ಜೆಎಎಮ್ ಭಯೋತ್ಪಾದಕ ಸಂಘಟನೆಯ ನಾಲ್ಕು ಉಗ್ರರನ್ನು ಹತ್ಯೆ ಮಾಡಿದ ಯೋಧರು
Posted On January 15, 2018

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಶಾಂತಿಗೆ ಭಂಗ ತಂದು ಜನರ ನೆಮ್ಮದಿಗೆ ಕೊಳ್ಳಿ ಇಡುತ್ತಿರುವ ಭಯೋತ್ಪಾದಕರಿಗೆ ಸೈನಿಕರು ದುಸ್ವಪ್ನವಾಗಿದ್ದು, ನಿರಂತರವಾಗಿ ಉಗ್ರರನ್ನು ಹೊಡೆದುರುಳಿಸುವ ಮೂಲಕ ತಕ್ಕ ಶಾಸ್ತಿ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವ ಪ್ರಕ್ರಿಯೆಯಲ್ಲಿದ್ದು, ಸೈನ್ಯ ಕಟ್ಟುನಿಟ್ಟಿನ ಕಾರ್ಯ ಚಟುವಟಿಕೆ ನಡೆಸುತ್ತಿದೆ.
ಇದೀಗ ಜಮ್ಮು ಕಾಶ್ಮೀರದ ಉರಿ ಪ್ರದೇಶದ ಬಾರಾಮುಲ್ಲಾ ಜಿಲ್ಲೆಯ ದುಲಂಜ್ ಗ್ರಾಮದಲ್ಲಿ ಹೊಂಚು ಹಾಕಿ ಕುಳಿತ್ತಿದ್ದ ಭಯೋತ್ಪಾದಕ ಕ್ರಿಮಿಗಳನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಕೇಂದ್ರೀಯ ಮೀಸಲು ಭದ್ರತಾ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಜೈಷ್ ಎ ಮಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರ ಕ್ರಿಮಿಗಳನ್ನು ಹತ್ಯೆ ಮಾಡಲಾಗಿದೆ.
ಉಗ್ರರು ಗಡಿಯಲ್ಲಿ ಅಕ್ರಮವಾಗಿ ನುಸುಳಿದ್ದರು. ಜಂಟಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಸುರೇಶ್ ಪೌಲ್ ತಿಳಿಸಿದ್ದಾರೆ.
- Advertisement -
Leave A Reply