರಿಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಪ್ರಶ್ನೆಗಳಿಗೆ ಇಂಗು ತಿಂದ ಮಂಗನಂತಾಗಿರುವ ಕಾಂಗ್ರೆಸ್ ಶೇ.10 ರಷ್ಟಾದರೂ ವಿವಿಪ್ಯಾಟ್ ಗಳನ್ನು ಪರಿಶೀಲಿಸಬೇಕು ಎಂದು ತನ್ನ ಬೇಡಿಕೆಯ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.
ಕಾಂಗ್ರೆಸ್ ಗುಜರಾತ್ ಕಾರ್ಯದರ್ಶಿ ಅರ್ಜಿ ಸಲ್ಲಿಸಿರುವ ಬಗ್ಗೆಯೂ ಪ್ರಶ್ನೆ ಎತ್ತಿರುವ ಸುಪ್ರೀಂ ಕೋರ್ಟ್ ದೇಶದ ಪ್ರಮುಖ ವಿಪಕ್ಷವಾಗಿ ಕಾಂಗ್ರೆಸ್ ಏಕೆ ನೇರವಾಗಿ ಅರ್ಜಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದೆ. ಇದಕ್ಕೆ ಕಾಂಗ್ರೆಸ್ ಮುಖಂಡರೇ ಉತ್ತರಿಸಬೇಕಿದೆ. ಡಿಸೆಂಬರ 9ರಂದು ಗುಜರಾತ್ ನಲ್ಲಿ ನಡೆದ ಮತದಾನದ ವೇಳೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ಬ್ಲೂಟೂತ್ ಇದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
Leave A Reply