ಸಿದ್ದರಾಮಯ್ಯನವರನ್ನು ಮೆಚ್ಚಿಸಲು ಪೊಲೀಸರು ದರ್ಪ ಮೆರೆದರೆ ಅಥವಾ ಸಿಎಂ ಅವರೇ ಸೂಚಿಸಿದ್ದಾರೆಯೇ?
ಶಿವಮೊಗ್ಗ: ರಾಜ್ಯ ಸರ್ಕಾರ ಇದುವರೆಗೂ ಹಿಂದೂಗಳ ಮೇಲೆ ತೋರಿದ ಅಸಹಿಷ್ಣುತೆ ಈಗ ಮಾಧ್ಯಮದವರ ವಿರುದ್ಧವೂ ತೋರುತ್ತಿದೆಯೇ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ. ಅಲ್ಲದೆ ಸಾಧನಾ ಸಮಾವೇಶಕ್ಕೆ ಅಡ್ಡಿಯಾಗುವ ಯಾರನ್ನೇ ಆಗಲಿ ಲಾಠಿ ಮೂಲಕ ಹತ್ತಿಕ್ಕಲು ಸಿಎಂ ಸೂಚಿಸಿದ್ದಾರೆಯೇ ಎಂಬ ಅನುಮಾನ ಸಹ ಕಾಡಲು ಆರಂಭವಾಗಿದೆ.
ಹೌದು, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಡೆಸುತ್ತಿದ್ದ ಸಾಧನಾ ಸಮಾವೇಶದ ವೇಳೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರತಿಭಟನೆಯಿಂದ ಕೆರಳಿದ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಲಾಠಿ ಚಾರ್ಜ್ ನಡೆಸಿದ್ದಾರೆ. ಜತೆಗೆ ಕಾರ್ಯಕರ್ತರಿಗೆ ಪೊಲೀಸರು ಒದ್ದಿದ್ದಾರೆ.
ಆದರೆ ಇದನ್ನು ಚಿತ್ರೀಕರಿಸಲು ಹೋದ ಮಾಧ್ಯಮದವರ ಮೇಲೂ ಪೊಲೀಸರು ದರ್ಪ ಮೆರೆದಿದ್ದಾರೆ. ವಿಡಿಯೋ ಮಾಡಲು ಹೋದ ಚಾನೆಲ್ ಒಂದರ ಕ್ಯಾಮರಾಮನ್ ಅವರ ಕ್ಯಾಮರಾ ಕಿತ್ತುಕೊಂಡಿದ್ದಾರೆ. ಅಲ್ಲದೆ ಬೆನ್ನು ಹತ್ತಿ ಪಕ್ಕಕ್ಕೆ ಕರೆದು ಕಾಲಿನಿಂದ ಒದ್ದ ವೀಡಿಯೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಬಳಿಕ ಮಾಧ್ಯಮದವರೆಲ್ಲರೂ ಪೊಲೀಸರ ಕೃತ್ಯ ಖಂಡಿಸಿದ ಹಿನ್ನೆಲೆಯಲ್ಲಿ ಕ್ಯಾಮರಾ ವಾಪಸ್ ನೀಡಿದ್ದಾರೆ.
Leave A Reply