ಉಗ್ರ ಸಂಘಟನೆಗೆ ಸೇರದ ಮುಸ್ಲಿಂ ಯುವಕ ಏನಾದ ಗೊತ್ತಾ..? ಕೇಳಿ ಆ ಸ್ಫೂರ್ತಿಯ ಕಥೆಯಾ…
ಶ್ರೀನಗರ: 18 ವರ್ಷಗಳ ಹಿಂದೆ ಭಯೋತ್ಪಾದನಾ ಗುಂಪಿನೊಂದಿಗೆ ಕೈಜೋಡಿಸು ಎಂದು ಯುವಕನನ್ನು ಹಿಂಸಿಸುತ್ತಾರೆ ಉಗ್ರರು, ಆದರೆ ಆ ಯುವಕನ ಕುಟುಂಬದವರು ಉಗ್ರರಿಗೆ ತಕ್ಕ ಉತ್ತರ ನೀಡಿ, ನಮ್ಮ ಮಗ ಉಗ್ರರೊಂದಿಗೆ ಕೈಜೋಡಿಸಲ್ಲ ಎನ್ನುತ್ತಾರೆ. ಅದಕ್ಕೆ ಉಗ್ರರು ನೆಮ್ಮದಿಯಿಂದ ಇದ್ದ ಆ ಕುಟುಂಬದ ಮನೆಯನ್ನೇ ಸುಟ್ಟು ಹಾಕುತ್ತಾರೆ. ಉಗ್ರರು ಸುಟ್ಟ ಮನೆಯಿಂದಲೇ ಅಂದು 2 ವರ್ಷದ ಹಸುಗೂಸು ಇಂದು ಕಾಶ್ಮೀರದ ಸಿವಿಲ್ ಪರೀಕ್ಷೆಯಲ್ಲಿ ಪಾಸಾಗಿ ಕಲ್ಲೆಸೆಯುವ ಯುವಕರಿಗೆ ಮಾದರಿಯಾಗಿದ್ದಾನೆ.
ಕಾಶ್ಮೀರದ ಸುರಾನ್ ಕೋಟ್ ನಲ್ಲಿ ಕುಟುಂಬಸ್ಥರೆಲ್ಲರು ವಾಸಿಸುತ್ತಿರುವ 27 ವರ್ಷದ ಅಂಜುಮ್ ಬಷೀರ್ ಖಾನ್ ಉಗ್ರರ ಕಿರುಕುಳ ಮೆಟ್ಟಿ ನಿಂತು, ಪ್ರತ್ಯೇಕವಾದಿಗಳೊಡನೆ ಕೈಜೋಡಿಸದೇ ಉತ್ತಮ ಅಭ್ಯಾಸ ಮಾಡಿ, ಕಾಶ್ಮೀರ್ ಸಿವಿಲ್ ಪರೀಕ್ಷೆಯಲ್ಲಿ ಪಾಸಾಗಿ ಸರ್ಕಾರಿ ನೌಕರಿ ಪಡೆದು ನೆಮ್ಮದಿ ಜೀವನ ಸಾಗಿಸುತ್ತಿರುವ ಮಾದರಿ ಯುವಕ.
ಜಮ್ಮು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸಾಗಿರುವ ಯುವಕ ಅಂಜುಮ್ ‘ಭಯೋತ್ಪಾದನೆಯ ಕರಾಳ ಛಾಯೆಯಿಂದ ಸಂಕಷ್ಟದಲ್ಲಿರುವ ಸುರಾನ್ ಕೋಟ್ ಜನರ ಸೇವೆ ಮಾಡಲು ಇಚ್ಛಿಸಿದ್ದಾರೆ. ಶಿಕ್ಷಣವೇ ಬದಲಾವಣೆಗೆ ಮೂಲ ಕಾರಣ. ಯುವಕರು ಶಿಕ್ಷಣದತ್ತ ಒಲವು ಹೊಂದಬೇಕು. ಆಗ ಮಾತ್ರ ಏಳಿಗೆ ಸಾಧ್ಯ ಎಂದು ಹೇಳುವ ಮೂಲಕ ಭಯೋತ್ಪಾದನೆಗೆ ಒಳಗಾಗುತ್ತಿರುವ ಯುವಕರಿಗೆ ಸಂದೇಶ ನೀಡಿದ್ದಾರೆ.
ಸುರಾನ್ ಕೋಟ್ ನ ತೆಹ್ಸಿಲ್ ಪ್ರದೇಶ ಜಮ್ಮುಕಾಶ್ಮೀರದಲ್ಲೇ ಅತಿ ಹೆಚ್ಚು ಭಯೋತ್ಪಾದಕರಿಂದ ಪೀಡನೆಗೆ ಒಳಗಾದ್ದದ್ದು. 1999ರಲ್ಲಿ ಅಂಜುಮ್ ತಂದೆ ಮಹಮ್ಮದ್ ಬಷೀರ್ ಭಾರಿ ಸಂಕಷ್ಟವನ್ನು ಎದುರಿಸಿದ್ದರು. ನಿತ್ಯ ಮಕ್ಕಳನ್ನು ಭಯೋತ್ಪಾದಕರೊಂದಿಗೆ ಕೈಜೋಡಿಸಿ ಎಂದು ಕಿರುಕುಳ ನೀಡಲಾಗುತ್ತಿತ್ತು. ವಿರೋಧಿಸಿದಕ್ಕೆ ಮನೆಯನ್ನೇ ಭಯೋತ್ಪಾದಕರು ಸುಟ್ಟು ಕರಕಲಾಗಿ ಮಾಡಿದರು. ಅದನ್ನು ಎದುರಿಸಿ ಮಹಮ್ಮದ್ ಬಷೀರ್ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಹೊಸ ಲೋಕವನ್ನು ಪರಿಚಯಿಸಿದರು.
ನನ್ನ ಮಕ್ಕಳು ಶಾಂತಿಯ ಪ್ರತಿರೂಪವಾಗಬೇಕು ಎಂದು ನಾನು ಭಯಸುತ್ತೇನೆ. ಯಾವ ಮಕ್ಕಳು ಭಯೋತ್ಪಾದನೆಯ ಪಾಶಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೋ ಅವರಿಗೆ ನನ್ನ ಮಕ್ಕಳು ಮಾದರಿಯಾಗಬೇಕು ಎನ್ನುತ್ತಾರೆ ಖಾನ್ ತಂದೆ ಮಹಮ್ಮದ್ ಬಷೀರ್.
ಪರೀಕ್ಷೆ ಬರೆದ 1200 ಜನರಲ್ಲಿ ಕೇವಲ 51 ಜನ ಪಾಸಾಗಿದ್ದು, ಅದರಲ್ಲಿ ಅಂಜುಮ್ ಖಾನ್ ಸಾಧನೆ ಸ್ಫೂರ್ತಿದಾಯಕವಾಗಿದ್ದು, ಕುಟುಂಬಸ್ಥರು ಖುಷಿಯಲ್ಲಿದ್ದಾರೆ. ಅಲ್ಲದೇ ಇತರ ಮಕ್ಕಳು ಖಾನ್ ನಂತೆ ಶಿಕ್ಷಣ ಪಡೆದು ನೆಮ್ಮದಿಯ ಜೀವನ ನಡೆಸಲಿ ಎಂದು ಆಶಿಸಿದ್ದಾರೆ.
Leave A Reply