ಹಿಂದೂತ್ವವೇ ಮರೆತ ಸಿದ್ದರಾಮಯ್ಯಗೆ ಯೋಗಿ ಬಗ್ಗೆ ಮಾತಾಡುವ ನೈತಿಕತೆ ಇದೆಯೇ..?
ಮೀನು ತಿಂದು ಧರ್ಮಸ್ಥಳ ಮಂಜುನಾಥ ದೇವಸ್ಥಾನ ಪ್ರವೇಶಿಸಿದ..
ಉಡುಪಿಗೆ ಹೋದರೂ ಶ್ರೀಕೃಷ್ಣನ ದೇವಸ್ಥಾನಕ್ಕೆ ಹೋಗದ
ಹಿಂದೂ ದೇವಾಲಯಗಳ ಹಣವನ್ನು ಅಲ್ಪಸಂಖ್ಯಾತರಿಗೆ ಹಂಚಿದ
ಜಿಹಾದಿಗಳ ಅಟ್ಟಹಾಸಕ್ಕೆ 21 ಹಿಂದೂಗಳ ಬಲಿಗೆ ಪರೋಕ್ಷವಾಗಿ ಕಾರಣವಾದ
ಹಿಂದೂಗಳ ಸ್ಫೂರ್ತಿ ದೈವ ಹನುಮಂತನ ಜಯಂತಿಗೆ ಅಡ್ಡಿಪಡಿಸಿದ
ಚುನಾವಣೆಗೆ ದೇವಾಲಯಗಳ ಮೊರೆ ಹೋಗುವ ರಾಹುಲ್ ನ ಸೂಚನೆ ಪಾಲಿಸುವ
ಹಿಂದೂಗಳ ಆರಾಧ್ಯ ದೈವ ಗೋ ಮಾಂಸ ತಿನ್ನುತ್ತೇನೆ ಎನ್ನುವ
ಸಿಎಂ ಸಿದ್ದರಾಮಯ್ಯಗೆ ಚುನಾವಣೆ ಹೊತ್ತಿನಲ್ಲಿ ಹಿಂದೂಗಳು, ಹಿಂದುತ್ವ ನೆನಪಾಗುತ್ತಿದೆ. ದೇಶದಲ್ಲಿ ಹಿಂದೂತ್ವದ ಜತೆ ಜತೆಗೆ ಅಭಿವೃದ್ಧಿಯ ಅಜೆಂಡಾದೊಂದಿಗೆ ಅಧಿಕಾರದ ಗದ್ದುಗೆ ಏರಿದವರೂ ಯೋಗಿ ಆದಿತ್ಯನಾಥ್. ಐದು ಬಾರಿ ಘೋರಖಪುರದ ಸಂಸದ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಘೋರಖಪುರದಲ್ಲಿ ಹೊಸ ಅಲೆ ಸೃಷ್ಟಿಸಿದವರು. ಘೋರಖಪುರದಲ್ಲಿ ಸೌಹಾರ್ದದ ಜೀವನ ನಡೆಸುವಂತ ವಾತಾವರಣ ಸೃಷ್ಟಿಸಿದವರು. ಅಂತಹ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಯೋಗಿ ಆದಿತ್ಯನಾಥ್ ಬಗ್ಗೆ ಮಾತಾಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾನ್ಯ ಜ್ಞಾನವನ್ನಾದರೂ ಪಡೆಯಬೇಕು.
ಯೋಗಿ ಆದಿತ್ಯನಾಥ್ ಬೂಟಾಟಿಕೆ ಸನ್ಯಾಸಿ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಘೋರಖನಾಥ ಪೀಠದ ಶಕ್ತಿ, ಹಿಂದಿನ ಇತಿಹಾಸ ಅರಿಯದೇ ಎಲುಬಿಲ್ಲದ ನಾಲಿಗೆ ಹರಿಬಿಡುವುದು ತೀರ ಬಾಲಿಷತನ ಎನ್ನುವುದರಲ್ಲಿ ಎರಡು ಮಾತಿಲ್ಲ.
ಬೋಗಿ ಸಿದ್ದರಾಮಯ್ಯಗೇ ಯೋಗಿ ಬಗ್ಗೆ ಬರುವ ಮಾತುಗಳು ನೋಡಿ..
ಯೋಗಿ ಆದಿತ್ಯನಾಥ್ ಗೆ ಮನುಷ್ಯತ್ವ ಇಲ್ಲ
ಯೋಗಿಗೆ ಹಿಂದೂತ್ವದ ಬಗ್ಗೆ ಮಾತಾಡುವ ಹಕ್ಕಿಲ್ಲ
ಯೋಗಿ ಆದಿತ್ಯನಾಥ್ ಒಬ್ಬ ಡೋಂಗಿ ವ್ಯಕ್ತಿ
ಯೋಗಿ ಹಸುಗಳನ್ನು ಸಾಕಿದ್ದಾನಾ..?
