ದಲಿತ ಯುವತಿಯ ಮೇಲೆ ಮುಸ್ಲಿಂ ಯುವಕನಿಂದ ಅತ್ಯಾಚಾರ, ಆದರೆ ಇದನ್ನು ಪ್ರಶ್ನಿಸೋರು ಯಾರೂ ಇಲ್ಲ
ಲಖನೌ: ದಿನಬೆಳಗಾದರೆ ದಲಿತರ ಮೇಲೆ ಸಣ್ಣ ಹಲ್ಲೆಯಾದರೂ ಸಂಘಟನೆಗಳು, ಫೇಸ್ ಬುಕ್ ಶೂರರು ಅದನ್ನು ಬಿಜೆಪಿಯವರೇ ಮಾಡಿದರು, ಮೇಲ್ವರ್ಗದ ಹಿಂದೂಗಳ ದೌರ್ಜನ್ಯ ಇದು ಎಂದು ಬೊಬ್ಬೆ ಹಾಕುತ್ತಾರೆ.
ಆದರೆ ಉತ್ತರ ಪ್ರದೇಶದ ಮೀರತ್ ನಲ್ಲಿ ಮುಸ್ಲಿಂ ಯುವಕರು ದಲಿತ ಯುವತಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದರೂ ಈ ಅನ್ಯಾಯವನ್ನು ಪ್ರಶ್ನಿಸಲು ಮಾತ್ರ ಒಬ್ಬರ ನಾಲಗೆಯೂ ಬರುತ್ತಿಲ್ಲ.
ಹೌದು, ಉತ್ತರ ಪ್ರದೇಶದ ಮೀರತ್ ನಲ್ಲಿ ಮುಸ್ಲಿಂ ಯುವಕನೊಬ್ಬ ಪ್ರತಿದಿನ ದಲಿತ ಯುವತಿಯನ್ನು ಛೇಡಿಸುತ್ತಿದ್ದ. ಯುವತಿ ಹಲವು ಬಾರಿ ಎಚ್ಚರಿಸಿದ್ದರೂ ಆತ ಎಚ್ಚೆತ್ತುಕೊಂಡಿರಲಿಲ್ಲ. ಕೊನೆಗೊಂದು ದಿನ ಆಕೆಯನ್ನು ಮದುವೆಯಾಗುವುದಾಗಿಯೂ, ಇಸ್ಲಾಂಗೆ ಮತಾಂತರಗೊಳಿಸುವುದಾಗಿಯೂ ಆತ ತಿಳಿಸಿದ್ದಾನೆ. ಆದರೆ ಯುವತಿ ಅದನ್ನು ನಿರಾಕರಿಸಿದ್ದಾಳೆ ಎಂದು ತಿಳಿದು ಬಂದಿದೆ.
ಆದರೆ ಇದರಿಂದ ಸುಮ್ಮನಾಗದ ಆ ಯುವಕ ಸಂಬಂಧಿಕರೊಂದಿಗೆ ಯುವತಿಯನ್ನು ಅಪಹರಿಸಿದ್ದಾರೆ. ಅಪರಿಚಿತ ಜಾಗಕ್ಕೆ ಕರೆದೊಯ್ದು ಒಂದು ವಾರ ನಿರಂತರವಾಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಗಳು ಕಾಣೆಯಾದ ಕುರಿತು ಯುವತಿ ಪೋಷಕರು ದೂರು ನೀಡಿದ್ದು, ಪೊಲೀಸರು ಕೊನೆಗೂ ಯುವತಿಯನ್ನು ಮೇವಾತ್ ಬಳಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಯುವತಿಯನ್ನು ಛೇಡಿಸುತ್ತಿದ್ದ ಬಿಟ್ಟು, ಆತನ ಸಹೋದರ ಶಾಬಾಜ್, ಚಿಕ್ಕಪ್ಪ ಮೆಹ್ತಾಬ್ ಸೇರಿ ಹಲವರು ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Leave A Reply