ಕಾಂಗ್ರೆಸ್ ಗೆ ಭಾರಿ ಆಘಾತ, ಮೈತ್ರಿ ರಚನೆ ಮಾತುಕತೆ ವ್ಯರ್ಥ ಎಂದ ಅಖಿಲೇಶ್ ಯಾದವ್
ಲಖನೌ: ಕಾಂಗ್ರೆಸ್ ಮುಕ್ತ ಭಾರತದ ಸನಿಹದಲ್ಲಿರುವ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವಾಗಲೇ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ. ಇದರಿಂದ ಕಾಂಗ್ರೆಸ್ ಮತ್ತು ರಾಹುಲ್ ಗ್ಯಾಂಗ್ ಒಂದು ಕ್ಷಣ ಅವಕ್ಕಾಗಿದ್ದು, ಭವಿಷ್ಯದ ಚಿಂತೆಯಲ್ಲಿ ದಿನದೂಡುತ್ತಿದೆ. ದೇಶದ ಬಹುದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸಾಥ್ ನೀಡಿದ್ದ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಇದೀಗ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾತುಕತೆ ನಡೆಸುವುದು ವ್ಯರ್ಥ ಎಂದು ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಹೆಚ್ಚು ಸದಸ್ಯರನ್ನು ಗೆಲ್ಲಿಸಲು ಶ್ರಮಿಸಲಾಗುತ್ತಿದೆ. ಆದ್ದರಿಂದ ಕಾಂಗ್ರೆಸ್ ಸೇರಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದು ವ್ಯರ್ಥ ಎಂದು ಅಖಿಲೇಶ್ ಹೇಳಿದ್ದಾರೆ.
ಸ್ಥಾನ ಹಂಚಿಕೆ ಮತ್ತು ಮೈತ್ರಿ ಮಾತುಕತೆಯಿಂದ ಸಮಯ ವ್ಯರ್ಥವಾಗುತ್ತಿದೆ. 2017ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್ ನೊಂದಿಗೆ ಕೈ ಜೋಡಿಸಿ, ಚುನಾವಣೆ ಎದುರಿಸಿದ್ದರು. 403 ಸ್ಥಾನಗಳಲ್ಲಿ ಬಿಜೆಪಿ 325, ಸಮಾಜವಾದಿ ಪಕ್ಷ 47 ಮತ್ತು ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ದೇಶಕ್ಕೆ ಹೊಸ ಸಂದೇಶ ಹೊರಬರಲಿದೆ. ಆದ್ದರಿಂದ ಪ್ರಸ್ತುತ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಇಲ್ಲ. ಈ ಮಾತುಕತೆಗಳು ಸಮಯ ಹಾಳು ಮಾಡುತ್ತಿದ್ದು, ನಮ್ಮನ್ನು ಗೊಂದಲಕ್ಕೆ ಇಡು ಮಾಡುತ್ತವೆ. ಆದ್ದರಿಂದ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ.
ಶತಾಯ ಗತಾಯ 2019ರಲ್ಲಿ ಬಿಜೆಪಿಯನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಹೆಣಗಾಡುತ್ತಿರುವ ರಾಹುಲ್ ಪಾಳಯಕ್ಕೆ ಈ ಸುದ್ದಿ ಭಾರಿ ಆಘಾತ ಉಂಟು ಮಾಡಿದೆ. ಉತ್ತರ ಪ್ರದೇಶದಲ್ಲಿ ವಿಜಯ ಸಾಧಿಸಿದವರು ಮಾತ್ರ ಲೋಕಸಭೆಯಲ್ಲಿ ಚುಕ್ಕಾಣಿ ಹಿಡಿಯುತ್ತಾರೆ ಎಂಬುದು ಮಾತ್ರ ಶತಃಸಿದ್ಧ.
Leave A Reply