• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೊನ್ನೆ ನಾಲಿಗೆ ತಡವರಿಸಿತು, ಈ ಅಭಿಯಾನದಿಂದ ಸಿಎಂ ದೇಹವೇ ತಡವರಿಸಬಹುದು!

TNN Correspondent Posted On July 10, 2017


  • Share On Facebook
  • Tweet It

ಎಲ್ಲಾ ಸೀನಿಯರ್ ಪೊಲೀಸ್ ಆಫೀಸರ್ಸ್ ಜೊತೆ ಮಾತನಾಡಿದ್ದಿನಿ. ಯಾರೂ ಕಾನೂನನ್ನು ಕೈಗೆತ್ತಿಕೊಂಡರೂ ಕೂಡ ನಿರ್ದಾಕ್ಷಿಣ್ಯವಾಗಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಹೇಳಿದ್ದೀನಿ. ಯಾರೇ, ಸಮಾಜದಲ್ಲಿ ಸ್ವಾಸ್ಥವನ್ನು ಹಾಳು ಮಾಡತಕ್ಕಂತಹ ಕಾನೂನು ಉಲ್ಲಂಘನೆ ಮಾಡತಕ್ಕಂತಹ ಅವರು ಯಾರೇ ಆಗಲಿ ಹಿಂದೂಗಳಿರಲಿ ಅಥವಾ ಆ………ಆ…….ಹ್ಞಾ….. ಬೇರೆ ಯಾವುದೇ ಧರ್ಮದವರು ಆದರೂ ಕೂಡ ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡತಕ್ಕಂತಹ ಪ್ರಯತ್ನ ಮಾಡಿದ್ರೆ ಅವರ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಿನಿ ಎಂದು ಹೇಳಿ ತಕ್ಷಣ ಸಿಎಂ ಸಿದ್ಧರಾಮಯ್ಯ ಸುದ್ದಿಗೋಷ್ಟಿಯಿಂದ ಏಳುತ್ತಾರೆ. ಅಲ್ಲಿಗೆ ಸಿದ್ಧರಾಮಯ್ಯನವರು ಮುಸಲ್ಮಾನ ಎನ್ನುವ ಶಬ್ದ ತೆಗೆಯುವಾಗ ಎಷ್ಟು ಯೋಚನೆ ಮಾಡುತ್ತಾರೆ ಎಂದು ಇದರಿಂದ ಗೊತ್ತಾಗುತ್ತದೆ. ಕೊನೆಗೂ ಅವರು ತಮ್ಮ ನಾಲಗೆಯ ಮೇಲೆ ಆ ಶಬ್ದ ತೆಗೆಯಲೇ ಇಲ್ಲ. ಬಹುಶ: ತನ್ನ ಪಾಡಿಗೆ ತಾನು ಉದ್ಯೋಗ, ವ್ಯವಹಾರ ಮಾಡಿ ಈ ಯಾವುದೇ ಗದ್ದಲದಲ್ಲಿ ಇಲ್ಲದ ಸಮಾಜದ ಜವಾಬ್ದಾರಿಯುತ ಮುಸಲ್ಮಾನರೂ ಕೂಡ ಸಿದ್ಧರಾಮಯ್ಯನವರ ನಾಟಕೀಯ ಒಲೈಕೆ ಅಸಹ್ಯವಾಯಿತು ಎಂದು ಮೂಗು ಮುರಿದುಕೊಂಡಾರು. ಈ ಟಿವಿ ಮಾಧ್ಯಮ, ಸಾಮಾಜಿಕ ತಾಣಗಳು ಇಷ್ಟು ಸಕ್ರಿಯವಾಗಿರುವಾಗ ಒಂದು ಸುದ್ದಿಗೋಷ್ಟಿ ಮಾಡುವಾಗ ರಾಜಕಾರಣಿ ಅದರಲ್ಲಿಯೂ ರಾಜ್ಯದ ಜವಾಬ್ದಾರಿ ಹೊತ್ತುಕೊಂಡಿರುವ ಮುಖ್ಯಮಂತ್ರಿಯಾಗಲಿ, ಸಚಿವರಾಗಲಿ ಹೇಗೆ ಭಾಷೆಯನ್ನು ಬಳಸಬೇಕು ಎಂದು ಗೊತ್ತಿಲ್ಲದಷ್ಟು ಕಾಂಗ್ರೆಸ್ ಹಿಂದೆ ಉಳಿದಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಒಂದು ದಶಕದ ಹಿಂದೆಯಾದರೆ ಹೀಗೆ ವಿವಾದವಾದರೆ ತನ್ನ ಹೇಳಿಕೆಯನ್ನು ತಿರುಚಿ ಮಾಧ್ಯಮದವರು ಹಾಕಿದ್ದಾರೆ ಎಂದು ಹೀಗೆ ಮುಖ್ಯಮಂತ್ರಿ, ಸಚಿವ, ಶಾಸಕರು ಹೇಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಆದರೆ ಈಗ ಹಾಗಿಲ್ಲ. ಅತ್ತ ತಿಪ್ಪೆ ಸಾರಿಸುವಂತಹ ಹೇಳಿಕೆ ಕೊಟ್ಟ ಕೂಡಲೇ ಅದರ ದೃಶ್ಯಗಳು ಹಾಗೆ ಸಾಮಾಜಿಕ ತಾಣಗಳಲ್ಲಿ ಬಂದು ಆಗಿರುತ್ತದೆ. ಅಷ್ಟಕ್ಕೂ ಪ್ರಜಾಪ್ರಭುತ್ವದಲ್ಲಿ ಹೋರಾಟ, ಪ್ರತಿಭಟನೆ ಎಂಬುದು ಎರಡೂ ಪ್ರಕಾರಗಳಲ್ಲಿ ಆಗುತ್ತದೆ. ಒಂದು ವಸ್ತುಶ: ಬೀದಿಗಿಳಿದು ತಮ್ಮ ಮೇಲಾದ ದೌರ್ಜನ್ಯವನ್ನು ಪ್ರತಿಭಟಿಸುವುದು ಇನ್ನೊಂದು ನೇರವಾಗಿ ಸಂಬಂಧಪಟ್ಟವರಿಗೆ ಸುದ್ದಿ ಮುಟ್ಟಿಸಿ ಅವರಿಂದ ಕ್ರಮಕ್ಕೆ ಆಗ್ರಹಿಸುವುದು. ಇದರಲ್ಲಿ ಎರಡೂ ಕೂಡ ಮುಖ್ಯ. ರಸ್ತೆಯ ಮೇಲೆ ಗುಂಪುಗೂಡಿ ದಿಕ್ಕಾರದ ಧ್ವನಿ ಮೊಳಗಿದರೆ ಅದರಿಂದ ಸ್ಥಳೀಯ ಮಟ್ಟದಲ್ಲಿ ಜನರಿಗೆ ಆಕ್ರೋಶ ಇದೆ ಎನ್ನುವ ಸಂದೇಶ ಆ ಪರಿಸರದ ಎಲ್ಲೆಡೆ ಹರಡಿ ಸ್ಥಳೀಯರು ಈ ಬಗ್ಗೆ ಪ್ರತಿಕ್ರಿಯಿಸುತ್ತಾರೆ. ಅದನ್ನು ಮೊನ್ನೆ ಮೊನ್ನೆಯಷ್ಟೇ ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಸೇರಿದ ಸಾವಿರಾರು ಜನ ತೋರಿಸಿ ಆಗಿದೆ. ಕರಾವಳಿಯ ಉಭಯ ಕ್ಷೇತ್ರಗಳ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಹಾಗೂ ಶೋಭಾ ಕರಂದ್ಲಾಜೆಯವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಅವರ ಮೇಲೆ ರಾಜ್ಯ ಸರಕಾರ ಎಫ್ ಐ ಆರ್ ದಾಖಲಿಸಿದೆ. ಶೋಭಾ ಕರಂದ್ಲಾಜೆಯವರು ಮಾಧ್ಯಮಗಳಲ್ಲಿ ಮಾತನಾಡಿ ಅಲ್ಲಿ ಅಶಾಂತಿಗೆ ಕಾರಣರಾದರು ಎಂದು ಉಸ್ತುವಾರಿ ಸಚಿವ ಬಿ ರಮಾನಾಥ ರೈಯವರು ಪ್ರತಿಕ್ರಿಯೆ ನೀಡಿದ್ರು. ಇದರಿಂದ ಅಂತಿಮವಾಗಿ ಶರತ್ ಅವರ ಬಲಿದಾನ ಮುಖ್ಯಮಂತ್ರಿಯವರು