ಬೇರೆ ಮದುವೆಯಾಗುವೆ, ತಲಾಖ್ ಗೆ ಒಪ್ಪಿಗೆ ಎಂದು ಪತ್ನಿಗೆ ಕಿರುಕುಳ, ಕೇಳೋರಿಲ್ಲವೇ ಅನ್ಯಾಯ?
ಲಖನೌ: ದೇಶದಲ್ಲಿ ದಲಿತರ ಮೇಲೆ ಹಲ್ಲೆಯಾದರೆ, ಕಿರುಕುಳವಾದರೆ ಪ್ರಗತಿಪರರೆನಿಸಿಕೊಂಡವರು, ಬುದ್ಧಿಜೀವಿಗಳು ಸೀದಾ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡುತ್ತಾರೆ. ಆದರೆ ಅದೇ ಮುಸ್ಲಿಂ ಮಹಿಳೆಯರಿಗೆ ಎಷ್ಟೇ ಅನ್ಯಾಯವಾಗಲಿ, ಆಗ ಯಾರೂ ಸೊಲ್ಲೆತ್ತುವುದಿಲ್ಲ. ಮುಸ್ಲಿಂ ಮಹಿಳೆಯರಿಗೆ ನ್ಯಾಯಬೇಕು ಎನ್ನುವುದಿಲ್ಲ. ಪ್ರಕಾಶ್ ರೈ ಅಂಥವರೂ ಯಾವ ಕತ್ತಲಿಗೆ ಸರಿಯುತ್ತಾರೋ ಗೊತ್ತಿಲ್ಲ? ಮತ್ತೆ ಇವರಿಗೆ ಪ್ರಗತಿಪರರು ಎಂಬ ಹೆಸರು ಬೇರೆ ಕೇಡು.
ಇಂಥಾದ್ದೇ ಒಂದು ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಆದರೂ ಯಾರೂ ಮಾತನಾಡುತ್ತಿಲ್ಲ. ಹೌದು, ಪಶ್ಚಿಮ ಬಂಗಾಳದ ಬುರಿಯಿಪುರ್ ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹೆಂಡತಿಗೆ ತಲಾಖ್ ಗೆ ಒಪ್ಪಿಕೋ ಎಂದು ಕಿರುಕುಳ ನೀಡಿದ್ದಾನೆ.
ನೂರ್ ನೆಹರಾ ಬಿವಿ ಎಂಬ ಮುಸ್ಲಿಂ ಮಹಿಳೆಗೆ ಆಕೆಯ ಪತಿ ಸಬೀರ್ ತಲಾಖ್ ನೀಡಿದ್ದು, ಅದಕ್ಕೆ ಒಪ್ಪಿಕೊಳ್ಳುವಂತೆ ಸಿಗರೇಟಿನಿಂದ ಸುಟ್ಟಿದ್ದಾನೆ. ಈ ಕುರಿತು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸುಮಾರು 6 ವರ್ಷಗಳ ಹಿಂದೆ ಇಬ್ಬರೂ ಮದುವೆಯಾಗಿದ್ದು, ಆರಂಭದಿಂದಲೂ ಸಬೀರ್ ಕಿರುಕುಳ ನೀಡುತ್ತಿದ್ದಾನಂತೆ. ಅಲ್ಲದೆ ಮದುವೆ ವೇಳೆ 30 ಸಾವಿರ ರುಪಾಯಿ ವರದಕ್ಷಿಣೆ ನೀಡಿದ್ದು,ಮತ್ತೆ ತರುವಂತೆ ಪೀಡಿಸುತ್ತಿದ್ದಾನೆ. ಹಾಗಾಗಿ ನಾನೇ ಇಬ್ಬರು ಮಕ್ಕಳನ್ನು ಕರೆದುಕೊಂಡು ದೂರವಾದೆ. ಆದರೂ ಮನೆಗೆ ಬರುವ ಸಬೀರ್ ತಲಾಖ್ ಗೆ ಒಪ್ಪಿಗೆ ಸೂಚಿಸು ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಬುರುಯಿಪುರ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಟ್ಟಿನಲ್ಲಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಗಲಿ ಎಂದು ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಕ್ಕೆ ಮುಂದಾಗಿದ್ದರೂ, ತಲಾಖ್ ಎಂಬ ಪೀಡೆ ಇನ್ನೂ ಮುಸ್ಲಿಂ ಮಹಿಳೆಯರಿಗೆ ಕಂಟಕವಾಗುತ್ತಲೇ ಇದೆ ಎಂಬುದು ಬೇಸರದ ಸಂಗತಿ.
Leave A Reply