ವಿಶ್ವದ ದೊಡ್ಡಣ್ಣ ಅಮೆರಿಕಾದ ವಿರೋಧದ ಮಧ್ಯೆ, ವಿಶ್ವದ ಮುಸ್ಲಿಂ ರಾಷ್ಟ್ರಗಳ ವಾದಕ್ಕೆ ಭಾರತದ ಬೆಂಬಲ
ದೆಹಲಿ: ಇಸ್ರೆಲ್ ರಾಜಧಾನಿಯಾಗಿ ಜೇರುಸೆಲಂನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಬೆಂಬಲಿಸಿರುವ ಮಧ್ಯೆ ಭಾರತವೂ ವಿಶ್ವ ಸಂಸ್ಥೆಯ ಸಭೆಯಲ್ಲಿ ಜೇರುಸೆಲಂ ಇಸ್ರೆಲ್ ರಾಜಧಾನಿ ಎಂಬ ವಾದಕ್ಕೆ ವಿರೋಧ ವ್ಯಕ್ತಪಡಿಸಿದೆ. ಸುಮಾರು ಏಳು ದಶಕಗಳಿಂದ ಇರುವ ಪ್ಯಾಲೆಸ್ತಿನ್ ಮತ್ತು ಇಸ್ರೆಲ್ ಮಧ್ಯದ ವಿವಾದ ಇದೀಗ ಹೊಸ ರೂಪ ಪಡೆದುಕೊಂಡಿದೆ.
ಜೇರುಸೆಲಂ ನ್ನು ಯಾವುದೇ ಕಾರಣಕ್ಕೂ ಇಸ್ರೆಲ್ ರಾಜಧಾನಿಯಾಗಿ ಘೋಷಿಸಬಾರದು ಎಂದು ವಿಶ್ವದ ಮುಸ್ಲಿಂ ರಾಷ್ಟ್ರಗಳು ಆಗ್ರಹಿಸಿದ್ದವು. ಜೇರುಸೆಲಂನ್ನು ಇಸ್ರೆಲ್ ರಾಜಧಾನಿಯಾಗಿ ಘೋಷಿಸಬೇಕು ಎಂಬ ವಾದಕ್ಕೆ ಭಾರತ ಸೇರಿ 100 ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.
ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿ ಅಮೆರಿಕದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಜೇರು ಸೆಲಂ ಕುರಿತ ಅಭಿಪ್ರಾಯ ಕೇಳಿ ಮತದಾನ ಏರ್ಪಡಿಸಿತ್ತು. ಇದರಲ್ಲಿ ಭಾರತ ವಿಶ್ವದ ಮುಸ್ಲಿಂ ರಾಷ್ಟ್ರಗಳ ವಾದವನ್ನು ಬೆಂಬಲಿಸಿ, ವಿಶ್ವಸಂಸ್ಥೆಯ ವಾದಕ್ಕೆ ಬೆಂಬಲ ಸೂಚಿಸಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ್ದರು. ಈ ವೇಳೆ ಪಕ್ಕದ ಪ್ಯಾಲೆಸ್ತಿನ್ ಗೆ ಭೇಟಿ ನೀಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಮುಂದಿನ ತಿಂಗಳು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತ್ಯಾನುಹ್ ಭಾರತಕ್ಕೆ ಭೇಟಿ ನೀಡಲಿದ್ದು, ಭಾರತದ ಈ ನಿರ್ಧಾರ ತೀವ್ರ ಮಹತ್ವ ಪಡೆದುಕೊಂಡಿದೆ.
ನಮ್ಮ ನಿರ್ಧಾರಗಳು ಕೆಲ ಮೌಲ್ಯಯುತ ತತ್ವಗಳ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ. ನಾವು ಸುದೀರ್ಘ ಮತ್ತು ಬಲಿಷ್ಟ ಸಂಬಂಧವನ್ನು ಹೊಂದಲು ಇಚ್ಛಿಸುತ್ತೇವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಡಿಸೆಂಬರ್ 6ರಂದು ಡೋನಾಲ್ಡ್ ಟ್ರಂಪ್ ಘೋಷಿಸಿರುವ ಮಧ್ಯೆಯೇ ಭಾರತದ ನಿಲುವು ಬದಲಾಗಿದೆ ಎನ್ನಲಾಗಿದೆ. ಆದರೆ ಯಾವುದೋ ಮೂರನೇ ರಾಷ್ಟ್ರದ ನಿರ್ಧಾರಕ್ಕೆ ನಾವು ಬೆಂಬಲ ನೀಡುವುದಿಲ್ಲ. ನಮ್ಮ ನಿಲುವು ಸ್ಪಷ್ಟ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Leave A Reply