ಮತ್ತೊಂದು ಸ್ವದೇಶಿ ನಿರ್ಮಿತ ಕ್ಷಿಪಣಿ ಪರಿಕ್ಷೆ ಯಶಸ್ವಿ, ಗುರಿಯದೋ ಶತ್ರುವಿನ ಎದೆಗೆ
ಭುವನೇಶ್ವರ್: ಇತ್ತೀಚೆಗಷ್ಟೇ ಸ್ವದೇಶಿ ನಿರ್ಮಿತ ರಾಕೆಟ್ ಒಂದು ಯಶಸ್ವಿಯಾಗಿ ನಭಕ್ಕೆ ಹಾರಿದ ದೇಶದ ಆತ್ಮವಿಶ್ವಾಸ ಹೆಚ್ಚಿಸಿದ ಬೆನ್ನಲ್ಲೇ ಮತ್ತೊಂದು ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದ್ದು, ಭಾರತದ ಆತ್ಮವಿಶ್ವಾಸ ಇಮ್ಮಡಿಯಾಗಿದೆ.
ಅಡ್ವಾನ್ಸ್ಡ್ ಏರ್ ಡಿಫೆನ್ಸ್ ನ ಭಾಗವಾಗಿ ಸೂಪರ್ ಸಾನಿಕ್ (ಶಬ್ದದ ವೇಗಕ್ಕಿಂತ ಜಾಸ್ತಿ ಇರುವ) ಇಂಟರ್ ಸೆಪ್ಟರ್ (ಪ್ರತಿಬಂಧಕ) ಕ್ಷಿಪಣಿಯನ್ನು ಒಡಿಶಾದ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ.
ಪ್ರಸಕ್ತ ವರ್ಷದಲ್ಲೇ ಇಂಥ ಸಾಮರ್ಥ್ಯವುಳ್ಳ ಕ್ಷಿಪಣಿ ಉಡಾವಣೆಯಲ್ಲಿ ಇದು ಮೂರನೇಯದ್ದಾಗಿದ್ದು, ಮೂರಕ್ಕು ಮೂರೂ ಕ್ಷಿಪಣಿಗಳ ಪರೀಕ್ಷೆ ಯಶಸ್ವಿಯಾಗಿದೆ.
ಅತೀ ವೇಗದ ಚಲನೆ ಹೊಂದಿರುವ ಈ ಕ್ಷಿಪಣಿ, ನೇರವಾಗಿ ಶತ್ರುವಿನ ಎದೆಗೇ ಗುರಿ ಇಡುವ ಸಾಮರ್ಥ್ಯವುಳ್ಳದ್ದಾಗಿದ್ದು, 30 ಕಿ.ಮೀ. ಎತ್ತರದಲ್ಲಿರುವ ಯಾವುದೇ ಶತ್ರುವಿನ ವೈಮಾನಿಕ ನೆಲೆ, ವಿಮಾನವನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಸಾಧನೆ, ಕೇಂದ್ರ ಸರ್ಕಾರದ ಸಹಾಯದ ಮೇರೆಗೆ ಮೇಕ್ ಇನ್ ಇಂಡಿಯಾ ಭಾಗವಾಗಿ ಭಾರತದಲ್ಲೇ ಕ್ಷಿಪಣಿ, ರಾಕೆಟ್, ಯುದ್ಧ ಶಸ್ತ್ರಾಸ್ತ್ರಗಳ ತಯಾರಿ ಭಾರತಕ್ಕೆ ವರದಾನವಾಗುವುದರಲ್ಲಿ ಎರಡು ಮಾತಿಲ್ಲ. ಜೈ ಹೋ ಇಂಡಿಯಾ!
Leave A Reply