ಕೇರಳ ಮದರಸಾಗಳಲ್ಲಿ ವಹಾಬಿಸಂ ಪಾಠ: ಕುಟುಕು ಕಾರ್ಯಾಚರಣೆಯಿಂದ ಬಹಿರಂಗ
ತಿರುವನಂತಪುರ: ಕೇರಳದಲ್ಲಿ ಲವ್ ಜಿಹಾದ್ ಪ್ರಕರಣ ಹಾಗೂ ಕ್ರಿಶ್ಚಿಯನ್ನರ ಮತಾಂತರಗಳು ದೇಶವನ್ನೇ ಬೆಚ್ಚಿಬೀಳುತ್ತಿರುವ ಬೆನ್ನಲ್ಲೇ ಮತ್ತೊಂದು ಭಯಂಕರ ಅಂಶ ಬಹಿರಂಗವಾಗಿದ್ದು, ಕೇರಳದಲ್ಲಿರುವ ಮದರಸಾಗಳಲ್ಲಿ ವಹಬಿಸಂ ಹಾಗೂ ಫ್ಯಾಸಿಸ್ಟ್ ಮನೋಭಾವನೆ ಕುರಿತು ಬೋಧನೆ ಮಾಡಲಾಗುತ್ತಿದೆ ಎಂದು ಖಾಸಗಿ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.
ಹೌದು, ಸೌದಿ ಅರೇಬಿಯಾ ಸೇರಿ ಹಲವು ಗಲ್ಫ್ ರಾಷ್ಟ್ರಗಳು ಕೇರಳದ ಮದರಸಾಗಳಿಗೆ ಹಣ ಪೂರೈಸುತ್ತಿದ್ದು, ಮುಸ್ಲಿಮರ ಮನಸ್ಥಿತಿ ಬದಲಾಯಿಸಲು ಹಾಗೂ ಹಾಗೆ ಬದಲಾಯಿಸಿ ಹಿಂದೂಗಳ ಮತಾಂತರಕ್ಕೆ ಅಣಿ ಮಾಡುವುದು ಈ ಬೋಧನೆಯ ಉದ್ದೇಶವಾಗಿದೆ ಎಂದು ಕುಟುಕು ಕಾರ್ಯಚರಣೆ ವೇಳೆ ಬಹಿರಂಗವಾಗಿದೆ.
ಇದಕ್ಕಾಗಿ ಕೇರಳದ ಹಲವು ಮದರಸಾಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಹುತೇಕ ಮದರಸಾಗಳು ಧರ್ಮ ಬೋಧನೆ ಹಾಗೂ ಕುರಾನ್ ನ ಸದ್ವಿಚಾರ ಬೋಧಿಸದೆ ವಿಕ್ಷಿಪ್ತ ಮನಸ್ಥಿತಿಯನ್ನು ಬೋಧಿಸುತ್ತಿವೆ ಎಂದು ತಿಳಿದುಬಂದಿದೆ.
ನಾವು ಸಾರ್ವಜನಿಕವಾಗಿ ಖಲೀಫನ ಬಗ್ಗೆ ಮಾತನಾಡಿದರೆ ನಮ್ಮ ಸುತ್ತ ಇರುವ ಹಿಂದೂಗಳು ನಮ್ಮನ್ನು ಐಸಿಸ್ ಸಂಘಟನೆ ಕಾರ್ಯಕರ್ತರು ಎಂದೇ ಭಾವಿಸುತ್ತಾರೆ. ಹಾಗಾಗಿ ನಾವು ಪರೋಕ್ಷವಾಗಿ, ಮಕ್ಕಳ ಹೃದಯದಲ್ಲಿ ಸಣ್ಣ ಪ್ರಮಾಣದ ಮೂಲಕ ಖಲೀಫನ ತತ್ವ, ವಹಾಬಿಸಂ ಬಿತ್ತುತ್ತೇವೆ ಎಂದು ಕಾರ್ಯಾಚರಣೆ ವೇಳೆ ಕೊಝಿಕೋಡ್ ನ ಕರುಣಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಮೊಹಮ್ಮದ್ ಬಷೀರ್ ಒಪ್ಪಿಕೊಂಡಿದ್ದು, ದೇಶವನ್ನೇ ಬೆಚ್ಚಿಬೀಳಿಸುವಂತಿದೆ.
ಅಲ್ಲದೆ ಸೌದಿ ಅರೇಬಿಯಾ ಸೇರಿ ಗಲ್ಫ್ ರಾಷ್ಟ್ರಗಳು ಹೇಗೆ ಹಣ ಸಂದಾಯ ಮಾಡುತ್ತವೆ, ಆ ಮೂಲಕ ಮನಸ್ಥಿತಿ ಬದಲಾವಣೆ ಹಾಗೂ ಮತಾಂತರವನ್ನು ಹೇಗೆ ಪ್ರಚೋದಿಸುತ್ತವೆ ಎಂಬ ಕುರಿತು ಸಹ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ಒಟ್ಟಿನಲ್ಲಿ ಲವ್ ಜಿಹಾದ್ ಹಾಗೂ ಮತಾಂತರದಿಂದ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಈಗ ಮದರಸಾಗಳು ವಹಾಬಿಸಂ ಹಾಗೂ ಫ್ಯಾಸಿಸ್ಟ್ ಮನೋಭಾವನೆ ಬಿತ್ತಿ ರಾಜ್ಯವನ್ನು ಹಾಳು ಮಾಡುತ್ತಿರುವುದು ದಿಟವಾಗಿದೆ. ಇಷ್ಟಾದರೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.
Leave A Reply