• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನೀವು ಭೈರಪ್ಪನವರಿಗೆ ‘ಆಪ್ತ’ರಾಗಿದ್ದರೆ ನಿಮಗಾಗಿಯೇ ಹೊಸ ಹುದ್ದೆ ಸೃಷ್ಟಿಸಲಾಗುತ್ತದೆ!

Tulunadu News Posted On December 26, 2017
0


0
Shares
  • Share On Facebook
  • Tweet It

ವಿಶ್ವ ವಿದ್ಯಾಲಯ ಒಂದು ಸ್ವಾಯತ್ತ ಸಂಸ್ಥೆಯಾದರೂ ಅದು ಸರಕಾರದ ಅಧೀನದಲ್ಲಿ ಬರುವ ಸಂಸ್ಥೆ. ವಿವಿಯ ಕುಲಪತಿಯವರು ಒಂದು ನಿರ್ಧಿಷ್ಟ ನಿಯಮಗಳನ್ನು ಮಾಡಿ ಅದರ ಮೂಲಕವೇ ನೇಮಕಾತಿಗಳನ್ನು ಮಾಡಬೇಕು. ಆದರೆ ಭೈರಪ್ಪನವರ ನಾಲ್ಕು ವರ್ಷಗಳ ಅವಧಿಯಲ್ಲಿ ಆದ ಹಂಗಾಮಿ ನೇಮಕಾತಿಗಳಿಗೆ ಲೆಕ್ಕವೇ ಇಲ್ಲ. ತನ್ನ ಹತ್ತಿರದ ಸಂಬಂಧಿ (ಬಾವನಿಗೆ) ಗೆ ಟೆಂಡರ್ ಕೊಟ್ಟಿದ್ದಾರೆ. ವಿವಿಗೆ ಬೇಕಾದ ಗುತ್ತಿಗೆ ಕಾರ್ಮಿಕರನ್ನು ನೇಮಿಸುವ ಗುತ್ತಿಗೆ ಕೊಟ್ಟಿದ್ದು ಕ್ಯಾನನ್ ಎನ್ನುವ ಸಂಸ್ಥೆಗೆ. ಯಾಕೆಂದರೆ ಇದೇ ಸಂಸ್ಥೆ ಭೈರಪ್ಪನವರು ಮಂಗಳೂರು ವಿವಿಗೆ ಕುಲಪತಿಯಾಗಿ ಬರಲು ಹಿಂದಿರುವ ರಾಜ್ಯಪಾಲರಿಗೆ ಲಂಚ ಕೊಟ್ಟಿತ್ತು. ಅದಕ್ಕೆ ಟೆಂಡರ್ ಅವರಿಗೆ.
ಈ ಗುತ್ತಿಗೆದಾರರು ಯಾವ ರೀತಿಯಲ್ಲಿ ವಿವಿಯ ಕಾರ್ಮಿಕರನ್ನು ಶೋಷಿಸುತ್ತಿದ್ದಾರೆ ಎನ್ನುವುದನ್ನು ಈ ಹಿಂದಿನ ವರದಿಗಳಿಂದ ನಿಮಗೆ ತಿಳಿಸಲಾಗಿದೆ. 1/3 ರಷ್ಟು ಮಾತ್ರ ಸಂಬಳ, ಕೇಳಲು ಹೋದವರಿಗೆ ಬೆದರಿಕೆ. ಅದಕ್ಕಾಗಿ ಆಪ್ತರನ್ನು ಬಳಕೆ ಮಾಡುವ ಭೈರಪ್ಪನವರು ವಿವಿಯ ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ತನ್ನ ಸಂಬಂಧಿಗಳು, ಸ್ವಜಾತಿಯವರು ಮತ್ತು ಇಷ್ಟಮಿತ್ರರನ್ನೇ ತುಂಬಿಸಿದ್ದಾರೆ. ಯಾರಾದರೂ ಸ್ವಲ್ಪ ಧ್ವನಿ ಎತ್ತಿದರೂ ಅವರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಬೆದರಿಕೆ, ರೌಡಿಸಂ ಎಲ್ಲವೂ ನಡೆಯುತ್ತಿದೆ. ಅದಕ್ಕಾಗಿ ಯಾರೂ ಕೂಡ ಬಾಯಿ ಬಿಡುತ್ತಿಲ್ಲ. ಬಾಯಿ ಬಿಡುವವರ ಮೇಲೆ ಅವರ ಹದ್ದಿನ ಗ್ಯಾಂಗ್ ಕಣ್ಣಿಟ್ಟಿದೆ. ವಿದ್ಯಾ ದೇವಾಲಯವೊಂದು ಹಣ ದೋಚುವವರಿಗೆ ತಿಜೋರಿಯಂತೆ ಕಾಣಿಸುತ್ತಿದೆಯೋ ಎಂದು ಅನಿಸುತ್ತಿದೆ.
ಪರೀಕ್ಷಾಂಗ ವಿಭಾಗದಲ್ಲಿ ನಕಲಿ ಅಂಕಪಟ್ಟಿ, ಅಂಕಗಳಲ್ಲಿ ಮಾರ್ಪಾಡು, ದೂರಶಿಕ್ಷಣದಲ್ಲಿ ಗೋಲ್ ಮಾಲ್ ಇವೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಬ್ಬ ಸಿಂಡಿಕೇಟ್ ಸದಸ್ಯರ ಬಿ.