ದಲಿತರು, ಆದಿವಾಸಿಗಳತ್ತ ಗಮನ ಹರಿಸಿ: ಮೋಹನ್ ಭಾಗವತ್
ಭೋಪಾಲ್: ಹಿಂದುಳಿದ ದಲಿತರು, ಆದಿವಾಸಿಗಳತ್ತ ಸರ್ಕಾರ ಗಮನಹರಿಸಬೇಕು. ಅವರ ಅಭಿವೃದ್ಧಿಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಧ್ಯಪ್ರದೇಶ ಸರ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಉಜ್ಜೈನಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿ, ಸಾಮಾಜಿಕ ಸಮಾನತೆ ಕಾಯ್ದುಕೊಳ್ಳಲು ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ನಮ್ಮ ಗುರಿ ಎಲ್ಲ ಹಂತದ ಸಮುದಾಯಗಳನ್ನು ಅಭಿವೃದ್ಧಿ ಮಾಡುವುದಾಗಿರಬೇಕು. ಅದರಲ್ಲೂ ದಲಿತರು ಮತ್ತು ಆದಿವಾಸಿಗಳ ಏಳಿಗೆಗೆ ವಿಶೇಷ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ದಲಿತರ ಮತಗಳು ಬಿಜೆಪಿಯಿಂದ ವಿಮುಖವಾಗಿವೆ. ಆದ್ದರಿಂದ ದಲಿತರನ್ನು ಅಭಿವೃದ್ಧಿಯ ಮೂಲಕ ಬಿಜೆಪಿಯತ್ತ ಸೆಳೆಯುವ ಕಾರ್ಯಗಳು ಆಗಬೇಕು ಹೊರತು ಜಾತಿ, ಧರ್ಮದಿಂದಲ್ಲ. ದಲಿತರು ಮತ್ತು ಆದಿವಾಸಿಗಳ ಜತೆ ಕೈ ಜೋಡಿಸಿ, ಅವರ ಏಳಿಗೆಗೆ ಬಲ ನೀಡಬೇಕು ಎಂದು ಹೇಳಿದ್ದಾರೆ.
ನಡೆಸಿದ್ದು, ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಅಲ್ಲದೇ 2018ರಲ್ಲಿ ನಡೆಯಲಿರುವ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ. ನಾಲ್ಕು ದಿನದಿಂದ ಮಧ್ಯಪ್ರದೇಶದಲ್ಲಿ ಸಂಘದ ಪ್ರಮುಖ ಮುಖಂಡರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಭಾರತ ಮಾತಾ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಜ್ಜೈನಿಗೆ ಬಂದಿರುವ ಮೋಹನ್ ಭಾಗವತ್ ಅವರು ಜನವರಿ 5ರವರೆಗೆ ಮಧ್ಯಪ್ರದೇಶದಲ್ಲೇ ಇರಲಿದ್ದಾರೆ. ಸಂಘದ ಪ್ರಮುಖ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ.
Leave A Reply