ಇವಿಎಂ ಹ್ಯಾಕ್ ಎನ್ನುತ್ತಿರುವ ಸಿದ್ದರಾಮಯ್ಯ ಕಾಂಗ್ರೆಸ್ ನೇತೃತ್ವದ ಪಂಜಾಬ್ ಸಿಎಂ ಮಾತು ಕೇಳಿ
ದೆಹಲಿ: ದೇಶಾದ್ಯಂತ ಬಿಜೆಪಿ ಜಯಭೇರಿ ಬಾರಿಸುತ್ತಿರುವುದರಿಂದ ಕಂಗೆಟ್ಟಿರುವ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ತಮ್ಮ ನೆಲೆ ಉಳಿಸಿಕೊಳ್ಳಲು ಮತ್ತು ಸೋಲಿಗೆ ನೆಪ ಹುಡುಕಾಡಲು ಮತಯಂತ್ರ ದುರ್ಬಳಕೆಯ ಆರೋಪ ಮಾಡುತ್ತಿದ್ದಾರೆ. ವಿಶೇಷವಾಗಿ ಕಾಂಗ್ರೆಸ್ ಅಂಡು ಸುಟ್ಟ ಬೆಕ್ಕಿನಂತಾಡುತ್ತಿದೆ. ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯ ಕೂಡ ಇವಿಎಂ ಬಳಕೆ ಬೇಡ ಎಂದು ಸೋಲಿಗೆ ಮುಂಚೆಯೇ ಗೀಳಿಡುತ್ತಿದ್ದಾರೆ. ಆದರೆ ಇವರೆಲ್ಲರಿಗೂ ಮಾದರಿಯಾಗುವಂತೆ, ಪಂಜಾಬ್ ನಲ್ಲಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿರುವ ಮಾತು ಸದಾ ಸ್ಮರಣೀಯ ಅದನ್ನು ನಮ್ಮ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ಪಾಳಯ ಒಮ್ಮೆ ಕೇಳಿಸಿಕೊಳ್ಳಲೇಬೇಕು.
‘ಮತಯಂತ್ರಗಳು ಹ್ಯಾಕ್ ಆಗುತ್ತಿದ್ದರೇ ನಾನು ಇಂದು ಅಧಿಕಾರಕ್ಕೇ ಏರುತ್ತಿರಲಿಲ್ಲ. ಹ್ಯಾಕ್ ಆಗುತ್ತದೆ ಎಂಬುದು ಸುಳ್ಳು.
ಇದು ಏಪ್ರೀಲ್ ನಲ್ಲಿ ಪಂಚರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಮತ್ತು ಕಾಂಗ್ರೆಸ್ ಒಂದು ರಾಜ್ಯದಲ್ಲಿ ಅಧಿಕಾರಕ್ಕೇರಿದಾಗ ಬಿಜೆಪಿ ವಿರುದ್ಧ ಕೈಮಾಡಿದ ಆರೋಪಕ್ಕೆ ಅವರದ್ದೇ ಪಕ್ಷದ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ ಮಾತು.
ಕೇಂದ್ರ ಕಾನೂನು ಮಾಜಿ ಸಚಿವ ವೀರಪ್ಪ ಮೋಯ್ಲಿ ನಂತರ ಮತಯಂತ್ರಗಳ ದುರ್ಬಳಕೆ ಆರೋಪ ಸರಿಯಲ್ಲ ಎಂದು ಹೇಳುತ್ತಿರುವ ಮತ್ತೊಬ್ಬ ಹಿರಿಯ ಮುಖಂಡ ಅಮರಿಂದರ್ ಸಿಂಗ್.
ಪಂಜಾಬ್ ನಲ್ಲಿ ಕಾಂಗ್ರೆಸ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ 117 ಸ್ಥಾನಗಳಲ್ಲಿ 77 ಸ್ಥಾನಗಳನ್ನು ಪಡೆಯುವ ಮೂಲಕ ಆಡಲಿತದ ಚುಕ್ಕಾಣಿ ಹಿಡಿಯಿತು. ಆದರೆ ಈ ವೇಳೆ ನಾಲ್ಕು ರಾಜ್ಯದಲ್ಲಿ ಸೋತ ಕಾರಣಕ್ಕೆ ಹಲವು ಕೈ ಮುಖಂಡರು ಬಿಜೆಪಿ ವಿರುದ್ಧ ಮತಯಂತ್ರವನ್ನು ಚುನಾವಣೆ ಆಯೋಗದ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದವು. ಆದರೆ ಅವರಿಗೆ ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಮತಯಂತ್ರದಲ್ಲಿ ನಡೆದಿರುವ ಮತ ಪ್ರಕ್ರಿಯೆಯಲ್ಲಿಯೇ ಎಂಬ ಸಣ್ಣ ಜ್ಞಾನವೂ ಇಲ್ಲದಂತೆ ವರ್ತಿಸಿದ್ದರು. ಅಲ್ಲದೇ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
Leave A Reply