ಫೋನ್ ನಲ್ಲಿ ತಲಾಕ್ ಕೊಟ್ಟ ಇರಾನಿ ಗಂಡನಿಂದ ಪರಿಹಾರ ಕೊಡಿಸಿ!
ಒಂದು ಕಡೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸುವುದಕ್ಕಾಗಿ ತ್ರಿವಳಿ ತಲಾಕ್ ಅನ್ನು ನಿಷೇಧಿಸಿ ಅದನ್ನು ಕ್ರಿಮಿನಲ್ ಅಪರಾಧ ಎನ್ನುವ ಕಾನೂನು ತರಲು ಪ್ರಯತ್ನಿಸುತ್ತಿರುವಾಗಲೇ ಮತ್ತೊಂದು ತ್ರಿವಳಿ ತಲಾಕ್ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಅನ್ಯಾಯಕ್ಕೊಳಗಾದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. 31 ವರ್ಷದ ಗೌಸೀಯ ಬೇಗಂ ಅವರು ಸುಶ್ಮಾ ಸ್ವರಾಜ್ ಅವರಿಗೆ ಬರೆದ ಪತ್ರದಲ್ಲಿ 2008 ರಲ್ಲಿ ತಮಗೆ ಹಾಗೂ ಇರಾನ್ ನಿವಾಸಿ ಸೈದ್ ಝಾರನ್ ಹಮೀದ್ ಆಲ್ ರಾಜಿಹಿ ಅವರಿಗೆ ಮದುವೆಯಾಗಿತ್ತು. ಒಮನ್ ಸುಲ್ತಾನೇಟ್ ನಿಝ್ವಾನ್ ನಲ್ಲಿ ವಾಸಿಸುವ ಸೈದ್ ಝಾರನ್ ಅವರಿಗೆ ಆ ಸಮಯದಲ್ಲಿ ಏಳು ಮಹಿಳೆಯರನ್ನು ತೋರಿಸಲಾಗಿತ್ತು. ಅದರಲ್ಲಿ ಆತ ನನ್ನನ್ನು ಆಯ್ಕೆ ಮಾಡಿದ್ದ ಎಂದು ಸಂತ್ರಸ್ತೆ ಮಹಿಳೆ ತನ್ನ ನೋವು ತೋಡಿಕೊಂಡಿದ್ದಾಳೆ. ಅದರ ನಂತರ ಆತ ತನಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ತಾನು ತನ್ನ ತಾಯಿಯೊಂದಿಗೆ ಹೈದ್ರಾಬಾದ್ ನಲ್ಲಿ ವಾಸಿಸುತ್ತಿದ್ದೇನೆ. ಮೊನ್ನೆ ಅಗಸ್ಟ್ ನಲ್ಲಿ ಫೋನ್ ಮಾಡಿ ಸೈದ್ ಮೂರು ಬಾರಿ ತಲಾಕ್ ಹೇಳಿದ್ದಾನೆ. ಅದರ ನಂತರ ತನಗೆ ಯಾವುದೇ ಹಣ ಕಳುಹಿಸಿಲ್ಲ. ಅದಲ್ಲದೆ ಜೀವನಾಂಶದ ಬಗ್ಗೆ ಯಾವುದೇ ಮಾತನ್ನು ಹೇಳಿಲ್ಲ. ಇದರಿಂದ ತನಗೆ ಮತ್ತು ತನ್ನ ಮುದಿ ತಾಯಿಗೆ ಜೀವನ ಸಾಗಿಸುವುದೇ ಕಷ್ಟವಾಗಿದೆ. ತಮಗೆ ಆದ ಅನ್ಯಾಯಕ್ಕೆ ಭಾರತ ಸರಕಾರ ಒಮನ್ ಸರಕಾರದೊಂದಿಗೆ ಮಾತನಾಡಿ ಮೋಸ ಮಾಡಿದ ಸೈದ್ ಜಝಾನ್ ಕಡೆಯಿಂದ ನ್ಯಾಯ ಕೊಡಿಸಬೇಕಾಗಿ ಗೌಸೀಯಾ ಬೇಗಂ ಸರಕಾರವನ್ನು ಒತ್ತಾಯಿಸಿದ್ದಾರೆ.
2008 ರಲ್ಲಿ ಮದುವೆ ಆದ ಬಳಿಕ ವರ್ಷಕ್ಕೊಮ್ಮೆ ಸೈದ್ ಹೈದ್ರಾಬಾದ್ ಗೆ ಬರುತ್ತಿದ್ದ. ಬಡ ಕುಟುಂಬದಲ್ಲಿ ಹುಟ್ಟಿರುವ ತನಗೆ ಶ್ರೀಮಂತ ಗಂಡ ಸಿಕ್ಕಿದ ಖುಷಿ ಆಗಿತ್ತು. ಆದರೆ ತನ್ನ ಯಾವ ತಪ್ಪು ಇಲ್ಲದಿದ್ದರೂ ತನಗೆ ತಲಾಕ್ ಕೊಟ್ಟಿರುವ ಗಂಡನ ಬಗ್ಗೆ ತನಗೆ ಅತೀವ ನೋವಿದೆ ಎಂದು ಬೇಗಂ ಪತ್ರದಲ್ಲಿ ಹೇಳಿದ್ದಾರೆ.
ತ್ವರಿತ ತ್ರಿವಳಿ ತಲಾಕ್ ಅಮಾನವೀಯ ಪದ್ಧತಿಯಾಗಿದ್ದು ಅದಕ್ಕೆ ಬಲಿಯಾಗುವ ಮುಸ್ಲಿಂ ಮಹಿಳೆಯರನ್ನು ಕಾಪಾಡುವುದಕ್ಕಾಗಿ ಕೇಂದ್ರ ಸರಕಾರ ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಅಖಿಲ ಭಾರತೀಯ ಪರ್ಸನಲ್ ಲಾ ಬೋರ್ಡ್ ಅದಕ್ಕೆ ವಿರುದ್ಧವಾಗಿ ನಿಂತಿದೆ.
ಹೆಣ್ಣು ಕೇವಲ ಭೋಗಕ್ಕಾಗಿ ಬಳಕೆಯಾಗುವ ವಸ್ತುವಲ್ಲ ಎನ್ನುವುದು ಭಾರತೀಯ ಸಂಸ್ಕೃತಿ. ಆಕೆಯನ್ನು ಕೇವಲ ದೈಹಿಕ ಸುಖಕ್ಕಾಗಿ ಬಳಸಿ ಬಿಸಾಡುವ ಅನಿಷ್ಟ ಪದ್ಧತಿ ತ್ವರಿತ ತಲಾಕ್ ಅನ್ನು ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳಿಗೂ ದೇಶದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕೊಡಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಸುಶ್ಮಾ ಸ್ವರಾಜ್ ಹೇಳಿದ್ದಾರೆ.
Leave A Reply