ಗ್ರಾಮಸ್ಥರ ಒಪ್ಪಿಗೆಯ ಮೇರೆಗೆ ಉತ್ತರ ಪ್ರದೇಶದ ಸಮುದಾಯ ಶೌಚಾಲಯಗಳಿಗೆ ಕೇಸರಿ ಬಣ್ಣ

ಲಖನೌ: ಉತ್ತರ ಪ್ರದೇಶದ ಕೇಸರಿ (ಸಿಂಹ) ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ಬಳಿಕ ಉತ್ತರ ಪ್ರದೇಶದಲ್ಲಿ ಕೇಸರಿ ಬಣ್ಣ ರಾರಾಜಿಸುತ್ತಿದ್ದು, ಇತ್ತೀಚೆಗೆ ನಿರ್ಮಿಸಿದ ಸಮುದಾಯ ಶೌಚಾಲಯಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ.
ಸಮಾಜವಾದಿ ಪಕ್ಷದ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕ್ಷೇತ್ರವಾದ ಏತಾವಾ ಜಿಲ್ಲೆಯ ಅಮೃತಪುರ ಗ್ರಾಮದ 100 ಶೌಚಾಲಯಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ.
ಗ್ರಾಮದಲ್ಲಿ ಸುಮಾರು 350 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 100 ಶೌಚಾಲಯಗಳಿಗೆ ಕೇಸರಿ ಬಣ್ಣ ಬಳಿಯಲಾಗಿದೆ. ಈ ಕುರಿತು ವರ್ಷದ ಆರಂಭದಲ್ಲೇ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದೇವು. ಅವರೆಲ್ಲರೂ ಒಪ್ಪಿಗೆ ಸೂಚಿಸಿದ ಬಳಿಕವೇ ಶೌಚಾಲಯಗಳಿಗೆ ಬಣ್ಣ ಬಳಿಯಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಶೌಚಾಲಯಗಳಿಗೂ ಬಣ್ಣ ಬಳಿಯಲಾಗುವುದು ಎಂದು ಗ್ರಾಮದ ಮುಖಂಡ ವೇದ್ ಪಾಲ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಹಲವು ಕಟ್ಟಡಳಿಗೆ ಕೇಸರಿ ಬಣ್ಣ ಹಚ್ಚುತ್ತಿದ್ದು, ಇತ್ತೀಚೆಗೆ ಸರ್ಕಾರಿ ಕಚೇರಿ ಸಂಕೀರ್ಣ, ಲಖನೌ ಪೊಲೀಸ್ ಠಾಣೆ, ಗೋರಖಪುರದ ದೊಡ್ಡ ಗಡಿಯಾರದ ಕಂಬ ಹಾಗೂ ಮದರಸಾಗಳಿಗೂ ಕೇಸರಿ ಬಣ್ಣ ಬಳಿಯಲಾಗಿತ್ತು. ಕೇಸರಿ ಹಿಂದುತ್ವದ ಸಂಕೇತವೂ ಆಗಿರುವ ಕಾರಣ ಹಲವು ಜನ ವಿನಾಕಾರಣ ವಿರೋಧ ವ್ಯಕ್ತಪಡಿಸಿದ್ದಾರೆ.
Leave A Reply