ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಹೋಗಬೇಕಂತೆ!

ತಿರುವನಂತಪುರ: ಜ್ವರ, ನೆಗಡಿ, ತಲೆನೋವು ಸೇರಿ ಇನ್ನಾವುದೇ ಕಾಯಿಲೆ ಆವರಿಸಿದರೂ ವೈದ್ಯರ ಬಳಿ ತೆರಳುತ್ತೇವೆ. ವೈದ್ಯರೋ, ವೈದ್ಯೆಯೋ, ಹಿಂದೂವೋ, ಮುಸ್ಲಿಮ್ಮೋ, ಯಾರೇ ಇರಲಿ ಚಿಕಿತ್ಸೆ ಪಡೆಯುತ್ತೇವೆ. ಮಹಿಳೆಯರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸಹ ಪುರುಷ ವೈದ್ಯರೇ ಮಾಡುತ್ತಾರೆ.
ಆದರೆ ಕೇರಳದ ಮುಸ್ಲಿಂ ವಿವಾದಿತ ಸಲಫಿ ಗುರು ಅಬ್ದುಲ್ ಮುಹ್ಸಿನ್ ಅಯ್ದೀದ್ ಮಾತ್ರ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದ್ದಾರೆ.
ಅಲ್ಲದೆ ವೈದ್ಯರು ಬಳಸುವ ರೆಡ್ ಕ್ರಾಸ್ ಸಂಕೇತ ಮೂರ್ತಿ ಪೂಜೆಯ ದ್ಯೋತಕವಾಗಿದ್ದು, ವೈದ್ಯರು ಇವುಗಳನ್ನು ಬಳಸಬಾರದು ಎಂದು ಸಮ್ ಅಡ್ವೈಸ್ ಟು ಡಾಕ್ಟರ್ಸ್ ಎಂಬ ಶೀರ್ಷಿಕೆಯಡಿ ವೈದ್ಯರಿಗೇ ಉಪದೇಶ ನೀಡಿದ್ದಾರೆ.
ಇಸ್ಲಾಮಿನ ಪ್ರಕಾರ ಒಬ್ಬ ಪುರುಷನ ಜತೆ ಒಂದೇ ಕೋಣೆಯಲ್ಲಿ ಮಹಿಳೆ ಇರಬಾರದು. ಹೀಗೆ ಇರುವುದು ಇಸ್ಲಾಮಿನಲ್ಲಿ ನಿಷಿದ್ಧ. ಹಾಗಾಗಿ ಮುಸ್ಲಿಂ ಮಹಿಳೆಯರು ಮುಸ್ಲಿಂ ಮಹಿಳಾ ವೈದ್ಯರ ಬಳಿಯಷ್ಟೇ ಹೋಗಬೇಕು. ಒಂದು ವೇಳೆ ಮುಸ್ಲಿಂ ಮಹಿಳಾ ವೈದ್ಯರು ಇರದಿದ್ದರೆ, ಇಸ್ಲಾಂ ಧರ್ಮದ ಪುರುಷ ವೈದ್ಯರ ಬಳಿ ತೆರಳಬೇಕು. ಪುರುಷ ವೈದ್ಯರು ಮಹಿಳೆಯರನ್ನು ಮುಟ್ಟಬಾರದು. ಆದಾಗ್ಯೂ ಮುಟ್ಟುವ ಸಂದರ್ಭ ಬಂದರೆ ಕೈಗೆ ಗ್ಲೌಸ್ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲ ವೈದ್ಯೋ ನಾರಾಯಣ ಹರಿಯೇ ಅರ್ಥಾತ್ ವೈದ್ಯರೇ ದೇವರು ಎಂದು ಬಿಂಬಿಸಲಾಗಿದೆ. ಹೀಗಿರುವಾಗ ಕಾಯಿಲೆ ಬಂದರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಬಿಟ್ಟು, ನೀನು ಮುಸ್ಲಿಂ ವೈದ್ಯನಾ ಎಂದು ಎಲ್ಲಿ ಹುಡುಕಬೇಕು? ಧರ್ಮದ ಹೆಸರಲ್ಲಿ ಹೀಗೆ ಅನಾಚಾರ ಬೋಧಿಸುವವರನ್ನು ಏನೆಂದು ಕರೆಯಬೇಕು?
Leave A Reply