ಬೆಂಗಳೂರಿನಲ್ಲಿ ಗೆಸ್ಟ್ ಹೌಸ್ ಯಾಕೆ ಭೈರಪ್ಪನವರೇ?
ಮಂಗಳೂರು ವಿಶ್ವವಿದ್ಯಾನಿಲಯದ ನೇರ ಅಧೀನದಲ್ಲಿ ಬರುವ ಕೊಣಾಜೆ ಕ್ಯಾಂಪಸ್, ಹಂಪನಕಟ್ಟೆ, ಮಡಿಕೇರಿ, ಚಿಕ್ಕ ಆಳುವಾರ ಕ್ಯಾಂಪಸ್ ಗೆ ಎಗ್ಗಿಲ್ಲದೆ ಮೈಸೂರು, ಮಂಡ್ಯ, ಪರಿಯಾಪಟ್ಟಣ, ಹುಣಸೂರು ಭಾಗಗಳಿಂದ ಎಟೆಂಡರ್, ಪಿಯೋನ್, ಕ್ಲಾರ್ಕ್ ನುಗ್ಗಿ ಬರುತ್ತಿದ್ದಾರೆ. ಕೆಲವೊಂದು ಕಡೆ ಇವರಿಗೆ ಕೊಡಲು ಕೆಲಸ ಇಲ್ಲ. ಉಂಡಾಡಿ ಗುಂಡರಂತೆ ತಿರುಗಾಡುತ್ತಿದ್ದಾರೆ. ಇಷ್ಟೊಂದು ಹಂಗಾಮಿ ನೇಮಕಾತಿಯಾಗಿದೆ. ಹೆಚ್ಚಿನವು 5 ರಿಂದ 8 ಲಕ್ಷ ಲಂಚ ಕೊಟ್ಟು ಬಂದಿದ್ದಾರೆ. ಕೆಲವರು ಮಾತ್ರ ಸಚಿವರ,ಗಣ್ಯರ ಶಿಫಾರಸ್ಸಿನಿಂದ ಬಂದಿದ್ದಾರೆ. ಹಲವರು ಮಂಗಳೂರು ವಿವಿ ಕುಲಪತಿ ಭೈರಪ್ಪನವರ ಗುರು ಮತ್ತು ಮೈಸೂರಿನ ಭಾವಿ ಎಂಎಲ್ ಎ ಎಂದು ಸಿದ್ಧವಾಗುತ್ತಿರುವ ರಂಗಪ್ಪನವರ ಕೃಪಾಪೋಷಿತರು. ಇವರಿಗೆಲ್ಲ ನೀಡಿರುವ ಆಶ್ವಾಸನೆ ಎನೆಂದರೆ ಜೂನ್ 5, 2018 ಅಂದರೆ ಭೈರಪ್ಪನವರು ತಾನು ನಿವೃತ್ತಿಯಾಗಿ ಹೋಗುವುದರೊಳಗೆ ತನಗೆ ಲಂಚ ಕೊಟ್ಟು ಬಂದಿರುವವರನ್ನು ಪರ್ಮನೆಂಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕಾಗಿ ಹಂಗಾಮಿ ನೌಕರರು ಚಾತಕಪಕ್ಷಿಯಾಗಿ ಕಾದುಕುಳಿತುಕೊಂಡಿದ್ದಾರೆ.
