ನರೇಂದ್ರ ಮೋದಿ ಮುಸ್ಲಿಂ ವಿರೋಧಿಯಾಗಿದ್ದರೆ ಇಷ್ಟೆಲ್ಲ ಮಾಡುತ್ತಿದ್ದರೇ ವಿರೋಧಿಗಳೇ?
ಪ್ರಧಾನಿ ನರೇಂದ್ರ ಮೋದಿ ಒಬ್ಬ ಕೋಮುವಾದಿ ಎಂದು ಜರಿಯುತ್ತಾರೆ. ಅವರೊಬ್ಬ ಹಿಟ್ಲರ್ ಗೆ ಸಮ ಎಂದು ಪರೋಕ್ಷವಾಗಿ ಪ್ರಕಾಶ್ ರೈ ಅವರಂಥ ನಟರು ಆರೋಪಿಸುತ್ತಾರೆ. ಇನ್ನು ಮೋದಿ ಅವರು ಮುಸ್ಲಿಂ ವಿರೋಧಿ ಎಂದು ಬಿಂಬಿಸುವವರಿಗೇನು ಕಡಿಮೆಯಿಲ್ಲ.
ಹೀಗೆ ವಿರೋಧಿಸಬೇಕು, ಟೀಕಿಸಬೇಕು ಎಂಬ ಒಂದೇ ಕಾರಣಕ್ಕೆ ಬಾಯಿಗೆ ಬಂದಹಾಗೆ ಮಾತನಾಡಿದರೂ ಆರೋಪ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಸಬ್ ಕಾ ವಿಕಾಸ್ ಎಂಬ ತಮ್ಮ ಮನೋಭಾವ ಬಿಡದೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದಕ್ಕೆ ದ್ಯೋತಕವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸರ್ಕಾರ ತ್ರಿವಳಿ ತಲಾಖ್ ವಿಷಯದಲ್ಲಿ ನಡೆದುಕೊಂಡ ರೀತಿಯನ್ನು ಗಮನಿಸಬೇಕು. ತ್ರಿವಳಿ ತಲಾಖ್ ವಿರುದ್ಧ ಮಹಿಳೆಯರು ಸಹಿ ಆಂದೋಲನ ನಡೆಸುತ್ತಲೇ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತಲೇ ನರೇಂದ್ರ ಮೋದಿ ಅವರು ಸಹ ತ್ರಿವಳಿ ತಲಾಖ್ ಅನ್ನು ಸಾರ್ವಜನಿಕವಾಗಿ ವಿರೋಧಿಸಿದರು.
ಅಷ್ಟೇ ಅಲ್ಲ ಸುಪ್ರೀಂ ಕೊರ್ಟ್ ತ್ರಿವಳಿ ತಲಾಖ್ ನಿಷೇಧಿಸಿ ಇದರ ವಿರುದ್ಧ ಕಾನೂನು ರಚಿಸಿ ಎಂದು ನಿರ್ದೇಶನ ನೀಡಿದ ಬಳಿಕದ ಮೊದಲ ಅಧಿವೇಶನದಲ್ಲೇ, ಅಂದರೆ ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ತ್ರಿವಳಿ ತಲಾಖ್ ವಿರುದ್ಧ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ. ಇದರಿಂದ ದೇಶದ ಲಕ್ಷಾಂತರ ಮುಸ್ಲಿಂ ಮಹಿಳೆಯರು ನಿಟ್ಟುಸಿರು ಬಿಡುವಂತಾಗಿದೆ. ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿಯಾಗಿದ್ದರೆ ಇಷ್ಟೆಲ್ಲ ಮಾಡುತ್ತಿದ್ದರೆ?
ಇನ್ನು ಇದುವರೆಗೂ ಮುಸ್ಲಿಂ ಮಹಿಳೆಯರು ಸ್ವತಂತ್ರವಾಗಿ ಅಂದರೆ ಒಬ್ಬರು ಅಥವಾ ಮಹಿಳೆಯರ ಗುಂಪು ಪವಿತ್ರ ಹಜ್ ಯಾತ್ರೆಗೆ ತೆರಳುವಂತಿರಲಿಲ್ಲ. ಅದಕ್ಕೆ ಪುರುಷರ ಉಪಸ್ಥಿತಿ ಕಡ್ಡಾಯ ಎಂಬಂತೆ ಮಹ್ರಮ್ ಪದ್ಧತಿ ಅಸ್ತಿತ್ವದಲ್ಲಿತ್ತು. ಆದರೆ ಈ ತಾರತಮ್ಯ ಹೋಗಲಾಡಿಸಲು ದಿಟ್ಟ ಹೆಜ್ಜೆ ಇಟ್ಟ ನರೇಂದ್ರ ಮೋದಿ ಅವರು ಮಹ್ರಮ್ ಪದ್ಧತಿಯನ್ನು ರದ್ದುಪಡಿಸಿದ್ದಾರೆ. ಆ ಮೂಲಕ ಮಹಿಳೆಯರು ಸ್ವತಂತ್ರವಾಗಿ, ನಾಲ್ಕಾರು ಮಹಿಳೆಯರೊಂದಿಗೆ ಸೇರಿ ಹಜ್ ಯಾತ್ರೆ ಕೈಗೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಹೇಳಿ, ಮೋದಿ ಅವರ ಮನದಲ್ಲಿ ನಂಜು ಇದ್ದಿದ್ದರೆ ಹೀಗೆ ಮಾಡುತ್ತಿದ್ದರೆ?
ದೇಶದಲ್ಲಿ ಮುಸ್ಲಿಮರ ಮತ ಪಡೆದು, ಅಲ್ಪಸಂಖ್ಯಾತರ ಪರ ಎಂದು ದಶಕಗಳವರೆಗೆ ಆಡಳಿತಕ್ಕೆ ಬಂದ ಸರ್ಕಾರಗಳು ಮುಸ್ಲಿಮರ ಏಳಿಗೆಗೆ ಏನೂ ಮಾಡಲಿಲ್ಲ. ಆದರೆ ಕೋಮುವಾದಿ, ಮುಸ್ಲಿಂ ವಿರೋಧಿ ಎನಿಸಿಕೊಳ್ಳುತ್ತಲೇ ದೇಶದ ಗದ್ದುಗೆ ಏರಿದ ನರೇಂದ್ರ ಮೋದಿ ಅವರು ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಮುಂದಾಗಿ ಹಾಗೂ ಮಹ್ರಮ್ ಪದ್ಧತಿ ರದ್ದುಗೊಳಿಸಿ ಮುಸ್ಲಿಂ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಕುಡೋಸ್ ಟು ನರೇಂದ್ರ ಮೋದಿ…
Leave A Reply