ಕಾಂಗ್ರೆಸ್ ಸೋತ 6 ತಾಸಿನಲ್ಲೇ ರಾಹುಲ್ ಸಿನೆಮಾಗೆ ಹೋಗುತ್ತಾರೆ ಎಂದರೆ ಅವರ ಮನಸ್ಥಿತಿ ಎಂಥಾದ್ದು.?
ದೆಹಲಿ: 2017 ಡಿಸೆಂಬರ್ 18 ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ದಿನ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯೆ ನಡೆದ ಭಾರಿ ಪೈಪೋಟಿಯಲ್ಲಿ ಮೋದಿ ವಿಜಯ ದುಂಧುಬಿ ಮೊಳಗಿಸಿದರು. ನಂತರ ಬಿಜೆಪಿ ವಿಜಯೋತ್ಸವ ಆಚರಿಸಿ, ಮೋದಿ, ಅಮಿತ್ ಶಾ ಕಡಿಮೆ ಫಲಿತಾಂಶ ಬಂದಿರುವುದಕ್ಕೆ ಸಮಾಲೋಚನೆ ನಡೆಸುತ್ತಿದ್ದರು.
ಆದರೆ ಅದೇ ಎರಡು ದಿನಗಳ ಹಿಂದೆ ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ರಾಹುಲ್ ಗಾಂಧಿ ಎಂಬ ಕುಟುಂಬದ ಕುಡಿ ತನ್ನ ನಾಲ್ವರು ಗೆಳೆಯರೊಂದಿಗೆ ಸಿನೆಮಾ ನೋಡುತ್ತಾ ಮಜಾ ಮಾಡುತ್ತಿತ್ತು ಎಂಬುದನ್ನು ರಾಷ್ಟ್ರೀಯ ಸುದ್ದಿವಾಹಿನಿಯೊಂದು ತನ್ನ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಗೊಳಿಸಿದೆ.
ಡಿಸೆಂಬರ್ 18 ರಂದು ರಾತ್ರಿ ಬಿಜೆಪಿ ಅಮಿತ್ ಶಾ ಮತ್ತು ಮೋದಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿ, ಕಡಿಮೆ ಸ್ಥಾನ ಬರಲು ಕಾರಣವೇನು ಎಂದು ತಮ್ಮ ಹಿರಿಯ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದರು. ವಿಜಯೋತ್ಸವ ಕೆಲವೇ ಗಂಟೆಗಳ ನಂತರ ಮೋದಿ ಓಖಿ ಚಂಡ ಮಾರುತದಿಂದ ಸಂಕಷ್ಟಕ್ಕೆ ಸಿಲುಕಿದವರ ನೋವು ಆಲಿಸಲು ಪ್ರಯಾಣ ಬೆಳೆಸಿದ್ದರು. ಅದು ಅವರ ಕಾರ್ಯದ ಬದ್ಧತೆ.
ಗುಜರಾತ್ ನಲ್ಲಿ 77 ಮತ್ತು ಹಿಮಾಚಲ ಪ್ರದೇಶದಲ್ಲಿ 20 ಸ್ಥಾನ ಪಡೆದು ಹೀನಾಯ ಸ್ಥಿತಿಗೆ ಇಳಿದ ಕಾಂಗ್ರೆಸ್ ನೇತೃತ್ವದ ವಹಿಸಿಕೊಂಡ ರಾಹುಲ್ ಗಾಂಧಿ ಇದ್ಯಾವುದನ್ನು ಲೆಕ್ಕಿಸದೇ ಸಿನೆಮಾ ನೋಡುತ್ತಾ ಮಜಾ ಮಾಡುತ್ತಿದ್ದ. ಇತ್ತ ರಾಹುಲ್ ಗಾಂಧಿ ಮೇಲೆ ಭರವಸೆ ಇಟ್ಟು ಬೀದಿ ಬೀದಿ ಅಲೆದು ಮತದಾರರನ್ನು ಸೆಳೆದ ಕಾರ್ಯಕರ್ತ ಹಣೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವಂತ ಸ್ಥಿತಿ ನಿರ್ಮಿಸಿದ್ದಾನೆ.
ಒಂದು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ ರಾಹುಲ್ ಗಾಂಧಿ ಚುನಾವಣೆ ಫಲಿತಾಂಶದ ಕುರಿತು ಪರಾಮರ್ಶೆ ನಡೆಸುವುದು ಬಿಟ್ಟು, ಕಾರ್ಯಕರ್ತರ ಅಳಲು ಆಲಿಸುವುದು ಬಿಟ್ಟು, ಭವಿಷ್ಯದಲ್ಲಿ ಸರ್ಕಾರವನ್ನು ಹೇಗೆ ಎಚ್ಚರಿಸಬೇಕು ಎಂಬ ಬದ್ಧತೆಯನ್ನು ಮರೆತು ಸ್ಟಾರ್ ವಾರ್ ಸಿನೆಮಾ ನೋಡಲು ಹೋಗಿರುವುದು ರಾಹುಲ್ ಗಾಂಧಿಯ ನಾಯಕತ್ವದ ಅಪ್ರಬುದ್ಧತೆಗೆ ಸಾಕ್ಷಿ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ದೇಶದ ಭವಿಷ್ಯದ ಪ್ರಧಾನಿ ಎಂದೆ ಸ್ವಪಕ್ಷಿಯರಿಂದ ಬಿಂಬಿಸಲಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತನ್ನೆಲ್ಲ ಜವಾಬ್ದಾರಿ ಮರೆತು ನಾಲ್ಕು ಗೆಳೆಯರ ಜತೆ ಸಿನೆಮಾ ನೋಡಲು ಹೋಗಿರುವುದು ಇಡೀ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿದರೇ, ಒಂದೆಡೆ ಕಾಂಗ್ರೆಸ್ ನ ಭವಿಷ್ಯದ ಗತಿಯೇನು ಎಂಬ ಚಿಂತೆ ಕಾಂಗ್ರೆಸ್ ಮುಖಂಡರನ್ನು ದೃತಿಗೆಡಿಸಿದೆ.
Leave A Reply