ಇವು ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಗಿ ಕುರಿತು ಆಡಿದ ಮಾತುಗಳು ಇವು. ಕೋಟ್ಯಂತರ ಜನರು ಗೌರವಿಸುವ, ಕೋಟ್ಯಂತರ ಜನರು ಕೈ ಮುಗಿಯುವ ಪೀಠದ ಪೀಠಾಧಿಪತಿ ಯೋಗಿ ಅವರ ಬಗ್ಗೆ ಹೇಳುವ ಸಿದ್ದರಾಮಯ್ಯನವರ ಒಳಗೆ ಇರುವ ಹಿಂದೂ ಎಂತ ಸಂಸ್ಕೃತಿ ಹೀನ ಎನ್ನುವುದು ಸಾಬೀತಾಗುತ್ತದೆ.
ಮನುಷ್ಯತ್ವ ಇಲ್ಲ ಎನ್ನುವ ಸಿದ್ದರಾಮಯ್ಯನವರೇ ಮೊದಲು ನಿಮ್ಮ ಸಮಾವೇಶದಲ್ಲಿ ನಿಮ್ಮ ಮುಖ ನೋಡಲು ಬಂದ ಅಂಗವಿಕಲನನ್ನು ದರದರನೇ ಎಳೆದು ಹೊರಹಾಕಿದ ನಿಮ್ಮ ಅಂಗರಕ್ಷಕರಿಗೆ, ಕಾರ್ಯಕರ್ತರಿಗೆ ತಿಳಿ ಹೇಳಿ.. ನಿಮ್ಮ ಮನುಷ್ಯತ್ವ ಎಂತದ್ದು ಎನ್ನುವುದು ಅರಿವಾಗುತ್ತದೆ.
ಯೋಗಿ ಅವರಂತ ಮಹಾನ್ ಪುರುಷರನ್ನು ಹೀಯಾಳಿಸುವ ಮುನ್ನ ನಿಮ್ಮ ಹೆಸರಿನಲ್ಲಿರುವ, ನಿವೇ ಘೋಷಿಸಿಕೊಂಡಿರುವ ರಾಮ ನನ್ನು ಒಮ್ಮೆ ಕೇಳಿ ಯೋಗಿ ಯಾರು ಎಂದು. ಅವರನ್ನು ಟೀಕಿಸುವ ಭರದಲ್ಲಿ ದೇಶಕ್ಕೆ ಕಂಟಕವಾದ ಧರ್ಮಾಂಧರನ್ನು ನೀವು ಬೆಂಬಲಿಸುತ್ತೀದ್ದೀರಿ ಎಂಬ ಅರಿವಿರಲಿ. ಅವರಿಂದಲೇ ನಿಮಗೆ ತಕ್ಕ ಉತ್ತರ ಬಂದರೂ ನಿಮಗೆ ಸಮಾಧಾನವಿಲ್ಲವೇ. ಇನ್ನಾರೂ ನಿಮಗೆ ಛೀಮಾರಿ ಹಾಕಿಸಬೇಕು.
ದೇಶದ ಬಹು ದೊಡ್ಡ ರಾಜ್ಯ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯೋಗಿ ಆದಿತ್ಯನಾಥ್ ಬಗ್ಗೆ ಅರಿಯಲು ಒಮ್ಮೆ ಅವರ ಘೋರಖನಾಥ್ ಪೀಠವನ್ನು ನೋಡಿ ಬನ್ನಿ. ಅಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ನಿತ್ಯ ಸಾಲಿನಲ್ಲಿ ನಿಂತು ಘೋರಖ್ ನಾಥನ ದರ್ಶನ ಪಡೆಯುತ್ತಾರೆ. ಯೋಗಿಗಳ ಪೀಠದಲ್ಲಿ ಮುಸ್ಲಿಮರು ನಿತ್ಯ ಕೆಲಸ ಮಾಡುತ್ತಾರೆ.
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಆಡಳಿತ ನೀಡುತ್ತಿದ್ದು, ಬಿಜೆಪಿ ಸರಣಿ ಗೆಲುವು ಸಾಧಿಸುತ್ತಿದೆ. ಪ್ರಸ್ತುತ ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದ ಗದ್ದುಗೆ ಏರಿದೆ. ಕಾಂಗ್ರೆಸ್ ಮುಕ್ತ ಭಾರತಕ್ಕೆ ಕೆಲವೇ ರಾಜ್ಯಗಳು ಬಾಕಿ ಉಳಿದಿವೆ.
Leave A Reply