ಹೆಚ್ಚಿನ ಹಂಗಾಮಿ ನೌಕರರಲ್ಲಿ ಒಂದು ಸಮಾಧಾನದ ಸಂಗತಿಯೆಂದರೆ ಯೂನಿವರ್ಸಿಟಿ ಒಳಗೆ ಹೊಕ್ಕಿ ಆಯ್ತಲ್ಲ, ಇನ್ನು ಏನಾದರೂ ಆಗುತ್ತೆ ಎನ್ನುವ ಭರವಸೆ. ಹೀಗೆ ನೇಮಕಾತಿ ಹೊಂದಿರುವವರಿಗೆ ಯಾವ ನಿಶ್ಚಿತ ನೆಲೆ ಇಲ್ಲ. ಒಬ್ಬನಿಗೆ 10 ಸಾವಿರ, ಇನ್ನೊಬ್ಬನಿಗೆ ಹದಿನೈದು, ಮತ್ತೊಬ್ಬನಿಗೆ 20 ಸಾವಿರ ಹೀಗೆ ಹೋಗುತ್ತದೆ. ಅಷ್ಟು ಸಂಬಳ ಕೊಟ್ಟು ಸರಿಯಾದ ಕೆಲಸ ಮಾಡಿಸುತ್ತಾರಾ, ಅದು ಇಲ್ಲ. ತನ್ನ ಆಪ್ತರಿಗೆ ಸಂಭ್ಯಾವ್ಯ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಉನ್ನತ ಹುದ್ದೆ ಕೊಟ್ಟು ಕೂರಿಸಿದ್ದಾರೆ. ಡೆಲ್ಲಿಯಲ್ಲಿ ಒಬ್ಬರು, ಬೆಂಗಳೂರಿನಲ್ಲಿ ಒಬ್ಬರು, ಮಂಗಳೂರಿನಲ್ಲಿ ಒಬ್ಬರು ಹೀಗೆ ತನ್ನವರಿಗಾಗಿ ಬೇರೆ ಬೇರೆ ಹೆಸರು ಕೊಟ್ಟು ಅನಾವಶ್ಯಕ ಹುದ್ದೆಗಳನ್ನು ಸೃಷ್ಟಿಸಿದ್ದಾರೆ. ಒಬ್ಬರಿಗೆ ಪಬ್ಲಿಕ್ ರಿಲೆಶನ್ ಆಫೀಸರ್ ಎಂದರೆ ಇನ್ನೊಬ್ಬರಿಗೆ ಎಚ್ ಆರ್ ಎಂದು ಕರೆದು ಹುದ್ದೆ ಕ್ರಿಯೆಟ್ ಮಾಡಿದ್ದಾರೆ. ಉದ್ದೇಶ ಒಂದೇ. ವಿಶ್ವವಿದ್ಯಾಲಯದ ಹಣ ಪೋಲು ಮಾಡುವುದು. ತಾನೂ ತಿನ್ನುವುದು, ತಿನ್ನುವವರಿಗೂ ತಿನ್ನಿಸುವುದು. ಮಂಗಳೂರಿನಲ್ಲಿ ಓಕೆ. ಆದರೆ ಡೆಲ್ಲಿ, ಬೆಂಗಳೂರಿನಲ್ಲಿ ಪಿಆರ್ ಒ ಯಾಕೆ? ಅಷ್ಟೇ ಅಲ್ಲ, ವಿವಿಯ ಹಣದಿಂದ ಬೆಂಗಳೂರಿನಲ್ಲಿ ಗೆಸ್ಟ್ ಹೌಸ್ ಬಾಡಿಗೆಗೆ ತೆಗೆದುಕೊಳ್ಳಲಾಗಿದೆ. ಅದು ಯಾರ ಮೋಜಿಗಾಗಿ? ವರ್ಷಗಟ್ಟಲೆ ಅದಕ್ಕೆ ಲಕ್ಷಗಟ್ಟಲೆ ಬಾಡಿಗೆ ಕೊಡುವುದು ಯಾಕೆ? ಅದು ಹಣ ವ್ಯರ್ಥವಲ್ಲವೇ? ಬೆಂಗಳೂರಿನಲ್ಲಿ ಕಚೇರಿಗೆ ಸಂಬಂಧಪಟ್ಟದ್ದು ಕೆಲಸ ಒಂದು ವೇಳೆ ಇದ್ದರೆ ಸರಕಾರಿ ಅತಿಥಿ ಗೃಹವಿದೆ. ಇಲ್ಲವಾದರೆ ಒಂದೆರಡು ದಿನಗಳಿಗೆ ಬಾಡಿಗೆ ರೂಂ ಮಾಡಿದರೆ ಆಯಿತು? ಅದಕ್ಕಾಗಿ ಇಡೀ ವರ್ಷ ಬಾಡಿಗೆ ಕೊಟ್ಟು ಗೆಸ್ಟ್ ಹೌಸ್ ಮಾಡುವುದು ಯಾಕೆ? ವಿವಿಯ ಹಣದಲ್ಲಿ ಈ ಕಾಮಗಾರಿಯ ಗುಟ್ಟೆನು ಎನ್ನುವುದು ಭೈರಪ್ಪನವರಿಗೆ ಮಾತ್ರ ಗೊತ್ತು.
Leave A Reply