ಲವ್ ಜಿಹಾದ್ ತಡೆಗೆ ಹಿಂದೂಗಳು ಏನು ಮಾಡಬೇಕು ಎಂದು ರಾಜೀವ್ ಮಲ್ಹೋತ್ರಾ ಏನು ಹೇಳಿದ್ರು ಗೊತ್ತಾ?
ಇತ್ತೀಚೆಗೆ ದೇಶದಲ್ಲಿ ಲವ್ ಜಿಹಾದ್ ಪ್ರಕರಣ, ಹಿಂದೂ ಯುವತಿಯರ ಬಲವಂತದ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಬಹುತೇಕ ಹಿಂದೂಗಳು ಜಾಗೃತರಾಗುತ್ತಿಲ್ಲ. ದಿನೇದಿನೆ ಹಿಂದೂ ಯುವತಿಯರು ಮುಸ್ಲಿಮರಿಂದ ಮೋಸಕ್ಕೊಳಗಾಗುತ್ತಿದ್ದರೂ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದಕ್ಕೆ ನಾಯಿಕೊಡೆಯಂತೆ ಎತ್ತುತ್ತಿರುವ ಲವ್ ಜಿಹಾದ್ ಪ್ರಕರಣಗಳೇ ಸಾಕ್ಷಿಯಾಗಿವೆ.
ಇದನ್ನು ಮನಗಂಡೇ ಅನಿವಾಸಿ ಭಾರತೀಯ, ಹಿಂದುತ್ವ ಪ್ರಚಾರಕ ರಾಜೀವ್ ಮಲ್ಹೋತ್ರಾ ಅವರು ಲವ್ ಜಿಹಾದ್ ತಡೆಗೆ ಭಾರತೀಯರು ಏನು ಮಾಡಬೇಕು ಎಂದು ತಿಳಿಸಿದ್ದಾರೆ.
ಹಿಂದು ಟುಡೇ.ಟಿವಿ ಮಾಧ್ಯಮ ರಾಜೀವ್ ಮಲ್ಹೋತ್ರಾ ಅವರನ್ನು ಸಂದರ್ಶಿಸಿದ್ದು, “ಹಿಂದೂಗಳು ಬರೀ ಕಾಲೇಜು, ಓದು, ಉದ್ಯೋಗ, ಕಾರು, ಬಂಗಲೆ, ಹಿಂದುತ್ವ ಕುರಿತು ನಿರ್ಲಕ್ಷ್ಯ ತಾಳದೆ, ಧರ್ಮರಕ್ಷಣೆಯತ್ತಲೂ ಗಮನ ಹರಿಸಬೇಕು” ಎಂದು ಮಲ್ಹೋತ್ರಾ ಹೇಳಿದ್ದಾರೆ.
ಅಲ್ಲದೆ, ಶಿಕ್ಷಣವಂತ ಹಾಗೂ ಹಿಂದುತ್ವದ ಮೇಲೆ ಅಭಿಮಾನ ಹೊಂದಿರುವ ಹಿಂದು ಯುವಕರು ಸೇರಿ ಎಲ್ಲರೂ ಹಿಂದುತ್ವ ಹಾಗೂ ಲವ್ ಜಿಹಾದ್ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಹಾಗಾದಾಗ ಮಾತ್ರ ಲವ್ ಜಿಹಾದ್ ತಡೆಯಲು ಸಾಧ್ಯ ಎಂದು ಹೇಳಿದ್ದಾರೆ.
ವೀಡಿಯೋ ನೋಡಿ
Rajiv Malhotra on Love jihad and Hindus
Leave A Reply