ಕಾಶ್ಮೀರಕ್ಕಾಗಿ ಭಾರತದ ಮೇಲೆ ದಾಳಿ ಮಾಡುವೆನೆಂದ ಅಲ್ ಖೈದಾ ಉಗ್ರ
ದೆಹಲಿ: ಭಾರತ ಸರ್ಕಾರ ಕಾಶ್ಮೀರದಲ್ಲಿ ಆರು ಲಕ್ಷ ಸೈನಿಕರನ್ನು ನೇಮಿಸಿ ದ್ರೋಹ ಬಗೆಯುತ್ತಿದ್ದು, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡದಿದ್ದರೇ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಅಲ್ ಖೈದಾ ಉಗ್ರ ಸಂಘಟನೆಯ ಉಸಾಮ್ ಮೆಹ್ಮುದ್ ವಿಡಿಯೋದಲ್ಲಿ ಹೇಳಿದ್ದಾನೆ.
ಮಂಗಳವಾರ ರಾತ್ರಿ ವಿಡಿಯೋ ಬಿಡುಗಡೆ ಮಾಡಿರುವ ಅಲ್ ಖೈದಾ ಸಂಘಟನೆಯ ಕಮಾಂಡರ್ ಉಸಾಮ್ ಮೆಹಮುದ್ ‘ಕಾಶ್ಮೀರದ ಸ್ವಾತಂತ್ರ್ಯದ ಹೋರಾಟ ಮುಂದುವರಿಲಿದೆ. ಭಾರತ ಕಾಶ್ಮೀರದ ಮೇಲಿನ ಹಿಡಿತ ಹಿಂಪಡೆಯದಿದ್ದರೇ ಭಾರತ ಪ್ರಮುಖ ನಗರಗಳಾದ ಕೊಲ್ಕತ್ತಾ, ಬೆಂಗಳೂರು, ದೆಹಲಿ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಇದು ಮುಸ್ಲಿಮರ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಹೋರಾಟ. ಕಾಶ್ಮೀರದ ಹೋರಾಟ ಜಿಹಾದ್ ಚಳುವಳಿಗ ಮುಖ್ಯ ಗುರಿ. ಕಾಶ್ಮೀರ ಚಳವಳಿಯಿಂದ ಜಿಹಾದ್ ಗೆ ಬಲ ಬರಲಿದೆ. ಮುಸ್ಲಿಮರೇ ಹೆಚ್ಚು ಇರುವ ಪ್ರದೇಶವೊಂದನ್ನು ಭಾರತ ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡಿರುವುದು ಸರಿಯಲ್ಲ ಎಂದು ಬೊಗಳಿದ್ದಾನೆ. ಭಾರತದ ಹಿಂದೂ ಸರ್ಕಾರ ಮತ್ತು ಸೈನ್ಯ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೇ ಕಠಿಣ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾನೆ.
ಮಂಗಳವಾರ ರಾತ್ರಿಯೇ ಅಲ್ ಖರಾರ್ ಎಂದು ಹೇಳಿಕೊಂಡಿರುವ ಉಗ್ರ ಸಂಘಟನೆಯೂ ವಿಡಿಯೋ ಬಿಡುಗಡೆ ಮಾಡಿದೆ. ಈ ಇಸ್ಲಾಂ ರಾಷ್ಟ್ರದ ಪ್ರತಿಪಾದಕಾರದ ಖಲೀಫ್, ಇಬ್ರಾಹಿಮ್ ಅವಾದ್ ಅಲ್-ಬದ್ರಿ ಅಲ್ಲದೇ ಅಬು ಬಕರ್ ಅಲ್ ಬಗಾದಿಯ ಜತೆ ಕೈಜೋಡಿಸಿ ಒಗ್ಗಟ್ಟಿನ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ಶಸ್ತ್ರ ಸಜ್ಜಿತ ಜಿಹಾದಿ ಅಬು ವಲ್ ಬರಾರ್ ಎಂಬ ಗುಪ್ತ ಹೆಸರಿನಲ್ಲಿ ವಿಡಿಯೋ ಮಾಡಿದ್ದು ‘ದೇವರನ್ನು ಹೀಯಾಳಿಸಿ, ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇನ್ನು ಈ ವಿಡಿಯೋ ಶ್ರೀನಗರದ ಕಾಶ್ಮೀರದ ಜಾಮಿಯಾ ಮಸೀದಿ ಬಳಿ ಮಾಡಲಾಗಿದೆ ಎನ್ನಲಾಗಿದೆ.
Leave A Reply