ಹಿಂದೂಗಳೇ ಎಲ್ಲದಕ್ಕೂ ಕಾರಣ ಎಂದು ಪರೋಕ್ಷವಾಗಿ ಸುದ್ದಿಗೋಷ್ಟಿಯಲ್ಲಿ ಹೇಳುವ ಮಟ್ಟಿಗೆ ಹೋಯಿತು. ಅವರಿಗೆ ಒಂದು ಧರ್ಮದ ಹೆಸರೇ ಮರೆತು ಹೋದಂತೆ ನಾಟಕವಾಡುವಲ್ಲಿ ಸಮಾಪ್ತವಾಯಿತು. ರಾತ್ರಿ ಅಂಗಡಿ ಮುಚ್ಚಿ ಮನೆಗೆ ತೆರಳಲು ಅಣಿಯಾಗುತ್ತಿದ್ದ ಯುವಕನೊಬ್ಬ ಮತಾಂಧತೆಯ ಹುಚ್ಚಿನಲ್ಲಿ ಹಂತಕರು ಬೀಸಿದ ಮಚ್ಚಿನೇಟಿಗೆ ಬಲಿಯಾದದ್ದನ್ನು ಸಿಎಂ ಹಾಗೂ ಸಚಿವರು ಕೇವಲವಾಗಿ ಕಾಣುವುದರೊಂದಿಗೆ ಮೂಲೆಗೆ ತಳ್ಳಿಬಿಟ್ಟರು. ತಮಗೆ ವೋಟ್ ಬ್ಯಾಂಕ್ ಮುಖ್ಯವೇ ಹೊರತು ಅಮಾಯಕರ ಪ್ರಾಣವಲ್ಲ ಎಂದು ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಆದರೆ ರಾಷ್ಟ್ರ ಕಟ್ಟುವ ಪ್ರಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಯುವಕರನ್ನು ಒಳಗೊಂಡ ಯುವ ಬ್ರಿಗೇಡ್ ಮಾತ್ರ ಕರ್ನಾಟಕ ರಾಜ್ಯದಲ್ಲಿ ಅಮಾಯಕ ಯುವಕರ ಮೇಲೆ ನಡೆಯುತ್ತಿರುವ ಹಲ್ಲೆ, ಕೊಲೆಯತ್ನ, ಕೊಲೆಗಳು ಮತ್ತು ಅದಕ್ಕೆ ಮೌನ ಸಮ್ಮತಿಯಂತೆ ವರ್ಥಿಸುತ್ತಿರುವ ಸಿಎಂ ಮತ್ತು ಸಚಿವರ ನಿಜವಾದ ಬಣ್ಣವನ್ನು ನೇರವಾಗಿ ಸಂಬಂಧಪಟ್ಟವರಿಗೆ ಮುಟ್ಟಿಸುವ ಪ್ರಕ್ರಿಯೆಗೆ ಕೈ ಹಾಕಿತು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಬರ್ನಿಂಗ್ ಕರ್ನಾಟಕ #burningKarnataka ಎಂದು ಹ್ಯಾಶ್ ಟ್ಯಾಗ್ ಹಾಕಿ ಸಾಮಾಜಿಕ ತಾಣಗಳಲ್ಲಿ ಪ್ರಾರಂಭವಾದ ಈ ಅಭಿಯಾನಕ್ಕೆ ಎರಡು ಗಂಟೆಗಳಲ್ಲಿ 35 ಸಾವಿರ ಜನ ಭಾರತ ಮತ್ತು ಪ್ರಪಂಚದ ವಿವಿದೆಡೆ ಸ್ಪಂದಿಸಿದ್ದಾರೆ. ಈ ಸಂಖ್ಯೆ ಸಮಯ ಕಳೆದಂತೆ ಹೆಚ್ಚಾಗುತ್ತಾ ಇದೆ. ಜುಲೈ 10 ರಂದು ಸಾಮಾಜಿಕ ತಾಣಗಳಲ್ಲಿ ಅತ್ಯಂತ ಹೆಚ್ಚು ಟ್ರೆಂಡ್ ಹುಟ್ಟು ಹಾಕಿದ ಬರ್ನಿಂಗ್ ಕರ್ನಾಟಕಕ್ಕೆ ಸಿಕ್ಕಿದ ಸ್ಪಂದನೆಗೆ ಸಾಮಾಜಿಕ ತಾಣಗಳನ್ನು ಬಳಸುವ ನಾಗರಿಕ ವಲಯ ಆಶ್ಚರ್ಯಪಟ್ಟಿದೆ. ಈ ಸಂಖ್ಯೆ ಲಕ್ಷದ ಗಡಿಯನ್ನು ಸುಲಭವಾಗಿ ದಾಟುವ ಮೂಲಕ ಜನರ ಆಕ್ರೋಶಕ್ಕೆ ಕನ್ನಡಿ ಹಿಡಿದಿದೆ. ಯುವ ಶಕ್ತಿ ಮನಸ್ಸು ಮಾಡಿದರೆ ಒಂದು ಭಿನ್ನ ದಾರಿಯ ಮೂಲಕ ತನ್ನ ಮನದಲ್ಲಿ ಹುದುಗಿರುವ ಭಾವನೆಗಳನ್ನು ಪ್ರಪಂಚದ ದಶದಿಕ್ಕುಗಳಿಗೆ ತಲುಪಿಸಬಹುದು ಎಂದು ಈ ಮೂಲಕ ಸಾಧಿಸಿ ತೋರಿದ್ದಾರೆ. ಶರತ್ ಹಂತಕರನ್ನು ಬಂಧಿಸಲು ಮೀನಾಮೇಷ ಮಾಡಿದ್ದ ಮುಖ್ಯಮಂತ್ರಿ ಕೊನೆಗೆ ತಪ್ಪು ಮಾಡಿದವರ ಹೆಸರನ್ನು ಹೇಳಲು ಕೂಡ ತಡವರಿಸುವುದನ್ನು ಮತ್ತು ಅದರಿಂದ ತಪ್ಪಿಸಿಕೊಳ್ಳುವುದನ್ನು ಸಮಾಜದ ಸುಸಂಸ್ಕೃತ ವಲಯ ಹಿಗ್ಗಾಮುಗ್ಗಾ ಝಾಡಿಸಿದೆ. ಒಂದು ಪ್ರತಿಭಟನೆ ಪುಣೆ, ದೆಹಲಿ, ಚೆನೈ, ಬೆಂಗಳೂರು, ಮುಂಬೈ ನಗರಗಳಲ್ಲಿ ಮಾಡಿರುವ ಸದ್ದಿನಿಂದ ಯುವ ಬ್ರಿಗೇಡ್ ಈ ಮೂಲಕವೂ ರಾಜ್ಯವನ್ನು ಆಳುವವರಿಗೆ ಬಿಸಿ ಮುಟ್ಟಿಸಬಹುದು ಎಂದು ತೋರಿಸಿಕೊಟ್ಟಿದೆ. ಆವತ್ತು ತಪ್ಪು ಮಾಡಿದವರ ಹೆಸರನ್ನು ಹೇಳಲು ತಡವರಿಸಿದ ಸಿಎಂಗೆ ಇನ್ನು ಈ ಅಭಿಯಾನ ಇಡೀ ದೇಹವೇ ತಡವರಿಸಿದಂತೆ ಆಗಿದ್ದರಲ್ಲಿ ಸಂಶಯವೇ ಇಲ್ಲ.

  • Share On Facebook
  • Tweet It


- Advertisement -


Trending Now
ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
Tulunadu News June 30, 2022
ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
Tulunadu News June 29, 2022
Leave A Reply

  • Recent Posts

    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
  • Popular Posts

    • 1
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 2
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 3
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 4
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 5
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search