ಕಾಂ ಫೈಲ್ ಮಾರ್ಕ್ ಕಾರ್ಡ್ ಎಷ್ಟೋ ವರ್ಷಗಳ ನಂತರ ಪಾಸ್ ಆಗಲು ಒಬ್ಬ ಸಿಂಡಿಕೇಟ್ ಮೆಂಬರ್ ನ ಶ್ರೀರಕ್ಷೆ ಇರುವುದು ಈಗಾಗಲೇ ವರದಿಯಾಗಿದೆ. ಅವರ ಬಗ್ಗೆ ರಾಜ್ಯಪಾಲರು ಏನೂ ಕ್ರಮ ಕೈಗೊಳ್ಳದೇ ಇರುವುದರಿಂದ ಆ ಬಗ್ಗೆ ಮತ್ತೊಮ್ಮೆ ರಾಜ್ಯಪಾಲರಿಗೆ ಈ ಕುರಿತು ಮನವಿ ಮಾಡುವುದಕ್ಕೆ ಚಿಂತಿಸಲಾಗುವುದು. ವಿವಿಯ ಎಲ್ಲಾ ಅಕ್ರಮಗಳಲ್ಲೂ ತುಘಲಕ್ ಆಡಳಿತದಲ್ಲಿ ಈ ನಗು ಮುಖದ ವ್ಯಕ್ತಿಯ ಪಾತ್ರ ಇದ್ದೇ ಇದೆ. ಅವರು ಪ್ರತಿಯೊಂದು ಅಕ್ರಮ ವ್ಯವಹಾರದಲ್ಲಿ ಭೈರಪ್ಪನವರಿಗೆ ಮಾರ್ಗದರ್ಶಕನಾಗಿ, ಗೆಳೆಯನಾಗಿ, ಅಕ್ರಮ ಪಾಲುದಾರನಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿಫಲವಾಗಿ ಆ ಸಿಂಡಿಕೇಟ್ ಸದಸ್ಯ ಮಾಡುವ ಪ್ರತಿಯೊಂದು ಅನೈತಿಕ ಚಟುವಟಿಕೆಗಳಿಗೆ ಸಂಪೂರ್ಣ ರಕ್ಷಣೆ ಸಿಗುತ್ತದೆ.
ಎ ಎಂ ಖಾನ್ ನ ಹೆಂಡತಿ ನೇಮಕವಾಗಿ ಆರು ತಿಂಗಳು ಕೆಲಸಕ್ಕೆ ಸೇರದಿದ್ದರೂ, ಅಕ್ರಮವಾಗಿ ಪಿಎ ಕಾಲೇಜಿನಲ್ಲಿ ಪಾಠ ಮಾಡಿ ಅಲ್ಲಿ ಕೂಡ ಆದಾಯ ಗಳಿಸುತ್ತಿದ್ದರೂ, ಸಂಬಳ ತಡೆಹಿಡಿದ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯನವರಿಗೆ ನಾನಾ ರೀತಿಯ ಕಿರುಕುಳ ಮಾನಸಿಕ ವೇದನೆ ನೀಡಲಾಯಿತು. ಬೇರೆ ಬೇರೆ ವಿಷಯಗಳನ್ನು ನೆಪ ಮಾಡಿ ಅವರಿಗೆ ನೋಟಿಸು, ವರ್ಗಾವಣೆ, ಕಡ್ಡಾಯ ರಜೆ ಎಲ್ಲವನ್ನೂ ಮಾಡಲಾಯಿತು. ಅವರು ಎಲ್ಲದಕ್ಕೂ ಕೋರ್ಟಿನಿಂದ ಸ್ಟೇ ತಂದರು. ಆದರೆ ಇದಕ್ಕೆ ಮೂಲಕ ಕಾರಣ ಖಾನ್ ನ ಹೆಂಡತಿಯ ಸಂಬಳ ತಡೆ ಹಿಡಿದದ್ದು. ಖಾನ್ ಮತ್ತು ಆತನ ಹೆಂಡತಿಗಾಗಿ ಭೈರಪ್ಪನವರು ಏನೂ ಮಾಡಲು ಕೂಡ ಸಿದ್ಧರಿದ್ದಾರೆ.
ಮೊದಲಿಗೆ ಮಂಗಳೂರು ವಿವಿಯಲ್ಲಿ ಖಾನ್ ಪತ್ನಿಗಾಗಿ ಒಂದು ಹೊಸ ಹುದ್ದೆ ಸೃಷ್ಟಿಸಲಾಯಿತು. ಭೈರಪ್ಪ ಆಕೆಯನ್ನು ಮಡಿಕೇರಿಯಿಂದ ಇಲ್ಲಿಗೆ ತಂದು ತನ್ನ ಆಪ್ತಸಹಾಯಕಿಯಾಗಿ ನೇಮಿಸಿದರು. ಅನಂತರ ಜಾಗ ಇಲ್ಲದಿದ್ದರೂ ವಿವಿ ಕ್ಯಾಂಪಸ್ ನ ಅರ್ಥಶಾಸ್ತ್ರ ವಿಭಾಗಕ್ಕೆ ಹೊಕ್ಕಿಸಿದ್ರು. ವಿವಿಯನ್ನು ಭೈರಪ್ಪನವರು ತಮ್ಮ ಸ್ವಲಾಭಕ್ಕೆ ಹೇಗೆ ಬಳಸುತ್ತಿದ್ದಾರೆ ಎನ್ನುವ ಅಧ್ಯಾಯ ಮುಂದುವರೆಯಲಿದೆ.

0
Shares
  • Share On Facebook
  • Tweet It




Trending Now
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
  • Popular Posts

    • 1
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 2
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 3
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search