ಟೈಮ್ಸ್ ಸಮೂಹದ ಸಮೀಕ್ಷೆ 2019ಕ್ಕೂ ಮೋದಿಗೆ ಶೇ.79 ಜನರ ಬಲ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹವಾ ಮುಂದುವರಿದಿದ್ದು, ಇದೀಗ ಟೈಮ್ಸ್ ಮಾಧ್ಯಮ ಸಮೂಹ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೇ ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಭಾರತದಲ್ಲಿ ಮತ್ತೊಬ್ಬನಿಲ್ಲ. ಮೋದಿ ಅವರಂತೆ ಸ್ಥಿರ ಸರ್ಕಾರ ನೀಡುವ ಹೊಸ ಮುಖಗಳ್ಯಾವು ಸದ್ಯಕ್ಕಿಲ್ಲ ಎಂಬ ಅಂಶ ಟೈಮ್ಸ್ ಸಮೀಕ್ಷೆಯಲ್ಲಿ ಹೊರ ಬಿದ್ದಿದೆ.
ಜಿಎಸ್ ಟಿ, ನೋಟ್ ಬ್ಯಾನ್ ಸೇರಿ ದೇಶದಲ್ಲಿ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿರುವ ಮೋದಿಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರ ಮಧ್ಯೆ ನಡೆದ ಚುನಾವಣೆಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭರ್ಜರಿ ಗೆಲುವು ಸಾಧಿಸಿತು. ಟೈಮ್ಸ್ ಸಮೂಹ ಭಾರತದ ಹತ್ತು ಭಾಷೆಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 2019ರ ಲೋಕಸಭೆ ಚುನಾವಣೆಯಲ್ಲೂ ಶೇ.79 ರಷ್ಟು ಜನರು ಭರ್ಜರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೂರು ವಿಭಾಗಗಳಲ್ಲಿ ಆನ್ ಲೈನ್ ಸಮೀಕ್ಷೆ ಕೈಗೊಳ್ಳಲಾಗಿತ್ತು. ಡಿಸೆಂಬರ್ 12 ರಿಂದ 15 ರವರೆಗೆ 72 ಗಂಟೆಗೆ ಅಂತರ್ಜಾಲದಲ್ಲಿ ಮತ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಲಕ್ಷಾಂತರ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಕೇವಲ 20 ರಷ್ಟು ಜನರು ರಾಹುಲ್ ಗಾಂಧಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಗೆ ವೈಯಕ್ತಿವಾಗಿ ಅಧಿಕಾರಕ್ಕೆರಲು ಬಹುತೇಕ ಜನರು ಬೆಂಬಲ ವ್ಯಕ್ತಪಡಿಸಿಲ್ಲ. ಮೋದಿ ಎದುರು ರಾಹುಲ್ ಪ್ರಬಲ ಆಡಳಿತ ನೀಡುವ ಭರವಸೆಯನ್ನು ಶೇ.79 ರಷ್ಟು ಜನರು ಹೊಂದಿಲ್ಲ. ಶೇ.31 ರಷ್ಟು ಜನರು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Leave A Reply