ಉತ್ತರ ಪ್ರದೇಶದಲ್ಲೊಂದು ಲವ್ ಜಿಹಾದ್? ಆಜಾದ್ ಹುಸೇನ್ ಆಯ್ತು ಆಜಾದ್ ಭಾರದ್ವಾಜ್!
ಲಖನೌ: ಕರ್ನಾಟಕ ಸೇರಿ ಕೇರಳ, ಮುಂಬೈನಲ್ಲಿ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ಲವ್ ಜಿಹಾದ್ ಹೋಲುವ ಪ್ರಕರಣವೊಂದು ಸುದ್ದಿಯಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ.
ಮುಸ್ಲಿಂ ವ್ಯಕ್ತಿಯೊಬ್ಬ ತಾನು ಹಿಂದೂ ಎಂಬ ಹೆಸರು ಹೇಳಿಕೊಂಡು ಡಾನ್ಸ್ ಕಲಿಸುತ್ತಿದ್ದ. ಬರೀ ನೃತ್ಯ ಕಲಿಸಿ ಸುಮ್ಮನಾಗದ ಈತ ತನ್ನ ಬಳಿ ಬರುವ 8ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಿಸಿ ಆರು ದಿನಗಳವರೆಗೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಸಾಂಬಾಲ್ ಎಂಬಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ವ್ಯಕ್ತಿಯ ಹೆಸರು ಆಝಾದ್ ಹುಸೇನ್ ಆಗಿದ್ದು, ಆತ ಬೇಕು ಅಂತಲೇ ಆಜಾದ್ ಭಾರದ್ವಾಜ್ ಎಂದು ಹೆಸರು ಬದಲಾಯಿಸಿಕೊಂಡು ನೃತ್ಯ ತರಬೇತಿ ಆರಂಭಿಸಿದ್ದ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಟಿವಿಯಲ್ಲಿ ಮಿಂಚುವ ಹಾಗೆ ಅವಕಾಶ ನೀಡುವುದಾಗಿ ಗುಪ್ತವಾಗಿ ಕರೆದುಕೊಂಡು ಹೋದ ಆತ ಅತ್ಯಾಚಾರ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಬಾಲಕಿ ಸಂಬಂಧಿಕರು ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ಒಟ್ಟಿನಲ್ಲಿ ಹಿಂದೂ ಯುವತಿಯರ ಅತ್ಯಾಚಾರ, ಮದುವೆ, ಬಲವಂತದ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಕೇಳಿಬರುತ್ತಿರುವ ಬೆನ್ನಲ್ಲೇ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಬಾಲಕಿಯನ್ನು ಅತ್ಯಾಚಾರ ಎಸಗಿದ್ದು ಲವ್ ಜಿಹಾದ್ ಪ್ರತಿರೂಪವಾಗಿ ಕಾಣುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
Leave A Reply